ವಿನೇಶ್‌ ಪೋಗಟ್‌ ಚಿನ್ನದ ಸ್ಪರ್ಧೆ; ಅಂಶು ಮಲಿಕ್‌ಗೆ ಬೆಳ್ಳಿ

Team Udayavani, Jan 17, 2020, 10:11 PM IST

ರೋಮ್‌: “ರೋಮ್‌ ರ್‍ಯಾಂಕಿಂಗ್‌ ಸೀರಿಸ್‌’ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಮುಂದುವರಿಸಿದ ಭಾರತದ ವಿನೇಶ್‌ ಪೋಗಟ್‌ ಚಿನ್ನದ ಪದಕದ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅವರು 53 ಕೆಜಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಇದೇ ವೇಳೆ 57 ಕೆಜಿ ವಿಭಾಗದಲ್ಲಿ ಅಂಶು ಮಲಿಕ್‌ ಬೆಳ್ಳಿ ಪದಕ ಗೆದ್ದಿದ್ದಾರೆ.

ಶನಿವಾರದ ಮುಖಾಮುಖೀಯಲ್ಲಿ ವಿನೇಶ್‌ ಪೋಗಟ್‌ 4-2 ಅಂಕಗಳಿಂದ ಚೀನದ ಕ್ವಿನ್ಯು ಪಾಂಗ್‌ ಅವರನ್ನು ಉರುಳಿಸಿದರು. ಇದಕ್ಕೂ ಮುನ್ನ ಕ್ರಿಸ್ಟಿನಾ ಬಿರೆಝ (10-0) ಮತ್ತು ಲಾನೌನ್‌ ಲೊ (15-5) ಅವರನ್ನು ಮಣಿಸಿದ್ದರು. ಫೈನಲ್‌ನಲ್ಲಿ ವಿನೇಶ್‌ ಎದುರಾಳಿ ಈಕ್ವಡಾರ್‌ನ ಲುಯಿಸಾ ಎಲಿಜಬೆತ್‌ ವಾಲ್ವೆರ್ಡ್‌ ಮಿಲೆಂಡ್ರೆಸ್‌.

ಅಂಶು ಪರಾಭವ
18ರ ಹರೆಯದ ಅಂಶು ಮಲಿಕ್‌ ಫೈನಲ್‌ನಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಪರಾಭವಗೊಂಡರು. ಸೆಮಿಫೈನಲ್‌ ಹಾದಿಯಲ್ಲಿ ಅವರು ಅಮೆರಿಕದ ರೋಸ್‌ ಬರ್ಕೆರ್ಟ್‌, ನಾರ್ವೆಯ ಗ್ರೇಸ್‌ ಬುಲೆನ್‌, ಕೆನಡಾದ ವಿಶ್ವ ಚಾಂಪಿಯನ್‌ ಲಿಂಡಾ ಮೊರೈಸ್‌ ವಿರುದ್ಧ ಜಯ ಸಾಧಿಸಿದ್ದರು.50 ಕೆಜಿ ಸೆಮಿಫೈನಲ್‌ನಲ್ಲಿ ಪರಾಭವ ಗೊಂಡ ಭಾರತದ ಮತ್ತೋರ್ವ ಕುಸ್ತಿಪಟು ನಿರ್ಮಲಾದೇವಿ ಕಂಚಿನ ಪದಕಕ್ಕೆ ಸೆಣಸಲಿದ್ದಾರೆ.

ಪುರುಷರ ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಸತ್ಯವರ್ತ್‌ ಕದಿಯನ್‌ (97 ಕೆಜಿ), ಸುಮಿತ್‌ ಮಲಿಕ್‌ (125 ಕೆಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ