ಬಿಸಿಸಿಐಗೆ ಶೀಘ್ರ ಚುನಾವಣೆ ಸಾಧ್ಯತೆ

Team Udayavani, May 16, 2019, 6:00 AM IST

ಹೊಸದಿಲ್ಲಿ: ಬಿಸಿಸಿಐಗೆ ಶೀಘ್ರವೇ ಚುನಾವಣೆ ನಡೆಯುವ ಸೂಚನೆಯೊಂದು ಲಭಿಸಿದೆ. ಮುಂದೆ ಕ್ರಿಕೆಟ್‌ಗೆ ಸಂಬಂಧಪಟ್ಟ ಅಧಿಕಾರಿಗಳು ಬಿಸಿಸಿಐ ಆಡಳಿತ ವಿಭಾಗವನ್ನು ನೋಡಿಕೊಳ್ಳಲಿದ್ದಾರೆ. ಈ ವಿಷಯವನ್ನು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಅಮಿಕಸ್‌ ಕ್ಯೂರಿ ಪಿ.ಎಸ್‌. ನರಸಿಂಹ ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿಯೋಜಿತ ಆಡಳಿತಾಧಿಕಾ ರಿಗಳ ಅಧ್ಯಾಯ ಶೀಘ್ರದಲ್ಲೇ ಅಂತ್ಯವಾಗಲಿದೆ. ಇತ್ತೀಚಿಗೆ ವಿವಿಧ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ಜತೆಗೆ ನಡೆಸಿದ ಸಭೆಯ ಬಳಿಕ ಈ ಮಹತ್ವದ ಬೆಳವಣಿಗೆಯಾಗಿದೆ. ‘ಕ್ರಿಕೆಟ್ ಪೋಷಣೆಯನ್ನು ನಡೆಸುವುದು ನ್ಯಾಯಾಲಯದ ಕೆಲಸವಲ್ಲ’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ