Wimbledon Tennis; ಸ್ವಿಟೋಲಿನಾ ಓಟ ಸೆಮಿಯಲ್ಲಿ ಅಂತ್ಯ
Team Udayavani, Jul 14, 2023, 7:07 AM IST
ಲಂಡನ್: ವಿಂಬಲ್ಡನ್ ಟೆನಿಸ್ ಕೂಟದ ಸೆಮಿಫೈನಲ್ನಲ್ಲಿ ಎಲೆನಾ ಸ್ವಿಟೋಲಿನಾ ಅವರ ಓಟ ಅಂತ್ಯಗೊಂಡಿದೆ. ಗುರುವಾರ ಸೆಂಟರ್ ಕೋರ್ಟ್ನಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ಸ್ವಿಟೋಲಿನಾ ಅವರನ್ನು ಜೆಕ್ ಗಣರಾಜ್ಯದ ತಾರೆ ಮಾರ್ಕೆಟಾ ವೋಂಡ್ರೂಸೋವಾ ಅವರು ನೇರ ಸೆಟ್ಗಳಿಂದ ಉರುಳಿಸಿ ಫೈನಲ್ ಹಂತಕ್ಕೇರಿದರು.
ಶನಿವಾರ ನಡೆಯುವ ಫೈನಲ್ ಹೋರಾಟದಲ್ಲಿ ವೋಂಡ್ರೂಸೋವಾ ಅವರು ಓನ್ಸ್ ಜೆಬ್ಯೂರ್ ಅವರನ್ನು ಎದುರಿಸಲಿದ್ದಾರೆ. ಜೆಬ್ಯೂರ್ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಲರೂಸ್ನ ಅರಿನಾ ಸಬಲೆಂಕಾ ಅವರನ್ನು 6-7 (5-7), 6-4, 6-3 ಸೆಟ್ಗಳಿಂದ ಸೋಲಿಸಿದರು.
ಕಳೆದ ವರ್ಷ ಮಗುವಿನ ಜನ್ಮ ನೀಡಿದ ಬಳಿಕ ಮೂರು ತಿಂಗಳ ಹಿಂದೆ ಟೆನಿಸ್ ರಂಗಕ್ಕೆ ಮರಳಿದ್ದ ಸ್ವಿಟೋಲಿನಾ ಕ್ವಾರ್ಟರ್ಫೈನಲ್ನಲ್ಲಿ ವಿಶ್ವದ ನಂಬರ್ ಇಗಾ ಸ್ವಿಯಾಟೆಕ್ ಅವರನ್ನು ಸೋಲಿ ಸಿದ್ದರು. ಆದರೆ ಸ್ವಿಟೋಲಿನಾ ಸೆಮಿ ಫೈನಲ್ನಲ್ಲಿ 6-3, 6-3 ನೇರ ಸೆಟ್ಗಳಿಂದ ಸೋತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ