ಸೋಲಿನಿಂದ ಪಾರಾದ ಸ್ವಿಟೋಲಿನಾ


Team Udayavani, Jan 18, 2018, 11:49 AM IST

18-31.jpg

ಮೆಲ್ಬರ್ನ್: ಬುಧವಾರದ ಆಸ್ಟ್ರೇಲಿಯನ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ ಸ್ಟಾರ್‌ ಆಟಗಾರ್ತಿಯರೆಲ್ಲ 3 ಸೆಟ್‌ಗಳ ಕಠಿನ ಹೋರಾಟದ ಬಳಿಕ 3ನೇ ಸುತ್ತು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಎದುರಾಳಿಗಳಿಂದ ಸಾಕಷ್ಟು ಬೆವರಿಳಿಸಿಕೊಂಡು ಮುನ್ನಡೆದವರಲ್ಲಿ ಎಲಿನಾ ಸ್ವಿಟೋಲಿನಾ, ಫ್ರೆಂಚ್‌ ಓಪನ್‌ ಚಾಂಪಿಯನ್‌ ಜೆಲೆನಾ ಒಸ್ಟಾಪೆಂಕೊ, ಮಾಜಿ ನಂಬರ್‌ ವನ್‌ ಆಟಗಾರ್ತಿ ಕ್ಯಾರೋಲಿನ್‌ ವೋಜ್ನಿಯಾಕಿ ಪ್ರಮುಖರು.

ಉಕ್ರೇನಿನ ಎಲಿನಾ ಸ್ವಿಟೋಲಿನಾ 59ನೇ ಶ್ರೇಯಾಂಕಿತ ಜೆಕ್‌ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ ವಿರುದ್ಧ ಮೊದಲ ಸೆಟ್‌ನಲ್ಲಿ ಆಘಾತಕ್ಕೊಳಗಾದರು. ಅಂತಿಮವಾಗಿ 4-6, 6-2, 6-1 ಅಂತರದಿಂದ ಗೆದ್ದು ದ್ವಿತೀಯ ಸುತ್ತು ದಾಟಿದರು. ಇವರಿಬ್ಬರ ನಡುವೆ 2 ಗಂಟೆ, 14 ನಿಮಿಷಗಳ ಕಾದಾಟ ನಡೆಯಿತು. ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌ ಪ್ರಶಸ್ತಿಯೊಂದಿಗೆ ಇಲ್ಲಿಗೆ ಆಗಮಿಸಿದ ಸ್ವಿಟೋಲಿನಾ ತೃತೀಯ ಸುತ್ತಿನಲ್ಲಿ ತಮ್ಮದೇ ದೇಶದ 15ರ ಹರೆಯದ ಯುವ ಆಟಗಾರ್ತಿ ಮಾರ್ತಾ ಕೊಸ್ಟುéಕ್‌ ಸವಾಲನ್ನು ಎದುರಿಸಬೇಕಿದೆ. 

ಅಚ್ಚರಿಯ ಪ್ರದರ್ಶನ ನೀಡುತ್ತಿರುವ ಮಾರ್ತಾ ಕೊಸ್ಟುéಕ್‌ ಆಸ್ಟ್ರೇಲಿಯದ ವೈಲ್ಡ್‌ಕಾರ್ಡ್‌ ಆಟಗಾರ್ತಿ ಒಲಿವಿಯಾ ರೊಗೋವ್‌ಸ್ಕಾ ವಿರುದ್ಧ 6-3, 7-5 ಅಂತರದ ಗೆಲುವು ಸಾಧಿಸಿದರು. ಕೊಸ್ಟುéಕ್‌ 1996ರ ಬಳಿಕ ಆಸ್ಟ್ರೇಲಿಯನ್‌ ಓಪನ್‌ ತೃತೀಯ ಸುತ್ತಿಗೆ ಏರಿದ ಅತಿ ಕಿರಿಯ ಆಟಗಾರ್ತಿ ಎನಿಸಿದ್ದಾರೆ. ಅಂದು ಮಾರ್ಟಿನಾ ಹಿಂಗಿಸ್‌ ಈ ಸಾಧನೆ ಮಾಡಿದ್ದರು. ಐದರ ಹರೆಯದಿಂದಲೇ ಟೆನಿಸ್‌ ಮ್ಯಾಜಿಕ್‌ ಮಾಡುತ್ತ ಬಂದಿರುವ ಕೊಸ್ಟುéಕ್‌ ಆಟವನ್ನು “ಪ್ಲೇಯರ್ ಬಾಕ್ಸ್‌’ನಿಂದ ಅವರ ತಾಯಿ ಟಾಲಿನಾ ಬೆಯೊR ಕೂಡ ವೀಕ್ಷಿಸಿದರು. 

“ಪ್ರತಿ ವರ್ಷವೂ ನಾನು ಕೆಲವು ಟೆನಿಸ್‌ ದಾಖಲೆಗಳನ್ನು ಮುರಿಯುತ್ತ ಬಂದಿದ್ದೇನೆ. ಬಹಳ ಖುಷಿಯಾಗುತ್ತಿದೆ…’ ಎಂದು ಕೊಸ್ಟುéಕ್‌ ಪ್ರತಿಕ್ರಿಯಿಸಿದ್ದಾರೆ.

ವೋಜ್ನಿಯಾಕಿ ಅದೃಷ್ಟದ ಜಯ
ದ್ವಿತೀಯ ಶ್ರೇಯಾಂಕದ ಡೆನ್ಮಾರ್ಕ್‌ ಆಟಗಾರ್ತಿ ಕ್ಯಾರೋಲಿನ್‌ ವೋಜ್ನಿಯಾಕಿ ಕ್ರೊವೇಶಿಯಾದ ಜಾನ್‌ ಪೆಟ್‌ ವಿರುದ್ಧ ಇನ್ನೇನು ಪೆಟ್ಟು ಅನುಭವಿಸುವುದರಲ್ಲಿದ್ದರು. 3ನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ 5-1ರ ಹಿನ್ನಡೆಗೆ ಸಿಲುಕಿ ಸೋತೇ ಹೋಗುವ ಸ್ಥಿತಿಯಲ್ಲಿದ್ದರು. ಆದರೆ ಅದೃಷ್ಟ ಗಟ್ಟಿ ಇತ್ತು. ಬಳಿಕ ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡದೆ ಗೆದ್ದು ನಿಟ್ಟುಸಿರೆಳೆದರು. ಅಂತರ 3-6, 6-2, 7-5. ವೋಜ್ನಿಯಾಕಿ ಅವರ ಮುಂದಿನ ಎದುರಾಳಿ ಹಾಲೆಂಡಿನ ಕಿಕಿ ಬೆರ್ಟೆನ್ಸ್‌. ದಿನದ ಇನ್ನೊಂದು ಪಂದ್ಯದಲ್ಲಿ ಬೆರ್ಟೆನ್ಸ್‌ ಅಮೆರಿಕದ ನಿಕೋಲೆ ಗಿಬ್ಸ್ ವಿರುದ್ಧ 7-6 (7-3), 6-0 ಅಂತರದ ಜಯ ದಾಖಲಿಸಿದರು.

ಒಸ್ಟಾಪೆಂಕೊ 3 ಸೆಟ್‌ ಹೋರಾಟ
ಲಾತ್ವಿಯಾದ ಬಿಗ್‌ ಹಿಟ್ಟಿಂಗ್‌ ಖ್ಯಾತಿಯ ಜೆಲೆನಾ ಒಸ್ಟಾಪೆಂಕೊ ಕೂಡ ಗೆಲುವಿಗಾಗಿ 3 ಸೆಟ್‌ಗಳ ಹೋರಾಟ ನಡೆಸಬೇಕಾಯಿತು. ಚೀನದ ದುವಾನ್‌ ಯಿಂಗ್‌ಯಿಂಗ್‌ ವಿರುದ್ಧದ ಪಂದ್ಯವನ್ನು ಒಸ್ಟಾಪೆಂಕೊ 6-3, 3-6, 6-4 ಅಂತರದಿಂದ ಗೆದ್ದರು. ಒಸ್ಟಾಪೆಂಕೊ ಇನ್ನು ಎಸ್ತೋನಿಯಾದ ಅನೆಟ್‌ ಕೊಂಟಾವೀಟ್‌ ವಿರುದ್ಧ ಕಾದಾಡಬೇಕಿದೆ. ಕೊಂಟಾವೀಟ್‌ ಜರ್ಮನಿಯ ಮೋನಾ ಬಾರ್ತೆಲ್‌ ಅವರನ್ನು 6-3, 4-6, 6-3ರಿಂದ ಮಣಿಸಿದರು.

ದ್ವಿತೀಯ ಸುತ್ತಿನ ಇತರ ಪಂದ್ಯಗಳಲ್ಲಿ ಫ್ರಾನ್ಸ್‌ನ ಅಲಿಜೆ ಕಾರ್ನೆಟ್‌ ಜರ್ಮನಿಯ 12ನೇ ಶ್ರೇಯಾಂಕಿತೆ ಜೂಲಿಯಾ ಜಾಜ್‌Õì ಅವರನ್ನು 6-4, 6-3ರಿಂದ; ಉಕ್ರೇನಿನ ಕ್ಯಾಥರಿನಾ ಬೊಂಡಾರೆಂಕೊ ರಷ್ಯಾದ 15ನೇ ಶ್ರೇಯಾಂಕಿತೆ ಅನಾಸ್ತಾಸಿಯಾ ಪಾವುÉಚೆಂಕೋವಾ ಅವರನ್ನು 6-2, 6-3ರಿಂದ; ಥಾಯ್ಲೆಂಡಿನ ಲುಕ್ಸಿಕಾ ಕುಂಖುಮ್‌ ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್‌ ಅವರನ್ನು 6-1, 6-3ರಿಂದ ಪರಾಭವಗೊಳಿಸಿದರು. ಬೆಲಿಂಡಾ ಬೆನ್ಸಿಕ್‌ ಮೊದಲ ಸುತ್ತಿನಲ್ಲಿ ವೀನಸ್‌ ವಿಲಿಯಮ್ಸ್‌ಗೆ ಸೋಲುಣಿಸಿ ಸುದ್ದಿಯಾಗಿದ್ದರು.

ನಡಾಲ್‌, ಸೋಂಗ 3ನೇ ಸುತ್ತಿಗೆ
ವಿಶ್ವದ ನಂಬರ್‌ ವನ್‌ ಟೆನಿಸಿಗ ಸ್ಪೇನಿನ ರಫೆಲ್‌ ನಡಾಲ್‌ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ 3ನೇ ಸುತ್ತಿಗೆ ಏರಿದ್ದಾರೆ. ಫ್ರಾನ್ಸ್‌ನ ದೈತ್ಯ ಟೆನಿಸಿಗ ಜೋ ವಿಲ್‌ಫ್ರೆಡ್‌ ಸೋಂಗ, ತವರಿನ ಭರವಸೆ ನಿಕ್‌ ಕಿರ್ಗಿಯೋಸ್‌ ಕೂಡ ದ್ವಿತೀಯ ಸುತ್ತು ದಾಟಿದ್ದಾರೆ.

ರಫೆಲ್‌ ನಡಾಲ್‌ ಆರ್ಜೆಂಟೀನಾದ 52ನೇ ರ್‍ಯಾಂಕಿಂಗ್‌ ಆಟಗಾರ ಲಿಯೋನಾರ್ಡೊ ಮೇಯರ್‌ ಅವರನ್ನು 6-3, 6-4, 7-6 (7-4) ಅಂತರದಿಂದ ಹಿಮ್ಮೆಟ್ಟಿಸಿದರು. ಮುಂದಿನ ಸುತ್ತಿನಲ್ಲಿ ಬೋಸ್ನಿಯಾದ ದಮಿರ್‌ ಜುಮುರ್‌ ವಿರುದ್ಧ ಆಡಲಿದ್ದಾರೆ.

ಜೋ ವಿಲ್‌ಫ್ರೆಡ್‌ ಸೋಂಗ 5 ಸೆಟ್‌ಗಳ ಮ್ಯಾರಥಾನ್‌ ಕಾದಾಟದ ಬಳಿಕ ಕೆನಡಾದ ಉದಯೋನ್ಮುಖ ಟೆನಿಸಿಗ ಡೆನ್ನಿಸ್‌ ಶಪವಲೋವ್‌ ಅವರನ್ನು 3-6, 6-3, 1-6, 7-6 (7-4), 7-5ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಸೋಂಗ ಅವರಿನ್ನು ಆಸ್ಟ್ರೇಲಿಯದ ನಿಕ್‌ ಕಿರ್ಗಿಯೋಸ್‌ ಸವಾಲನ್ನು ಎದುರಿಸಬೇಕಿದೆ. ಕಿರ್ಗಿಯೋಸ್‌ ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ವಿರುದ್ಧ 7-5, 6-4, 7-6 (2) ಅಂತರದಿಂದ ಜಯ ಸಾಧಿಸಿದರು.

ಉಕ್ರೇನಿನ ಅಲೆಕ್ಸಾಂಡರ್‌ ಡೊಲ್ಗೊಪೊಲೋವ್‌, ಕ್ರೊವೇಶಿಯಾದ ಮರಿನ್‌ ಸಿಲಿಕ್‌, ಲಕ್ಸೆಂಬರ್ಗ್‌ನ ಗಿಲ್ಲೆಸ್‌ ಮುಲ್ಲರ್‌, ರಶ್ಯದ ಆಂಡ್ರೆ ರುಬ್ಲೇವ್‌ ತೃತೀಯ ಸುತ್ತು ಪ್ರವೇಶಿಸಿದವರಲ್ಲಿ ಪ್ರಮುಖರು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

yuzvendra Chahal

IPL 2024; ಹೊಸ ಭಾರತೀಯ ದಾಖಲೆ ಬರೆದ ಯುಜುವೇಂದ್ರ ಚಾಹಲ್

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.