ರಾಹುಲ್-ಅಥಿಯಾ ಮದುವೆ ಖಚಿತ ! ಮಕ್ಕಳಿಗೆ ಬಿಡುವು ಸಿಕ್ಕಿದಾಗ ಮದುವೆ: ಸುನಿಲ್ ಸ್ಪಷ್ಟನೆ
Team Udayavani, Aug 25, 2022, 7:30 AM IST
ಮುಂಬಯಿ: ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್.ರಾಹುಲ್, ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮದುವೆಯಾಗುವ ಸುದ್ದಿ ಇನ್ನು ವದಂತಿಯಲ್ಲ. ಅದು ಸತ್ಯ ಎಂದು ಸ್ವತಃ ಸುನೀಲ್ ಶೆಟ್ಟಿಯೇ ಖಚಿತಪಡಿಸಿದ್ದಾರೆ.
ಇತ್ತೀಚೆಗೆ ಅವರು ನೀಡಿದ ಸಂದರ್ಶನ ವೊಂದರಲ್ಲಿ ಇಬ್ಬರು ಮದುವೆಯಾಗುವುದು ಖಚಿತ. ಆದರೆ ರಾಹುಲ್ ಸತತವಾಗಿ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಏಷ್ಯಾಕಪ್, ಅದಾದ ಅನಂತರ ವಿಶ್ವಕಪ್, ಆಮೇಲೆ ದಕ್ಷಿಣ ಆಫ್ರಿಕಾ ಪ್ರವಾಸ, ಅನಂತರ ಆಸ್ಟ್ರೇಲಿಯ… ಹೀಗೆ ನಿರಂತರ ಪ್ರವಾಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ.
ಮಕ್ಕಳಿಗೆ ಯಾವಾಗ ಬಿಡುವು ಸಿಗುತ್ತದೋ ಆಗ ಮದುವೆಯಾಗಲಿದೆ. ಒಂದೆರಡು ದಿನಗಳ ಬಿಡುವು ವೇಳೆ ಮದುವೆ ಸಾಧ್ಯವಿಲ್ಲ ಎಂದು ಸುನಿಲ್ ಹೇಳಿದರು.
ಇತ್ತೀಚೆಗೆ ರಾಹುಲ್-ಅಥಿಯಾ ಸತತವಾಗಿ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬಯಿಯ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದಾರೆ.
ರಾಹುಲ್ ಕ್ರೀಡಾ ಹರ್ನಿಯ ಚಿಕಿತ್ಸೆಗೆ ಜರ್ಮನಿಗೆ ತೆರಳಿದ್ದಾಗ ಅಥಿಯಾ ಜತೆಗೂಡಿದ್ದರು. ಇಬ್ಬರೂ ಒಟ್ಟಾಗಿರುವ ಹಲವು ಚಿತ್ರಗಳು ಪ್ರಕಟವಾಗಿವೆ. ಆದ್ದರಿಂದ ಇನ್ನು ಮುಂದೆ ವದಂತಿ ಹಬ್ಬಿಸುವವರಿಗೆ ಒಂದು ವಿಷಯ ಇಲ್ಲವಾಗಿದೆ. ಆದರೆ ಅವರಿಗೆ ಇನ್ನೂ ಸಾಕಷ್ಟು ಅವಕಾಶವಿದ್ದೇ ಇದೆ!ಯಾವಾಗ, ಎಲ್ಲಿ, ಹೇಗೆ ನಡೆಯುತ್ತದೆ ಎಂದೆಲ್ಲ ಊಹೆ ಮಾಡಬಹುದು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !