World Badminton ಚಾಂಪಿಯನ್‌ಶಿಪ್‌: ಪ್ರಣಯ್‌, ಸೇನ್‌, ಚಿರಾಗ್‌ ಫೇವರಿಟ್ಸ್‌

Team Udayavani, Aug 21, 2023, 6:28 AM IST

1—–adad

ಕೋಪನ್‌ಹೆಗನ್‌ (ಡೆನ್ಮಾರ್ಕ್‌): ಡೆನ್ಮಾರ್ಕ್‌ ರಾಜಧಾನಿ ಕೋಪ ನ್‌ಹೆಗನ್‌ 2023ರ BWF ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ಗೆ ಅಣಿಯಾಗಿದೆ. ಸೋಮವಾರದಿಂದ ಈ ಪ್ರತಿಷ್ಠಿತ ಕೂಟಕ್ಕೆ ಚಾಲನೆ ಲಭಿಸಲಿದೆ. ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಭಾರತದ ಪದಕಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಒಲಿಂಪಿಕ್ಸ್‌ ಸೀಸನ್‌ ಮುಂದಿ ರುವುದರಿಂದ ಎಲ್ಲರಿಗೂ ಇದು ಮಹತ್ವದ ಪಂದ್ಯಾವಳಿಯಾಗಿದೆ.

ಆದರೆ ಪ್ರಸಕ್ತ ಸೀಸನ್‌ನಲ್ಲಿ ಅಷ್ಟೇನೂ ಫಾರ್ಮ್ನಲ್ಲಿಲ್ಲದ ಪಿ.ವಿ. ಸಿಂಧು ಮೇಲೆ ಯಾರೂ ಅಷ್ಟೊಂದು ಭರವಸೆ ಇರಿಸಿಲ್ಲ. ಆದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಭಾರತದ ಅತ್ಯಂತ ಯಶಸ್ವಿ ಆಟಗಾರ್ತಿ ಎಂಬು ದನ್ನು ಮರೆಯುವಂತಿಲ್ಲ. 2019ರ ಚಾಂಪಿಯನ್‌ ಆಗಿರುವ ಸಿಂಧು ಗರಿಷ್ಠ 5 ಪದಕಗಳನ್ನು ಜಯಿಸಿದ್ದಾರೆ. 2011ರಿಂದ ಮೊದಲ್ಗೊಂಡು ಒಂದಲ್ಲ ಒಂದು ಪದಕ ಗೆಲ್ಲುತ್ತ ಬಂದಿರುವುದು ಸಿಂಧು ಹೆಗ್ಗಳಿಕೆ.
ಸಿಂಧು ಅವರಿಗೆ ಮೊದಲ ಸುತ್ತಿನ ಬೈ ಲಭಿಸಿದೆ. ಹೀಗಾಗಿ ಜಪಾನ್‌ನ ನೊಜೊಮಿ ಒಕುಹಾರ ಮತ್ತು ವಿಯೆಟ್ನಾಮ್‌ನ ಥುಯಿ ಲಿನ್‌ ಎನ್‌ಗುಯೆನ್‌ ನಡುವಿನ ವಿಜೇತರನ್ನು ಎದುರಿಸಲಿದ್ದಾರೆ.

13 ಪದಕ ಗೆದ್ದಿರುವ ಭಾರತ
1977ರಿಂದ ಮೊದಲ್ಗೊಂಡು ಈವರೆಗೆ ಭಾರತ 13 ಪದಕಗಳನ್ನು ಗೆದ್ದಿದೆ. ಸಿಂಧು ಜಯಿಸಿದ ಏಕೈಕ ಸ್ವರ್ಣ ಸೇರಿದಂತೆ 4 ಬೆಳ್ಳಿ ಹಾಗೂ 8 ಕಂಚಿನ ಪದಕಗಳು ಸೇರಿವೆ. ಭಾರತದ ಬ್ಯಾಡ್ಮಿಂಟನ್‌ ದಂತಕತೆ ಪ್ರಕಾಶ್‌ ಪಡುಕೋಣೆ 1983ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ನಕ್ಷೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್‌ಗೆ ವಿಶಿಷ್ಟ ಸ್ಥಾನ ಕಲ್ಪಿಸಿಕೊಟ್ಟಿದ್ದರು.

2021ರ ಆವೃತ್ತಿಯಲ್ಲಿ ಕೆ. ಶ್ರೀಕಾಂತ್‌ ಮತ್ತು ಲಕ್ಷ್ಯ ಸೇನ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಜಯಿಸಿದ್ದರು. ಕಳೆದ ವರ್ಷ ಚಿರಾಗ್‌-ಸಾತ್ವಿಕ್‌ ಜೋಡಿಗೆ ಕಂಚಿನ ಪದಕ ಒಲಿದಿತ್ತು. ಕಳೆದೆರಡು ಕೂಟಗಳ ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಎಚ್‌.ಎಸ್‌. ಪ್ರಣಯ್‌ ಈ ಬಾರಿ ನೆಚ್ಚಿನ ಆಟಗಾರನಾಗಿ ಮೂಡಿಬಂದಿದ್ದಾರೆ. ಮಲೇಷ್ಯಾ ಮಾಸ್ಟರ್ ಪ್ರಶಸ್ತಿ ಗೆದ್ದಿರುವ 9ನೇ ಶ್ರೇಯಾಂಕದ ಪ್ರಣಯ್‌ ಮೊದಲ ಸುತ್ತಿನಲ್ಲಿ ಫಿನ್ಲಂಡ್‌ನ‌ 56ನೇ ರ್‍ಯಾಂಕಿಂಗ್‌ ಆಟಗಾರ ಕಾಲ್ಲೆ ಕೊಲೊjನೆನ್‌ ವಿರುದ್ಧ ಸೆಣಸಲಿದ್ದಾರೆ.

ಲಕ್ಷ್ಯ ಸೇನ್‌ಗೆ ದುರ್ಬಲ ಎದುರಾಳಿ ಸಿಕ್ಕಿದ್ದಾರೆ. 110ನೇ ರ್‍ಯಾಂಕಿಂಗ್‌ನ ಮಾರಿಶಿಯಸ್‌ ಆಟಗಾರ ಜಾಜ್‌Õì ಜೂಲಿಯನ್‌ ಪೌಲ್‌ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.ಕೆ. ಶ್ರೀಕಾಂತ್‌ ಅವರಿಗೆ ಮೊದಲ ಸುತ್ತಿನಲ್ಲಿ ಕಠಿನ ಎದುರಾಳಿ ಸಿಕ್ಕಿದ್ದಾರೆ. ಇವರೆಂದರೆ ಜಪಾನ್‌ನ ಕೆಂಟ ನಿಶಿಮೊಟೊ. ಆದರೆ ಇವರೆದುರು ಶ್ರೀಕಾಂತ್‌ 6-3ರ ಮುನ್ನಡೆ ಹೊಂದಿರುವುದರಿಂದ ಆತ್ಮವಿಶ್ವಾಸಕ್ಕೇನೂ ಕೊರತೆ ಇಲ್ಲ.

ಸಿರಾಗ್‌-ಸಾತ್ವಿಕ್‌
ಭಾರತದ ಡಬಲ್ಸ್‌ ಜೋಡಿ ಯಾದ ಚಿರಾಗ್‌-ಸಾತ್ವಿಕ್‌ ಮೇಲೆ ಈ ಬಾರಿ ಬೆಟ್ಟದಷ್ಟು ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಕಾರಣ, ಇವರ ಪ್ರಚಂಡ ಫಾರ್ಮ್. ಸಾಲು ಸಾಲಾಗಿ ಇಂಡೋನೇಷ್ಯಾ ಓಪನ್‌, ಏಷ್ಯಾ ಚಾಂಪಿಯನ್‌ಶಿಪ್‌, ಸ್ವಿಸ್‌ ಓಪನ್‌ ಮತ್ತು ಕೊರಿಯಾ ಓಪನ್‌ ಚಾಂಪಿಯನ್‌ ಎನಿಸಿಕೊಂಡ ಹೆಗ್ಗಳಿಕೆ ಇವರದು. ದ್ವಿತೀಯ ಶ್ರೇಯಾಂಕದ ಭಾರತೀಯ ಜೋಡಿಗೂ ಮೊದಲ ಸುತ್ತಿನ ಬೈ ಲಭಿಸಿದೆ.

ವನಿತಾ ಡಬಲ್ಸ್‌ನಲ್ಲಿ ತ್ರಿಸಾ ಜಾಲಿ-ಗಾಯತ್ರಿ ಗೋಪಿಚಂದ್‌, ಅಶ್ವಿ‌ನಿ ಭಟ್‌-ಶಿಖಾ ಗೌತಮ್‌ ಕೂಡ ಸ್ಪರ್ಧೆಯಲ್ಲಿದ್ದಾರೆ. ಮಿಶ್ರ ಡಬಲ್ಸ್‌
ನಲ್ಲಿ ಕಣಕ್ಕಿಳಿಯುವವರೆಂದರೆ ರೋಹನ್‌ ಕಪೂರ್‌-ಎನ್‌. ಸಿಕ್ಕಿ ರೆಡ್ಡಿ, ವೆಂಕಟ ಪ್ರಸಾದ್‌-ಜೂಹಿ ದೇವಾಂಗನ್‌.

5ನೇ ಆತಿಥ್ಯದ ದಾಖಲೆ
ಕೋಪನ್‌ಹೆಗನ್‌ ದಾಖಲೆ 5ನೇ ಸಲ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಆತಿಥ್ಯ ವಹಿಸುತ್ತಿದೆ. ಇದಕ್ಕೂ ಮೊದಲು 1983, 1991, 1999 ಮತ್ತು 2014ರಲ್ಲಿ ಈ ಪ್ರತಿಷ್ಠಿತ ಪಂದ್ಯಾವಳಿ ನಡೆದಿತ್ತು. 2017ರಲ್ಲಿ ಶಟ್ಲ ಬ್ಯಾಡ್ಮಿಂಟನ್‌ಗೆ ತೆರೆದ “ದ ರಾಯಲ್‌ ಅರೆನಾ’ದಲ್ಲಿ ಸ್ಪರ್ಧೆಗಳು ನಡೆಯುತ್ತವೆ.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.