ನಿವೃತ್ತಿಯಿಂದ ಹಿಂದಕ್ಕೆ ಸರಿದ ರಿತು ರಾಣಿ
Team Udayavani, Mar 10, 2017, 6:18 AM IST
ಹೊಸದಿಲ್ಲಿ: ರಿಯೋ ಒಲಿಂಪಿಕ್ಸ್ ಆರಂಭಕ್ಕೂ ಮೊದಲು ಅಶಿಸ್ತಿನ ಆರೋಪಕ್ಕೆ ಸಿಲುಕಿ ವಿವಾದಕ್ಕೊಳಗಾಗಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಿತು ರಾಣಿ ಈಗ ತಮ್ಮ ನಿವೃತ್ತಿ ನಿರ್ಧಾರದಿಂದ ದಿಢೀರ್ ಹಿಂದಕ್ಕೆ ಸರಿದಿದ್ದಾರೆ.
ಇದು ಹಾಕಿ ವಲಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ರಿತು ರಾಣಿ ಒಲಿಂಪಿಕ್ಸ್ ತರಬೇತಿ ಶಿಬಿರಕ್ಕೆ ಪದೇ ಪದೇ ಗೈರು ಹಾಜರಾಗುತ್ತಿದ್ದರು ಎನ್ನುವ ದೂರು ಕೇಳಿ ಬಂದಿತ್ತು. ಚಕ್ಕರ್ ಹೊಡೆದು ಪ್ರಿಯತಮನ ಜತೆ ಚೆಲ್ಲಾಟವಾಡುತ್ತಿದ್ದರು ಎನ್ನಲಾಗಿತ್ತು. ಆದರೆ ಇದು ಅಧಿಕೃತಗೊಂಡಿರಲಿಲ್ಲ. ಒಟ್ಟಾರೆ ಎಲ್ಲ ಘಟನೆ ಬಗ್ಗೆ ಕೋಚ್ ನೀಲ್ ಹಾವ್ಗುಡ್ ತೀವ್ರ ಅಸಮಾಧಾನಕ್ಕೆ ಒಳಗಾಗಿದ್ದರು. ಪ್ರಕರಣವನ್ನು ಹಾಕಿ ಇಂಡಿಯಾ ಗಂಭೀರವಾಗಿ ತೆಗೆದು ಕೊಂಡಿತ್ತು. ವಿಚಾರಣೆ ನಡೆಸಿತು. ರಿತುವನ್ನು ರಿಯೋ ಒಲಿಂಪಿಕ್ಸ್ ತಂಡದಿಂದಲೇ ಕೈಬಿಟ್ಟಿತ್ತು.
ಈ ವೇಳೆ ರೀತು ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಕಿ ಇಂಡಿಯಾ ವಿರುದ್ಧವೇ ಹರಿಹಾಯ್ದಿದ್ದರು. ಬಳಿಕ ಹಾಕಿ ಕ್ರೀಡಾ ಜೀವನಕ್ಕೆ ವಿದಾಯ ಘೋಷಿಸಿದ್ದರು. ಅನಂತರ ಗೆಳೆಯನನ್ನು ವರಿಸಿದ್ದರು.
ಇದೀಗ ದಿಢೀರ್ ಎಂದು ರಿತು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. “ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ತೆಗೆದು ಕೊಂಡಿದ್ದೇನೆ. ಅವಕಾಶ ನೀಡಿದ ಹಾಕಿ ಇಂಡಿಯಾಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮತ್ತೆ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ತಂಡ ಕೂಡಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ರೀತು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್