US Open; ನ್ಯೂಯಾರ್ಕ್‌ ಕ್ವೀನ್‌ ಕೊಕೊ ಗಾಫ್: 25 ಕೋಟಿ ರೂ. ಬಹುಮಾನ!

Team Udayavani, Sep 10, 2023, 11:28 PM IST

1-aasdsa

ನ್ಯೂಯಾರ್ಕ್‌: ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ ಮತ್ತೆ ಆತಿಥೇಯ ಅಮೆರಿಕದ ಪ್ರಭುತ್ವ ಮೊದಲ್ಗೊ ಳ್ಳುವ ಸೂಚನೆ ಲಭಿಸಿದೆ. ವೀನಸ್‌ ವಿಲಿ ಯಮ್ಸ್‌, ಸೆರೆನಾ ವಿಲಿಯಮ್ಸ್‌ ಬಳಿಕ ಇದೀಗ ಮತ್ತೋರ್ವ ತಾರಾ ಆಟಗಾರ್ತಿಯ ಯುಗ ಆರಂಭಗೊಂಡಂತಿದೆ. ಈಕೆಯೇ 19 ವರ್ಷದ “ಕಪ್ಪು ಹವಳ’ ಕೊಕೊ ಗಾಫ್. ಫ್ಲೋರಿಡಾದ ಈ ಪ್ರತಿಭಾನ್ವಿತ ಆಟಗಾರ್ತಿ ಯೀಗ ನ್ಯೂಯಾರ್ಕ್‌ನ ನೂತನ ರಾಣಿ!

ರವಿವಾರ ನಡುರಾತ್ರಿ ಬಳಿಕ ಸಾಗಿದ ಫೈನಲ್‌ನಲ್ಲಿ 6ನೇ ಶ್ರೇಯಾಂಕದ ಕೊಕೊ ಗಾಫ್ 2-6, 6-3, 6-2ರಿಂದ ಬೆಲರೂಸ್‌ನ ಅರಿನಾ ಸಬಲೆಂಕಾ ಅವರನ್ನು ಮಣಿಸಿ ದರು. 2 ಗಂಟೆ, 6 ನಿಮಿಷಗಳ ಕಾಲ ಈ ಹೋರಾಟ ಸಾಗಿತು. ಸಬಲೆಂಕಾ ಸೋತರೂ ಸೋಮವಾರದ ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿಯಾಗಿ ಮೂಡಿಬರಲಿದ್ದಾರೆ.

ಕಳೆದ ವರ್ಷದ ಯುಎಸ್‌ ಓಪನ್‌ ಸೆರೆನಾ ವಿಲಿಯಮ್ಸ್‌ ಪಾಲಿಗೆ ವಿದಾಯ ಕೂಟವಾಗಿದ್ದರೆ, ಈ ಬಾರಿ ಅದೇ ದೇಶದ ನೂತನ ಚಾಂಪಿಯನ್‌ ಒಬ್ಬರನ್ನು ಸ್ವಾಗತಿ ಸುವ ವೇದಿಕೆಯಾಗಿ ಮಾರ್ಪಟ್ಟಿತು. ವೇದಿಕೆ ಸಮಾರಂಭಕ್ಕೆ ಆಗಮಿಸುವಾಗ ಗಾಫ್ ಒಂದು ಕೈಯಲ್ಲಿ ಮೊಬೈಲ್‌ ಹಿಡಿದುಕೊಂಡಿ ದ್ದರು. ಹಿಂದಿನ ಸ್ಕ್ರೀನ್‌ನಲ್ಲಿ ಅವರ ಆಟದ ದೃಶ್ಯಾವಳಿ ಮೂಡಿಬರುತ್ತಿತ್ತು. ಮಿರುಗುವ ಟ್ರೋಫಿಯನ್ನು ಒಂದು ಕೈಯಲ್ಲಿ ಎತ್ತಿಹಿಡಿದ ಗಾಫ್, ತಮ್ಮದೆ ಆಟದ ದೃಶ್ಯಾವಳಿಯ ಸಮ್ಮುಖದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು.
ಫೈನಲ್‌ ಪಂದ್ಯ ವೀಕ್ಷಿಸಲು ಅಮೆರಿಕದ ಖ್ಯಾತನಾಮರೆಲ್ಲ ಆಗಮಿಸಿದ್ದರು. ಇವರಲ್ಲಿ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಕೂಡ ಒಬ್ಬರು.

ಕೊಕೊ ಗಾಫ್ 1999ರ ಬಳಿಕ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದ ತವರಿನ ಅತೀ ಕಿರಿಯ ಆಟಗಾರ್ತಿ. ಅಂದು 18 ವರ್ಷದ ಸೆರೆನಾ ವಿಲಿಯಮ್ಸ್‌ ಈ ಸಾಧನೆಗೈದಿದ್ದರು. ಗಾಫ್ಗೆ ಇದು 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿತ್ತು. 2022ರಲ್ಲಿ ಫ್ರೆಂಚ್‌ ಓಪನ್‌ ಫೈನಲ್‌ಗೆ ಲಗ್ಗೆಯಿರಿಸಿದರಾದರೂ ಅಲ್ಲಿ ಇಗಾ ಸ್ವಿಯಾಟೆಕ್‌ಗೆ ಶರಣಾದರು. 25 ವರ್ಷದ ಅರಿನಾ ಸಬಲೆಂಕಾ ಅವರಿಗೂ ಇದು ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿತ್ತು. ಇದೇ ವಷಾರಂರಂಭದ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಕಾಳಗದಲ್ಲಿ ಎಲೆನಾ ರಿಬಾಕಿನಾಗೆ ಸೋಲುಣಿಸಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ್ದರು. ಆದರೆ ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್‌ ಮಾತ್ರ ಒಲಿಯಲಿಲ್ಲ.

25 ಕೋಟಿ ರೂ. ಬಹುಮಾನ!
ಯುಎಸ್‌ ಓಪನ್‌ ಚಾಂಪಿಯನ್‌ ಕೊಕೊ ಗಾಫ್ ಈ ಸಾಧನೆಗಾಗಿ ಪಡೆದ ಬಹುಮಾನ ಎಷ್ಟು ಗೊತ್ತೇ? 3 ಮಿಲಿಯನ್‌ ಡಾಲರ್‌. ಹತ್ತಿರ ಹತ್ತಿರ 25 ಕೋಟಿ ರೂ! ಇದು ಪುರುಷ ವಿಜೇತರಿಗೆ ಸರಿಸಮನಾದ ಬಹುಮಾನ ಮೊತ್ತವಾಗಿದೆ. ರನ್ನರ್ ಅಪ್‌ ಅರಿನಾ ಸಬಲೆಂಕಾ ಖಾತೆಗೆ 12.5 ಕೋಟಿ ರೂ. ಜಮೆಗೊಂಡಿತು.

1973ರಲ್ಲಿ ಬಿಲ್ಲಿ ಜೀನ್‌ ಕಿಂಗ್‌ ವನಿತಾ ಸಮಾನತೆ ಬಗ್ಗೆ ಹೋರಾಟ ನಡೆಸಿ ಯಶಸ್ಸು ಕಂಡಿದ್ದರು. “ನೀವು ಪುರುಷರಿಗೆ ನೀಡುವಷ್ಟೇ ಬಹುಮಾನವನ್ನು ವನಿತೆಯರಿಗೂ ನೀಡಬೇಕು, ಇಲ್ಲವೇ ನಾನು ನಿವೃತ್ತಿ ಘೋಷಿಸುತ್ತೇನೆ’ ಎಂದು ಪಟ್ಟು ಹಿಡಿದಿದ್ದರು. ಆಗ ಅವರು ಹಾಲಿ ಚಾಂಪಿಯನ್‌ ಕೂಡ ಆಗಿದ್ದರು. ಅವರ ಹೋರಾಟ ಫ‌ಲ ಕೊಟ್ಟಿತ್ತು.

ಬಿಲ್ಲಿ ಜೀನ್‌ ಕಿಂಗ್‌ ಅವರ “ಬಹುಮಾನ ಸಮಾನತೆ’ಯ ಹೋರಾಟಕ್ಕೆ ಈಗ ಭರ್ತಿ 50 ವರ್ಷ. ಈ ಕೂಟದ ಆರಂಭಕ್ಕೂ ಮೊದಲು ಯುಎಸ್‌ ಓಪನ್‌ ಕೂಟದ ಸಂಘಟಕರು ಬಿಲ್ಲಿ ಜೀನ್‌ ಕಿಂಗ್‌ ಅವರನ್ನು ಆಹ್ವಾನಿಸಿ ಗೌರವಿಸಿದ್ದರು.ಕೊಕೊ ಗಾಫ್ ಕೂಡ ಇದನ್ನು ಸ್ಮರಿಸಿಕೊಂಡರು. “ಥ್ಯಾಂಕ್ಯೂ ಬಿಲ್ಲಿ, ಫಾರ್‌ ಫೈಟಿಂಗ್‌ ಫಾರ್‌ ದಿಸ್‌’ ಎಂದು ತಮ್ಮ ನಾಡಿನ ಹಿರಿಯ ಆಟಗಾರ್ತಿಯನ್ನು ಅಂಕಣದಲ್ಲಿ ನೆನಪಿಸಿಕೊಂಡರು.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.