ಸಿಂಗಾಪುರ ಬ್ಯಾಡ್ಮಿಂಟನ್‌: ಸಿಂಧುಗೆ ಮರಿನ್‌ ಶಾಕ್‌


Team Udayavani, Apr 15, 2017, 11:52 AM IST

pv-15.jpg

ನವದೆಹಲಿ: ಇಂಡಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ನಲ್ಲಿ ಸಿಂಧು ವಿರುದ್ಧ ಎದುರಾದ ಸೋಲಿಗೆ ಸ್ಪೇನ್‌ನ ಖ್ಯಾತ ಆಟಗಾರ್ತಿ, ರಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆ ಕ್ಯಾರೋಲಿನಾ ಮರಿನ್‌ ಸೇಡು ತೀರಿಸಿಕೊಂಡಿದ್ದಾರೆ. 

ಸಿಂಗಾಪುರ ಬ್ಯಾಡ್ಮಿಂಟನ್‌ನ ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ ನಲ್ಲಿ ಭಾರತದ ಆಟಗಾರ್ತಿ 21-11, 21-15 ನೇರ ಸೆಟ್‌ಗಳ ಅಂತರದಿಂದ ಮರಿನ್‌ಗೆ ಶರಣಾಗಿದ್ದಾರೆ. ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಇತ್ತೀಚೆಗೆ ಮರಿನ್‌ರನ್ನು ಸೋಲಿಸಿ ಇಂಡಿಯನ್‌ ಬ್ಯಾಡ್ಮಿಂಟನ್‌ ಕೂಟ ಗೆದ್ದಿದ್ದರು. ಹೀಗಾಗಿ ಈ ಕೂಟದಲ್ಲಿ ಮರಿನ್‌ರನ್ನು ಸೋಲಿಸಿ ಸೆಮಿಫೈನಲ್‌ಗೆ ಏರಬಹುದು ಎನ್ನುವುದು ನಿರೀಕ್ಷೆ ಆಗಿತ್ತು. ಈ ಎಲ್ಲ ನಿರೀಕ್ಷೆಯನ್ನು ಸ್ಪೇನ್‌ ಆಟಗಾರ್ತಿ ಹುಸಿಗೊಳಿಸಿದರು ಎನ್ನುವುದು ವಿಶೇಷ.

ಪಂದ್ಯದ ಆರಂಭದಿಂದಲೂ ಮರಿನ್‌ ಬಿರುಸಿನ ಆಟಕ್ಕೆ ಮುಂದಾದರು. ಸಿಂಧುವಿಗೆ ಎಲ್ಲಿಯೂ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.ಮೊದಲ ಗೇಮ್‌ನಲ್ಲಿ 11-21 ಅಂತರದಿಂದ ಸುಲಭವಾಗಿ ಮರಿನ್‌ ಗೇಮ್‌ ತನ್ನದಾಗಿಸಿಕೊಂಡರು. 2ನೇ ಗೇಮ್‌ನಲ್ಲೂ ಮರಿನ್‌ಗೆ ಸಿಂಧು ಸರಿಸಾಟಿಯಾಗಲಿಲ್ಲ. 19-13ರಿಂದ ಮುಂದಿದ್ದ ಸ್ಪೇನ್‌ ಆಟಗಾರ್ತಿ ಅಂತಿಮವಾಗಿ 21-15ರಿಂದ ಗೇಮ್‌ ತನ್ನದಾಗಿಸಿಕೊಂಡರು. 2-0ಯಿಂದ ಪಂದ್ಯ ಕೈವಶ ಮಾಡಿಕೊಂಡರು.

ಸಾಯಿ, ಶ್ರೀಕಾಂತ್‌ ಭರವಸೆ: ಪುರುಷರ ಸಿಂಗಲ್ಸ್‌ ಆಟಗಾರ ಸಾಯಿ ಪ್ರಣೀತ್‌ ಕೂಟದ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕಪ್‌ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇವರು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ‌ ಥಾಂಗಕ್‌ರನ್ನು 15-21,21-14, 21-19 ಗೇಮ್‌ಗಳ ಅಂತರದಿಂದ ಸೋಲಿಸಿದರು. ಮತ್ತೂಂದು ಕ್ವಾರ್ಟರ್‌ಫೈನಲ್‌ನಲ್ಲಿ ಶ್ರೀಕಾಂತ್‌ 21-14-21-16 ರಿಂದ ಚೀನಾದ ಶಿ ಯೂಕಿ ಅವರನ್ನು ಮಣಿಸಿದರು. ಇವರೂ ಕೂಡ ಭಾರತಕ್ಕೆ ಪ್ರಶಸ್ತಿ ತರುವ ಭರವಸೆ ಮೂಡಿಸಿದ್ದಾರೆ.

ಮೊದಲ ಗೇಮ್‌ ಕಳೆದುಕೊಂಡು ಪ್ರಣೀತ್‌ ಪಂದ್ಯ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದರು. ಆದರೆ 2 ಮತ್ತು 3ನೇ ಗೇಮ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಸಾಯಿ ಪ್ರಣೀತ್‌ ಗೆಲುವು ಸಾರಿದರು. ಶ್ರೀಕಾಂತ್‌ ಕೂಡ ಅಚ್ಚರಿಯ ಆಟ ಪ್ರದರ್ಶಿಸಿ ಪಂದ್ಯ ಗೆದ್ದರು.

ಮಿಶ್ರಡಬಲ್ಸ್‌: ಅಶ್ವಿ‌ನಿ ಜೋಡಿ ಔಟ್‌: ಮಿಶ್ರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ – ಬಿ.ಸುಮಿತ್‌ ರೆಡ್ಡಿ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಇವರು ಚೀನಾದ ಲ್ಯು ಕಾಯ್‌ ಮತ್ತು ಹ್ಯುವಾಂಗ್‌ ವಿರುದ್ಧ ಪರಾಭವಗೊಂಡರು.

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

1-paris-11

Paris Olympics; ಸೀನ್ ನದಿಯ ಉದ್ದಕ್ಕೂ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭ

Suryakumar Yadav

Leadership ನಾನು ಸಂಭ್ರಮಿಸುತ್ತೇನೆ, ಕೆಲವು ನಾಯಕರಿಂದ ಹಲವು ಕಲಿತಿದ್ದೇನೆ: ಸೂರ್ಯ ಕುಮಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.