ಶಾಟ್‌ಗನ್‌ ವಿಶ್ವಕಪ್‌: ಕಿನಾನ್‌, ಪೃಥ್ವಿರಾಜ್‌ ಮುನ್ನಡೆ

Team Udayavani, May 16, 2019, 6:00 AM IST

ಚಾಂಗ್‌ವೋನ್‌ (ಕೊರಿಯ): ಭಾರತದ ಕಿನಾನ್‌ ಚೆನಾಯ್‌ ಮತ್ತು ಪೃಥ್ವಿರಾಜ್‌ ತೊಂಡೈಮನ್‌ ‘ಐಎಸ್‌ಎಸ್‌ಎಫ್ ಶಾಟ್‌ಗನ್‌ ವಿಶ್ವಕಪ್‌’ ಕೂಟದ ಪುರುಷರ ಟ್ರ್ಯಾಪ್‌ ವಿಭಾಗದ 2 ಅರ್ಹತಾ ಸುತ್ತಿನಲ್ಲಿ ತಲಾ 25 ಅಂಕ ಪಡೆದು ಮುನ್ನಡೆ ಸಾಧಿಸಿದ್ದಾರೆ.

ಗುರುವಾರ ಇನ್ನೂ 3 ಸುತ್ತಿನ ಅರ್ಹತಾ ಸ್ಪರ್ಧೆಗಳು ನಡೆಯಲಿದ್ದು, ಪದಕ ಸುತ್ತಿಗೆ 6 ಸ್ಪರ್ಧಿಗಳು ಪ್ರವೇಶಿಸಲಿದ್ದಾರೆ. ಭಾರತೀಯ ಶೂಟರ್‌ಗಳು ಫೈನಲ್ ಪ್ರವೇಶಿಸುವ ಭರವಸೆ ಮೂಡಿಸಿದ್ದಾರೆ.

ಕಿನಾನ್‌, ಪೃಥ್ವಿರಾಜ್‌ ಗ್ರೇಟ್ ಬ್ರಿಟನ್‌ ಮತ್ತು ಕಜಕಿಸ್ಥಾನದ ಇಬ್ಬರು ಶೂಟರ್ಗಳೊಂದಿಗೆ ಮುನ್ನಡೆ ಹಂಚಿಕೊಂಡಿದ್ದಾರೆ. ಉಳಿದಂತೆ ಇದೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೋರ್ವ ಶೂಟರ್‌ ಜೋರವಾರ್‌ ಸಿಂಗ್‌ ಸಂಧು 50 ಅಂಕಗಳಲ್ಲಿ 45 ಅಂಕ ಗಳಿಸಿ 82ನೇ ಸ್ಥಾನ ಪಡೆದರು.

ಶಗುಣ್‌ಗೆ 35ನೇ ಸ್ಥಾನ
ವನಿತಾ ಟ್ರ್ಯಾಪ್‌ ವಿಭಾಗದಲ್ಲಿ ಮುನ್ನಡೆ ಸಾಧಿಸಿದ್ದ ಶಗುಣ್‌ ಚೌಧರಿ ಬುಧವಾರ ನಡೆದ ಅಂತಿಮ ಅರ್ಹತಾ ಸುತ್ತಿನಲ್ಲಿ ಒಟ್ಟು 115 ಅಂಕ ಪಡೆದು 35ನೇ ಸ್ಥಾನ ಪಡೆದರು. ರಾಜೇಶ್ವರಿ ಕುಮಾರಿ 99 ಅಂಕ ಗಳಿಸಿ 56ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ಫೈನಲ್ ಪ್ರವೇಶಿಸುವಲ್ಲಿ ವಿಫ‌ಲರಾದರು.

ಪುರುಷರ ಟ್ರ್ಯಾಪ್‌ ಸ್ಪರ್ಧೆಯ ಎಂಕ್ಯೂಎಸ್‌ ವಿಭಾಗದಲ್ಲಿ ಸ್ಪರ್ಧಿ ಸಿದ ಲಕ್ಷ್ಯ ಶೇರಾನ್‌ ಅವರು ಮೊದಲೆರಡು ಸುತ್ತಿನಲ್ಲಿ 48 ಅಂಕ ಗಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ