ವನಿತಾ ಏಷ್ಯಾ ಕಪ್: ಸೆಮಿಫೈನಲ್ ಪ್ರವೇಶಿಸಿದ ಥೈಲ್ಯಾಂಡ್
Team Udayavani, Oct 11, 2022, 11:12 PM IST
ಸಿಲ್ಲೆಟ್: ಆತಿಥೇಯ ಮತ್ತು ಹಾಲಿ ಚಾಂಪಿಯನ್ ಬಾಂಗ್ಲಾದೇಶ ಮತ್ತು ಯುಎಇ ವಿರುದ್ಧ ಮಂಗಳ ವಾರ ನಡೆಯಬೇಕಾಗಿದ್ದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಥೈಲ್ಯಾಂಡ್ ನಾಲ್ಕನೇ ತಂಡವಾಗಿ ಸೆಮಿಫೈನಲಿಗೇರಿದೆ. ಥೈಲ್ಯಾಂಡ್ ಚೊಚ್ಚಲ ಬಾರಿ ಏಷ್ಯಾ ಕಪ್ ಕೂಟದ ಸೆಮಿಫೈನಲ್ ತಲುಪಿದೆ.
ಅಂತಿಮ ತಂಡವಾಗಿ ಸೆಮಿಫೈನಲಿಗೇರಲು ಬಾಂಗ್ಲಾಕ್ಕೆ ಅಂತಿಮ ಲೀಗ್ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಸಾಕಿತ್ತು. ಆದರೆ ಮಳೆಯಿಂದ ರದ್ದುಗೊಂಡ ಕಾರಣ ಬಾಂಗ್ಲಾ ಒಂದಂಕ ಮಾತ್ರ ಪಡೆಯಿತು. ಬಾಂಗ್ಲಾ ಆಡಿದ ಆರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿ ಒಟ್ಟಾರೆ ಐದಂಕ ಪಡೆದಿದ್ದರೆ ಥೈಲ್ಯಾಂಡ್ ತಂಡವು ಯುಎಇ, ಮಲೇಶ್ಯ ಮತ್ತು ಬಲಿಷ್ಠ ತಂಡವಾದ ಪಾಕಿಸ್ಥಾನವನ್ನು ಸೋಲಿಸಿ ಆರಂಕ ಗಳಿಸಿತ್ತು.
ಭಾರತಕ್ಕೆ ಅಗ್ರಸ್ಥಾನ
ಮಂಗಳವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್ಗಳ ಜಯ ಸಾಧಿಸಿದ್ದ ಪಾಕಿಸ್ಥಾನ ಮತ್ತು ಭಾರತ ಒಟ್ಟು ಐದು ಪಂದ್ಯಗಳಲ್ಲಿ ಗೆದ್ದು ಹತ್ತು ಅಂಕ ಗಳಿಸಿದೆ. ಆದರೆ ಉತ್ತಮ ರನ್ಧಾರಣೆಯ ಆಧಾರದಲ್ಲಿ ಭಾರತ ಅಗ್ರಸ್ಥಾನ ಪಡೆಯಿತು. ಪಾಕಿಸ್ಥಾನ ಮತ್ತು ಶ್ರೀಲಂಕಾ ಎರಡನೇ ಮತ್ತು ಮೂರನೇ ತಂಡವಾಗಿ ಸೆಮಿಫೈನಲ್ ತಲುಪಿದೆ.
ಅ. 13ರ ಗುರುವಾರ ಸೆಮಿಫೈನಲ್ಸ್ ನಡೆಯಲಿವೆ. ಭಾರತವು ಥಾçಲಂಡ್ ಹಾಗೂ ಪಾಕಿಸ್ಥಾನವು ಶ್ರೀಲಂಕಾವನ್ನು ಮತ್ತೆ ಎದುರಿಸಲಿದೆ. ಅ. 15ರಂದು ಫೈನಲ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ