400 ಮೀ. ರೇಸ್: ವಾರ್ಹೋಮ್ ವಿಶ್ವದಾಖಲೆ
Team Udayavani, Aug 3, 2021, 8:00 PM IST
ಟೋಕಿಯೊ: ಪುರುಷರ 400 ಮೀ. ಹರ್ಡಲ್ಸ್ನಲ್ಲಿ ಮಂಗಳವಾರ ನೂತನ ದಾಖಲೆ ನಿರ್ಮಾಣಗೊಂಡಿತು. ನಾರ್ವೆಯ ಕಾರ್ಸ್ಟನ್ ವಾರ್ಹೋಮ್ 400 ಮೀ. ಹರ್ಡಲ್ಸ್ನಲ್ಲಿ 45.94 ಸೆಕೆಂಡ್ಸ್ಗಳ ಗುರಿಯೊಂದಿಗೆ ತನ್ನದೇ ವಿಶ್ವದಾಖಲೆಯನ್ನು ಅಳಿಸಿ ಚಿನ್ನದ ಪದಕ ಗೆದ್ದರು.
ಕಳೆದ ತಿಂಗಳಷ್ಟೇ 46.70 ಸೆಕೆಂಡ್ಸ್ಗಳಲ್ಲಿ ಓಟ ಮುಗಿಸಿ ನಿರ್ಮಿಸಿದ್ದ ದಾಖಲೆಯನ್ನು ವಾರ್ಹೋಮ್ ಇಲ್ಲಿ ಉತ್ತಮಪಡಿಸಿಕೊಂಡರು.
ಅಮೆರಿಕದ ರಾಯ್ ಬೆಂಜಮಿನ್ 46.17 ಸೆಕೆಂಡ್ನಲ್ಲಿ ರೇಸ್ ಮುಗಿಸಿ ದ್ವಿತೀಯ ಸ್ಥಾನಿಯಾದರು.