ಸಿಮೋನಾ ಹಾಲೆಪ್ ಮರಳಿ ಅಂಕಣಕ್ಕೆ
Team Udayavani, Mar 19, 2024, 11:38 PM IST
ಮಿಯಾಮಿ (ಫ್ಲೋರಿಡಾ): ಡೋಪಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿದ್ದ ರೊಮೇನಿಯಾದ ಸಿಮೋನಾ ಹಾಲೆಪ್ ಈ ವಾರ ನಿಷೇಧ ಮುಕ್ತರಾಗಿ ಮರಳಿ ಟೆನಿಸ್ ಅಂಕಣಕ್ಕೆ ಇಳಿಯಲಿದ್ದಾರೆ. ಈ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸಿದ ಹಾಲೆಪ್ಗೆ ಗೆಲುವು ಒಲಿದಿತ್ತು.
ಸಿಮೋನಾ ಹಾಲೆಪ್ “ಮಿಯಾಮಿ ಓಪನ್’ ಟೆನಿಸ್ ಪಂದ್ಯಾವಳಿಗೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಸ್ಪೇನ್ನ ಪೌಲಾ ಬಡೋಸಾ ಅವರನ್ನು ಎದುರಿಸಲಿದ್ದಾರೆ. ಇವರೆದುರು ಈವರೆಗೆ ಆಡಿದ ಎರಡೂ ಪಂದ್ಯಗಳಲ್ಲಿ ಹಾಲೆಪ್ ಜಯ ಸಾಧಿಸಿದ್ದಾರೆ. ಇದು 2022ರ ಯುಎಸ್ ಓಪನ್ ಬಳಿಕ ಹಾಲೆಪ್ ಆಡುತ್ತಿರುವ ಮೊದಲ ಪಂದ್ಯ. ಅಲ್ಲಿ ಇವರು ಉಕ್ರೇನ್ನ ಅರ್ಹತಾ ಆಟಗಾರ್ತಿ ದರಿಯಾ ಸ್ನಿಗರ್ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.
ನಿಷೇಧಿತ ಪದಾರ್ಥ ಸೇವನೆ ಪ್ರಕರಣದಲ್ಲಿ 2022ರ ಅಕ್ಟೋಬರ್ನಲ್ಲಿ ಸಿಮೋನಾ ಹಾಲೆಪ್ ಅವರಿಗೆ 4 ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆದರೆ “ಗ್ಲೋಬಲ್ ಸ್ಪೋರ್ಟ್ಸ್ ಕೋರ್ಟ್’ನಲ್ಲಿ ಹೋರಾಡಿದ ಹಾಲೆಪ್ಗೆ ರಿಯಾಯಿತಿ ಲಭಿಸಿದ್ದು, ಅದು ಶಿಕ್ಷೆಯ ಪ್ರಮಾಣವನ್ನು ಇಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ