ಸಾರ್ಲೋರ್ಲಕ್ಸ್ ಓಪನ್ ಸೆಮಿಫೈನಲ್ಗೆ ಶುಭಂಕರ್
Team Udayavani, Nov 4, 2018, 6:05 AM IST
ಸಾರ್ಬ್ರುಕೆನ್ (ಜರ್ಮನಿ): “ಸಾರ್ಲೋರ್ಲಕ್ಸ್ ಓಪನ್’ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಶುಭಂಕರ್ ಡೇ ಸೆಮಿಫೈನಲ್ ಪ್ರವೇಶಿಸಿದ್ದು, ಪಾರುಪಳ್ಳಿ ಕಶ್ಯಪ್ ಸೋತು ಟೂರ್ನಿಯಿಂದ ಹೊರ ಬಂದಿದ್ದಾರೆ.
ಪುರುಷರ ಸಿಂಗಲ್ಸ್ನಲ್ಲಿ 2ನೇ ಸುತ್ತಿನಲ್ಲಿ ಲಿನ್ ಡಾನ್ ಅವರನ್ನು ಸೋಲಿ ಸಿದ ಶುಭಂಕರ್, ಕ್ವಾರ್ಟರ್ ಫೈನಲ್ನಲ್ಲಿ ಇಂಗ್ಲೆಂಡ್ನ ಟಾಬಿ ಪೆಂಟಿ ವಿರುದ್ಧ 21-16, 21-9 ಗೇಮ್ಗಳಿಂದ ಜಯಿಸಿದರು.
ಮತ್ತೋರ್ವ ಆಟಗಾರ ಕಶ್ಯಪ್ ಫ್ರಾನ್ಸ್ನ ಟೋಮ ಜೂನಿಯರ್ ಪೊಪೋವ್ ವಿರುದ್ಧ 16-21, 18-21 ಗೇಮ್ಗಳಿಂದ ಸೋತು ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.
ಸಯಾಲಿ ರಾಣೆಗೆ ಸೋಲು
ವನಿತಾ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ನಲ್ಲಿ ಸಯಾಲಿ ರಾಣೆ ಡೆನ್ಮಾರ್ಕ್ನ ಲೈನ್ ಹೋಜ್ಮಾರ್ಕ್ ಜಾರ್ಸ್ಫೆಲ್ಟ್ ವಿರುದ್ಧ 14-21, 9-21 ಗೇಮ್ಗಳಿಂದ ಎಡವಿದರು.