![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ವೃದ್ಧಿಮಾನ್ ಸಾಹಾ ಅಮೋಘ ಕ್ಯಾಚ್!
Team Udayavani, Apr 12, 2017, 3:15 PM IST
![SAHA.jpg](https://www.udayavani.com/wp-content/uploads/2017/04/12/SAHA-620x403.jpg)
ಇಂದೋರ್: ಟೀಮ್ ಇಂಡಿಯಾದ ಮೊದಲ ಆಯ್ಕೆಯ ಕೀಪರ್ ವೃದ್ಧಿಮಾನ್ ಸಾಹಾ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯ. ಸೋಮವಾರ ರಾತ್ರಿ ಆರ್ಸಿಬಿ ಎದುರಿನ ಪಂದ್ಯದಲ್ಲಿ ಇವರ ಅಮೋಘ ಮಟ್ಟದ ಕೀಪಿಂಗ್ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.
ಸಾಹಾ ದಕ್ಷಿಣ ಆಫ್ರಿಕಾ “ಫೀಲ್ಡಿಂಗ್ ಗೋಡೆ’ ಜಾಂಟಿ ರೋಡ್ಸ್ ಅವರನ್ನು ನೆನಪಿಸಿದ್ದಾರೆ, ಅವರು ಡೈವ್ ಮಾಡಿ ಪಡೆದ ಕ್ಯಾಚ್ ಅಷ್ಟೊಂದು ಅಮೋಘವಾಗಿತ್ತು ಎಂಬೆಲ್ಲ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಪಂಜಾಬ್ ಕೀಪರ್.
14ನೇ ಓವರಿನ ಮೊದಲ ಎಸೆತವದು. ಬೌಲರ್ ವರುಣ್ ಆರೋನ್. ಕ್ರೀಸಿನಲ್ಲಿದ್ದವರು ಮನ್ದೀಪ್ ಸಿಂಗ್. ಅದೊಂದು ಶಾರ್ಟ್ ಬಾಲ್ ಆಗಿತ್ತು. ಪುಲ್ ಮಾಡುವ ವೇಳೆ ಮನ್ದೀಪ್ ಬ್ಯಾಟಿಗೆ ಸವರಿದ ಚೆಂಡು ಕ್ಷೇತ್ರರಕ್ಷಕರಿಲ್ಲದ ಜಾಗದಲ್ಲಿ ಹೋಗಿ ಬೀಳಲಿದೆ ಎಂಬುದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಸಾಹಾ ಮಾತ್ರ ಬೇರೆಯೇ ಲೆಕ್ಕಾಚಾರದಲ್ಲಿದ್ದರು.
ಚೆಂಡನ್ನು ಅತ್ಯಂತ ಸೂಕ್ಷ್ಮವಾಗಿ “ಜಡ್ಜ್’ ಮಾಡಿದ ಸಾಹಾ ಬೌಂಡರಿ ಲೈನ್ನತ್ತ ಮಿಂಚಿನಂತೆ ಧಾವಿಸಿ, ಕೊನೆಯ ಕ್ಷಣದಲ್ಲಿ ತನ್ನ ಓಟದ ದಿಕ್ಕನ್ನೇ ಬದಲಿಸಿ ಬಲ ಭಾಗಕ್ಕೆ ಡೈವ್ ಹೊಡೆದು, ಫೈನ್ ಲೆಗ್ನತ್ತ ಹಾರಿ ಚೆಂಡನ್ನು ಬೊಗಸೆಗೆ ಸೇರಿಸಿಕೊಂಡೇ ಬಿಟ್ಟರು. ಇದು ಕೀಪರ್ ಪಡೆದ ಅತ್ಯಮೋಘ ಕ್ಯಾಚ್ ಎಂಬ ಪ್ರಶಂಸೆ ಎಲ್ಲರದಾಗಿತ್ತು!
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.