Spain International Tennis: ಸಬಲೆಂಕಾ-ಅಜರೆಂಕಾ ಸೆಮಿ ಸಮರ
Team Udayavani, Jan 5, 2024, 11:40 PM IST
ಬ್ರಿಸ್ಬೇನ್: ಅರಿನಾ ಸಬಲೆಂಕಾ ಮತ್ತು ವಿಕ್ಟೋರಿಯಾ ಅಜರೆಂಕಾ 2024ನೇ ಋತುವಿನ “ಬ್ರಿಸ್ಬೇನ್ ಇಂಟರ್ನ್ಯಾಶನಲ್’ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಪುರುಷರ ಕ್ವಾರ್ಟರ್ ಫೈನಲ್ನಲ್ಲಿ ರಫೆಲ್ ನಡಾಲ್ ಸೋಲುಂಡು ಹೊರಬಿದ್ದಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಕೂಡ ಆಗಿರುವ ಅರಿನಾ ಸಬಲೆಂಕಾ ಶುಕ್ರವಾರ ರಾತ್ರಿಯ ಪಂದ್ಯದಲ್ಲಿ 5ನೇ ಶ್ರೇಯಾಂಕದ ದರಿಯಾ ಕಸತ್ಕಿನಾ ವಿರುದ್ಧ 6-1, 6-4 ಅಂತರದ ಗೆಲುವು ಸಾಧಿಸಿದರು.
2 ಬಾರಿಯ ಬ್ರಿಸ್ಬೇನ್ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ 6-3, 3-6, 7-5ರಿಂದ ಜೆಲೆನಾ ಓಸ್ಟಾಪೆಂಕೊ ಅವರಿಗೆ ಸೋಲುಣಿಸಿದರು.