ವನಿತಾ ಟಿ20 ಚಾಲೆಂಜರ್ ಸರಣಿ: ಸೂಪರ್ ನೋವಾಗೆ ಸೂಪರ್ ಗೆಲುವು
Team Udayavani, May 23, 2022, 10:39 PM IST
ಪುಣೆ: ವನಿತಾ ಚಾಲೆಂಜರ್ ಟಿ20 ಸರಣಿಯ ಮೊದಲ ಮುಖಾಮುಖಿಯಲ್ಲಿ ಟ್ರೈಬ್ಲೇಜರ್ ವಿರುದ್ಧ ಸೂಪರ್ ನೋವಾ ಸೂಪರ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಸೂಪರ್ ನೋವಾ 163 ರನ್ ಪೇರಿಸುವಲ್ಲಿ ಯಶಸ್ವಿಯಾಗಿತ್ತು. ಆಬಳಿಕ ಸೂಪರ್ ನೋವಾ ತಂಡದ ನಿಖರ ದಾಳಿಗೆ ಕುಸಿದ ಟ್ರೈಬ್ಲೇಜರ್ ತಂಡವು 9 ವಿಕೆಟಿಗೆ 114 ರನ್ ಗಳಿಸಲಷ್ಟೇ ಶಕ್ತವಾಗಿ 49 ರನ್ನುಗಳಿಂದ ಸೋಲನ್ನು ಕಂಡಿತು.
ಟ್ರೈಬ್ಲೇಜರ್ ತಂಡದ ಆರಂಭ ಉತ್ತಮವಾಗಿತ್ತು. ನಾಯಕಿ ಸ್ಮತಿ ಮಂಧನಾ ಎರಡನೆಯವರಾಗಿ ಔಟ್ ಆದಾಗ ತಂಡ 7.2 ಓವರ್‌ಗಳಲ್ಲಿ ಎರಡು ವಿಕೆಟಿಗೆ 63 ರನ್ ಗಳಿಸಿತ್ತು. ಮಂಧನಾ 23 ಎಸೆತ ಎದುರಿಸಿ 34 ರನ್ ಗಳಿಸಿದರು. ಇದು ತಂಡದ ಆಟಗಾರ್ತಿಯೊಬ್ಬರ ಗರಿಷ್ಠ ಮೊತ್ತವೂ ಆಗಿದೆ. ಆಬಳಿಕ ತಂಡವು ನಾಟಕೀಯ ಕುಸಿತ ಕಂಡಿತು. ಮುಂದಿನ 10 ರನ್ ಗಳಿಸುವಷ್ಟರಲ್ಲಿ ತಂಡವು ಮತ್ತೆ 5 ವಿಕೆಟ್‌ಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಗೆ ಬಿತ್ತು. ಅಂತಿಮವಾಗಿ 9 ವಿಕೆಟಿಗೆ 114 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು.
ಪೂಜಾ ವಸ್ತ್ರಾಕರ್ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 12 ರನ್ ನೀಡಿ ನಾಲ್ಕು ವಿಕೆಟ್ ಕಿತ್ತು ಗೆಲುವಿನ ರೂವಾರಿಯಾಗಿ ಕಾಣಿಸಿಕೊಂಡರು.
ಈ ಮೊದಲು ಟಾಸ್ ಗೆದ್ದ ನಾಯಕಿ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದು ಕೊಂಡರು. ಡಿಯಾಂಡ್ರಾ ಟಾಟಿನ್ (32) ಮತ್ತು ಪ್ರಿಯಾ ಪುನಿಯಾ (22) ಮೊದಲ ವಿಕೆಟಿಗೆ 5 ಓವರ್‌ಗಳಲ್ಲಿ 50 ಪೇರಿಸಿದರು. ವನ್‌ಡೌನ್‌ನಲ್ಲಿ ಬಂದ ಹಲೀìನ್ ದೇವಲ್ 35 ರನ್ ಬಾರಿಸಿದರು. 37 ರನ್ ಹೊಡೆದ ನಾಯಕಿ ಕೌರ್ ಅವರದು ಹೆಚ್ಚಿನ ಗಳಿಕೆ (29 ಎಸೆತ, 4 ಬೌಂಡರಿ).
ದೇವಲ್ 19 ಎಸೆತಗಳಲ್ಲಿ ಸೊಗಸಾದ ಇನ್ನಿಂಗ್ಸ್ ಕಟ್ಟಿದರು. ಇದರಲ್ಲಿ 5 ಬೌಂಡರಿ ಒಳಗೊಂಡಿತ್ತು. ಇನ್ನಿಂಗ್ಸಿನ 2 ಸಿಕ್ಸರ್‌ಗಳು ಪ್ರಿಯಾ ಮತ್ತು ಡಿಯಾಂಡ್ರಾ ಅವರಿಂದ ಸಿಡಿಯಲ್ಪಟ್ಟವು. ಟ್ರೈಬ್ಲೇಜರ್ ಪರ ಹ್ಯಾಲಿ ಮ್ಯಾಥ್ಯೂಸ್ 29ಕ್ಕೆ 3, ಸಲ್ಮಾ ಖಾತುನ್ 30ಕ್ಕೆ 2 ವಿಕೆಟ್ ಕೆಡವಿದರು.
ಸಂಕ್ಷಿಪ್ತ ಸ್ಕೋರು: ಸೂಪರ್ ನೋವಾ 163 (ಹರ್ಮನ್‌ಪ್ರೀತ್ ಕೌರ್ 37, ಹಲೀìನ್ ದೇವಲ್ 35, ಡಿಯಾಂಡ್ರಾ ಟಾಟಿನ್ 32, ಹೇಲೆ ಮ್ಯಾಥ್ಯೂಸ್ 29ಕ್ಕೆ 3, ಸಲ್ಮಾ ಖಾತುನ್ 30ಕ್ಕೆ 2); ಟ್ರೈಬ್ಲೇಜರ್ 9 ವಿಕೆಟಿಗೆ 114 (ಸ್ಮತಿ ಮಂಧನಾ 34, ಜೆಮಿಮಾ ರಾಡ್ರಿಗಸ್ 24, ಪೂಜಾ ವಸ್ತ್ರಾಕರ್ 12ಕ್ಕೆ 4, ಸೊಫಿ ಎಕ್ಲೆಸ್ಟೋನ್ 19ಕ್ಕೆ 2, ಅಲನಾ ಕಿಂಗ್ 30ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಾಹಲ್-ಹೂಡಾ ಮಿಂಚು: ಮಳೆ ಕಾಡಿದ ಪಂದ್ಯದಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ
ಇಂದು ಶ್ರೀಲಂಕಾ ವಿರುದ್ಧ 3ನೇ ಟಿ20: ವನಿತೆಯರಿಗೆ ವೈಟ್ವಾಶ್ ಅವಕಾಶ
ಟಿ20 ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಮಳೆ ಅಡಚಣೆ, ಉಮ್ರಾನ್ ಮಲಿಕ್ ಪದಾರ್ಪಣೆ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿ: ವೀನಸ್ ದಾಖಲೆ ಮುರಿಯುವತ್ತ ಸ್ವಿಯಾಟೆಕ್
ರಣಜಿ ಟ್ರೋಫಿ ಫೈನಲ್: 108ರ ಸುಲಭ ಗುರಿಯನ್ನು ಮುಟ್ಟಿ ಚೊಚ್ಚಲ ಚಾಂಪಿಯನ್ಸ್ ಆದ ಮಧ್ಯ ಪ್ರದೇಶ
MUST WATCH
ರಸ್ತೆ ಮಧ್ಯೆಯೇ ಪ್ರವಾಸಿಗರ ಸೆಲ್ಪಿ… ಚಾರ್ಮಾಡಿ ಘಾಟ್ ನಲ್ಲಿ ವಾಹನ ಸವಾರರ ಪರದಾಟ
ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗ: ವಿಳಾಸ ಪತ್ತೆಗೆ ನೆರವಾಯಿತು ಫೇಸ್ ಬುಕ್
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಹೊಸ ಸೇರ್ಪಡೆ
ಕಲರ್ಫುಲ್ ಇವೆಂಟ್ನಲ್ಲಿ ‘’ಬೈರಾಗಿ”: ಜುಲೈ 1 ರಿಲೀಸ್
ಶ್ರೀಗಂಧದಲ್ಲಿ ಡಾ. ಪುನೀತ್ ರಾಜ್ಕುಮಾರ್ ಪುತ್ಥಳಿ
ಅವರ ದೇಹ ಮಾತ್ರ ವಾಪಸ್ ಬರಲಿದೆ…: ಸೇನಾ ಬಂಡಾಯ ಶಾಸಕರಿಗೆ ಸಂಜಯ್ ರಾವತ್ ಎಚ್ಚರಿಕೆ
ಒಂದೇ ದಿನ 45% ಏರಿಕೆ ಕಂಡ ಕೋವಿಡ್ ಪ್ರಕರಣಗಳ ಸಂಖ್ಯೆ; 17,073 ಹೊಸ ಪ್ರಕರಣಗಳು
ದನ ಮೇಯಿಸುತ್ತಿದ್ದ ಯುವತಿಯನ್ನು ಹೊತ್ತೊಯ್ದು ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ: ಆರೋಪಿ ಬಂಧನ