Ranji ಸೆಮಿಫೈನಲ್‌ಗೆ ವೇದಿಕೆ ಸಜ್ಜು : ಮುಂಬಯಿ-ತಮಿಳುನಾಡು ಹೋರಾಟ


Team Udayavani, Mar 2, 2024, 6:00 AM IST

1-weewqeqw

ಮುಂಬಯಿ: ಪ್ರತಿಷ್ಠಿತ ದೇಶೀಯ ಕ್ರಿಕೆಟ್‌ ಪಂದ್ಯಾವಳಿ “ರಣಜಿ ಟ್ರೋಫಿ’ ಉಪಾಂತ್ಯಕ್ಕೆ ಬಂದು ತಲುಪಿದೆ. ಶನಿವಾರ ಮುಂಬಯಿಯಲ್ಲಿ “ರಣಜಿ ಕಿಂಗ್‌’ ಖ್ಯಾತಿಯ ಮುಂಬಯಿ ಮತ್ತು ತಮಿಳು ನಾಡು, ನಾಗ್ಪುರದಲ್ಲಿ ವಿದರ್ಭ ಮತ್ತು ಮಧ್ಯ ಪ್ರದೇಶ ಮುಖಾಮುಖಿ ಆಗಲಿವೆ.

ಇವುಗಳಲ್ಲಿ ಮುಂಬಯಿ-ತಮಿಳುನಾಡು ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರಬಹುದೆಂಬುದು ಕ್ರಿಕೆಟ್‌ ಅಭಿಮಾ ನಿಗಳ ನಿರೀಕ್ಷೆ. ತವರಿನ ಪಂದ್ಯವಾದ ಕಾರಣ ಮುಂಬಯಿಗೆ ಹೆಚ್ಚಿನ ಲಾಭವಾ ದೀತೆಂಬುದು ಮತ್ತೂಂದು ಲೆಕ್ಕಾಚಾರ. ಮುಂಬಯಿ ಕೊನೆಯ ತನಕವೂ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡ ಎಂಬುದಕ್ಕೆ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತಮ ನಿದರ್ಶನ ಸಿಕ್ಕಿದೆ. ತನುಷ್‌ ಕೋಟ್ಯಾನ್‌ ಮತ್ತು ತುಷಾರ್‌ ದೇಶಪಾಂಡೆ 10ನೇ, 11ನೇ ಕ್ರಮಾಂಕದಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದರು. ಹಾಗೆಯೇ ಒನ್‌ಡೌನ್‌ ಬ್ಯಾಟರ್‌ ಮುಶೀರ್‌ ಖಾನ್‌ ಅಜೇಯ ದ್ವಿಶತಕ ದಾಖಲಿಸಿದ್ದರು. ಇದು ತಮಿಳುನಾಡು ಪಾಲಿಗೊಂದು ಎಚ್ಚರಿಕೆಯ ಗಂಟೆ.

ತಮಿಳುನಾಡಿನ ಸ್ಪಿನ್‌ ಬಲ
ತಮಿಳುನಾಡಿನ ಕ್ವಾಲಿಟಿ ಸ್ಪಿನ್‌ ಆಕ್ರಮಣ ವನ್ನು ಹೇಗೆ ನಿಭಾಯಿಸೀತು ಎಂಬುದರ ಮೇಲೆ ಮುಂಬಯಿಯ ಭವಿಷ್ಯ ಅಡಗಿದೆ. ಸಾಯಿ ಕಿಶೋರ್‌ (47 ವಿಕೆಟ್‌) ಮತ್ತು ಎಡಗೈ ಸ್ಪಿನ್ನರ್‌ ಎಸ್‌. ಅಜಿತ್‌ ರಾಮ್‌ (41 ವಿಕೆಟ್‌) ತಮಿಳುನಾಡಿನ ಎರಡು ಪ್ರಬಲ ಬೌಲಿಂಗ್‌ ಅಸ್ತ್ರಗಳು. ಈ ಸೀಸನ್‌ನ ಅಗ್ರ ಬೌಲಿಂಗ್‌ ಸಾಧಕರು. ಮುಂಬಯಿಯ ಯಾವುದೇ ಬೌಲರ್‌ ಟಾಪ್‌-10 ಯಾದಿಯಲ್ಲಿಲ್ಲ. 32 ವಿಕೆಟ್‌ ಉರುಳಿಸಿರುವ ಮೋಹಿತ್‌ ಅವಸ್ಥಿ 13ನೇ ಸ್ಥಾನಿಯಾಗಿದ್ದಾರೆ.

ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿರುವ ಶ್ರೇಯಸ್‌ ಅಯ್ಯರ್‌ ಮುಂಬಯಿ ತಂಡಕ್ಕೆ ಮರಳಿದ್ದಾರೆ. ಇವರ ಫಾರ್ಮ್ ನಿರ್ಣಾಯಕ. ಹಾಗೆಯೇ 6 ಪಂದ್ಯಗಳಲ್ಲಿ ಕೇವಲ ಒಂದು ಫಿಫ್ಟಿ ಹೊಡೆದಿರುವ ನಾಯಕ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್‌ ಫಾರ್ಮ್ ತೋರಬೇಕಿದೆ. ಓಪನರ್‌ಗಳಾದ ಪೃಥ್ವಿ ಶಾ, ಭೂಪೇನ್‌ ಲಾಲ್ವಾನಿ ಉತ್ತಮ ಅಡಿಪಾಯ ನಿರ್ಮಿಸಬೇಕಾದ ಅಗತ್ಯವಿದೆ.

ತಮಿಳುನಾಡಿನ ಬ್ಯಾಟಿಂಗ್‌ ಸರದಿ ಕೂಡ ಬಲಿಷ್ಠ. ಒಂದು ತ್ರಿಶತಕ (321), ಒಂದು ದ್ವಿಶತಕ (ಅಜೇಯ 245) ಸೇರಿದಂತೆ 821 ರನ್‌ ಪೇರಿಸಿರುವ ಎನ್‌. ಜಗದೀಶನ್‌ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಬಾಬಾ ಇಂದ್ರಜಿತ್‌ ಕಳೆದ 3 ಪಂದ್ಯಗಳಲ್ಲಿ 80, 187, 98 ಮತ್ತು 48 ರನ್‌ ಹೊಡೆದ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ್ದಾರೆ.

ಮಧ್ಯ ಪ್ರದೇಶಕ್ಕೆ ವಿದರ್ಭ ಸವಾಲು
ನಾಗ್ಪುರ: ಇನ್ನೊಂದು ರಣಜಿ ಸೆಮಿಫೈನಲ್‌ನಲ್ಲಿ ಎರಡು ಬಾರಿಯ ಚಾಂಪಿಯನ್‌ ವಿದರ್ಭ ತವರಿನಂಗಳದಲ್ಲಿ ಮಧ್ಯ ಪ್ರದೇಶ ವಿರುದ್ಧ ಸೆಣಸಲಿದೆ. ಪ್ರಸಕ್ತ ಋತುವಿನಲ್ಲಿ “ವಿಸಿಎ’ಯಲ್ಲಿ ಆಡಿರುವ 4 ಪಂದ್ಯಗಳಲ್ಲಿ ವಿದರ್ಭ ಮೂರನ್ನು ಗೆದ್ದಿದೆ. ಸೌರಾಷ್ಟ್ರ ವಿರುದ್ಧ ಸೋಲನುಭವಿಸಿದೆ.

ಬ್ಯಾಟರ್‌ಗಳ ಸಾಂಘಿ ಕ ಆಟ ವಿದರ್ಭದ ಹೆಚ್ಚುಗಾರಿಕೆ. ಕರ್ನಾಟಕವನ್ನು ತೊರೆದು ಹೋದ ಕರುಣ್‌ ನಾಯರ್‌ (515), ದಿಲ್ಲಿಯಿಂದ ಬಂದ ಧ್ರುವ ಶೋರಿ (496 ರನ್‌), ಓಪನರ್‌ ಅಥರ್ವ ತೈಡೆ (488 ರನ್‌), ನಾಯಕ ಅಕ್ಷಯ್‌ ವಾಡ್ಕರ್‌ (452 ರನ್‌) ಬೇರೆ ಬೇರೆ ಸಂದರ್ಭಗಳಲ್ಲಿ ಕ್ರೀಸ್‌ ಆಕ್ರಮಿಸಿಕೊಂಡು ತಂಡದ ರಕ್ಷಣೆಗೆ ನಿಂತಿದ್ದಾರೆ.
ನಾಗ್ಪುರ ಪಿಚ್‌ ವಿದರ್ಭದ ಪೇಸರ್‌ ಆದಿತ್ಯ ಠಾಕರೆ, ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ ಅವರಿಗೆ ಭಾರೀ ನೆರವು ನೀಡುವ ಸಾಧ್ಯತೆ ಇದೆ.

ಎಂಪಿ ಅದೃಷ್ಟಶಾಲಿ ತಂಡ
2022ರ ಚಾಂಪಿಯನ್‌ ಮಧ್ಯ ಪ್ರದೇಶ ಇಲ್ಲಿಯ ತನಕ ಬಂದದ್ದೇ ಅದೃಷ್ಟದ ಬಲದಿಂದ. ಆಂಧ್ರ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ ಇನ್ನೇನು ಸೋತೇ ಹೋಯಿತು ಎನ್ನುವಾಗ 4 ರನ್ನುಗಳ ರೋಚಕ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ವೆಂಕಟೇಶ್‌ ಅಯ್ಯರ್‌ (528 ರನ್‌), ಹಿಮಾಂಶು ಮಂತ್ರಿ (513), ಯಶ್‌ ದುಬೆ (510 ರನ್‌) ಮಧ್ಯ ಪ್ರದೇಶದ ಪ್ರಮುಖ ಬ್ಯಾಟರ್. ಆದರೆ ರಜತ್‌ ಪಾಟಿದಾರ್‌ ಟೆಸ್ಟ್‌ ತಂಡದಲ್ಲಿರುವ ಕಾರಣ ಲಭ್ಯರಿರುವುದಿಲ್ಲ.
ಎಡಗೈ ಸ್ಪಿನ್ನರ್‌ ಕುಮಾರ ಕಾರ್ತಿಕೇಯ (38 ವಿಕೆಟ್‌), ಹಿರಿಯ ಆಫ್ಸ್ಪಿನ್ನರ್‌ ಸಾರಾಂಶ್‌ ಜೈನ್‌ (27 ವಿಕೆಟ್‌), ಎಡಗೈ ಪೇಸ್‌ ಬೌಲರ್‌ ಕುಲ್ವಂತ್‌ ಖೆಜೊÅàಲಿಯ (26 ವಿಕೆಟ್‌) ತಂಡದ ಬೌಲಿಂಗ್‌ ಪ್ರಮುಖರು.

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

1-paris-11

Paris Olympics; ಸೀನ್ ನದಿಯ ಉದ್ದಕ್ಕೂ ನಡೆದ ಅತ್ಯಾಕರ್ಷಕ ಉದ್ಘಾಟನಾ ಸಮಾರಂಭ

Suryakumar Yadav

Leadership ನಾನು ಸಂಭ್ರಮಿಸುತ್ತೇನೆ, ಕೆಲವು ನಾಯಕರಿಂದ ಹಲವು ಕಲಿತಿದ್ದೇನೆ: ಸೂರ್ಯ ಕುಮಾರ್

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.