ಕೃಷಿ ಅಧ್ಯಯನ‌: ವಿದೇಶಗಳ ಪ್ರವಾಸ ಮುಗಿಸಿದ ಸಚಿವ ಬಿ.ಸಿ.ಪಾಟೀಲ್


Team Udayavani, Aug 6, 2022, 6:03 PM IST

bc-patil

ಬೆಂಗಳೂರು: ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಿನ್ನಲೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲರು ಕಳೆದ ಜುಲೈ 26 ರಿಂದ‌ ಆಗಸ್ಟ್ 6 ರವರೆಗೆ ಜರ್ಮನಿ , ಸ್ವಿಜರ್ಲ್ಯಾಂಡ್ ಹಾಗೂ ಇಟಲಿ ದೇಶಗಳ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗಿನ ಅಧ್ಯಯನ ಪ್ರವಾಸ ಯಶಸ್ವಿಯಾಗಿ ಪೂರೈಸಿದ್ದಾರೆ.

ರೈತರಿಗೆ ಹಾಗೂ ರೈತೋದ್ಯಮಿಗಳಿಗೆ ಲಾಭ ತಂದುಕೊಡುವ ನಿಟ್ಟಿನಲ್ಲಿ ಹಾಗೂ ರೈತರನ್ನು ಕೃಷಿಯತ್ತ ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ “ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳ” ರಾಜಧಾನಿ‌ ಬೆಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿದೆ.ಬರುವ ನವಂಬರ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ಮೇಳವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದರಿಂದ , ಜಾಗತಿಕ ಕೃಷಿ ಸಂಸ್ಥೆಗಳ ಮುಖ್ಯಸ್ಥರನ್ನು ಹಾಗೂ ಜಾಗತಿಕ ಕೃಷಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿರುವ ರಫ್ತುದಾರರನ್ನು ಹಾಗೂ ಖಾಸಗಿ ಸಂಸ್ಥೆಗಳ ಮುಖ್ಯಸ್ಥರನ್ನು ಕೃಷಿ ಸಚಿವರು ಖುದ್ದು ಭೇಟಿ ನೀಡಿ ಆಹ್ವಾನಿಸಿದ್ದಾರೆ.

ಅಲ್ಲಿನ ಹಾಗೂ ನಮ್ಮ‌ರಾಜ್ಯದ ರೈತರ ಕೃಷಿ ಚಟುವಟಿಕೆಗಳು ಕೃಷಿ ಇಲಾಖೆಯ ಸಾಧನೆಗಳು‌ ಹಾಗೂ ರೈತೋಪಯೋಗಿ ಯೋಜನೆಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಚರಪಡಿಸುವ ಉದ್ದೇಶವನ್ನೊಳಗೊಂಡ ಸಚಿವ ಬಿ.ಸಿ.ಪಾಟೀಲ್ ಅವರು ಅಧ್ಯಯನ‌ ಪ್ರವಾಸದಲ್ಲಿ ಜರ್ಮನಿ ನ್ಯೂರನ್‌ಬರ್ಗ್‌ದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಸಾವಯವ ಸಮ್ಮೇಳನ ( BIOFAC – 2022 ) ದಲ್ಲಿ ಭಾಗವಹಿಸಿ ವಿವಿಧ ದೇಶಗಳಿಂದ ಭಾಗವಹಿಸಿದ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ , ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದರು.

ವಿಶೇಷವಾಗಿ ಶ್ರೀಲಂಕಾ ದೇಶದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಅವರೊಂದಿಗೆ ಶ್ರೀಲಂಕಾ ದೇಶದ ಸಾವಯವ ಕೃಷಿ ಅನುಷ್ಠಾನ ಹಾಗು ಸಾವಯವ ಪದಾರ್ಥಗಳ ರಫ್ತು ಸಾಮರ್ಥ್ಯ ಕುರಿತು ಚರ್ಚಿಸಿದರು . ಜಾಗತಿಕವಾಗಿ Anti Oxidant Blended Coffee ಉತ್ಪಾದಿಸುವ ಸುಪ್ರಸಿದ್ಧ ಸಂಸ್ಥೆಯ ಸಿಇಓ ಆದ ಅಸಂಕ ಡಿಸಿಲ್ವಾ ಅವರೊಂದಿಗೆ ರಾಜ್ಯದ ಸಾವಯವ ಕಾಫಿ ರಫ್ತಿನ ಅವಕಾಶಗಳ ಕುರಿತು ಚರ್ಚಿಸಿದರು .

ಜುಲೈ 27 ರಿಂದ 29 ರವರೆಗೆ ಫಲದಾ , ನೇಚರ್ ಬಯೋಫುಡ್ , ಆರ್ಯ ಫುಡ್ಸ್ ಹಾಗೂ IFOAM ನಿರ್ದೇಶಕರೊಂದಿಗೆ ಚರ್ಚೆ, ಜುಲೈ 30 ರಿಂದ ಆಗಸ್ಟ್ 2 ರವರೆಗೆ ಸ್ವಿಡ್ಕರ್‌ಲ್ಯಾಂಡ್ ದೇಶದ ಜ್ಯೂರಿಚ್ ನಗರದ ಫ್ರಿಕ್‌ದಲ್ಲಿರುವ ಅಂತರರಾಷ್ಟ್ರೀಯ ಸಾವಯವ ಸಂಶೋಧನಾ ಸಂಸ್ಥೆ ( FIBL ) ಗೆ ಭೇಟಿ ನೀಡಿ ಅವರು ಭಾರತ ದೇಶದಲ್ಲಿ ಕೈಗೊಂಡಿರುವ ಸಂಶೋಧನಾ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಸಂಸ್ಥೆಯೊಂದಿಗೆ ಕೃಷಿ ಇಲಾಖೆಯಿಂದ ಒಂಡಬಂಡಿಕೆ ಮಾಡಿಕೊಂಡರು.ಅಲ್ಲದೇ ಮ್ಯುನಿಚ್ ನಗರದ ಕನ್ನಡ ಸಂಘದ ಪಧಾದಿಕಾರಿಗಳೊಂದಿಗೆ ಕೃಷಿ ಬಗ್ಗೆ ಚರ್ಚಿಸಿದರು.

ಆಗಸ್ಟ್ 3ರಿಂದ‌ 5 ರವರೆಗೆ ಇಟಲಿಯ ರೋಮ್ ಹಾಗೂ ಮಿಲಾನ್ ನಗರಗಳಲ್ಲಿರುವ ಜಾಗತಿಕ ಕೃಷಿ ಸಂಸ್ಥೆಗಳ ಹಾಗೂ ಭಾರತ ದೇಶದ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮತ್ತು ಇಟಲಿ ದೇಶದ ವರ್ತಕರು ಹಾಗೂ ಇಟಲಿಯಲ್ಲಿ ನೆಲೆಸಿದ ಭಾರತೀಯ ವರ್ತಕರೊಂದಿಗೆ ಸಭೆಗಳನ್ನು ನಡೆಸಿದರು.

ಇಟಲಿ ದೇಶದ ರೋಮ್ ನಗರದಲ್ಲಿ ಜಾಗತಿಕ ಆಹಾರ ಯೋಜನಾ ಸಂಸ್ಥೆಯ ಉಪಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಜುನೇಜಾ ಅವರೊಂದಿಗೆ , ವಿಶ್ವ ಆಹಾರ ಸಂಸ್ಥೆಯ ಮುಖ್ಯ ವಿಜ್ಞಾನಿ ಇಸ್‌ಮಹಾನ ಇಪಿ ಹಾಗೂ ಹಿರಿಯ ಸಲಹೆಗಾರ ಮೋನಾ ಹಾಗೂ ವಿಶ್ವ ಆಹಾರ ಸಂಸ್ಥೆಯ ಉಪಮಹಾ ನಿರ್ದೇಶಕ ಬೇತ್ ಬೆಕಡಾಲ್ ಇವರೊಂದಿಗೆ , ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ ಸಂಸ್ಥೆಯ ಉಪಾಧ್ಯಕ್ಷರಾದ ಡೊಮಿನಿಕ್ ಜಿಲ್ಲರ್ ಮತ್ತು ಭಾರತೀಯ ಕೌನ್ಸಲೇಟ್ ಜನರಲ್ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ- 2023 ನ್ನು ಆಚರಿಸಲು ಕರ್ನಾಟಕ ಸರ್ಕಾರವು ಇಲ್ಲಿಯವರೆಗೆ ರೂಪಿಸಿದ ಕಾರ್ಯಕ್ರಮಗಳ ಕುರಿತು ಪ್ರಸ್ತುತ ಪಡಿಸಿ ಕರ್ನಾಟಕ ರಾಜ್ಯದ ಸಿರಿಧಾನ್ಯಗಳ ಉತ್ಪಾದನೆ ಕುರಿತು ವಿವರಿಸಿದರು.

ಬೆಂಗಳೂರಿನಲ್ಲಿ ನವಂಬರ್ -2022 ರಲ್ಲಿ ಆಯೋಜಿಸುತ್ತಿರುವ ಅಂತಾರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯಗಳ ವಾಣಿಜ್ಯ ಮೇಳಕ್ಕೆ ಜಾಗತಿಕ ಕೃಷಿ ಸಂಸ್ಥೆಯ ಮುಖ್ಯಸ್ಥರನ್ನು ಸಿರಿಧಾನ್ಯ ಮೇಳವನ್ನು ಯಶಸ್ವಿಗೊಳಿಸುವಂತೆ ಆಹ್ವಾನಿಸಿದರು.

ನಮ್ಮ ರಾಜ್ಯದ‌‌‌ ರೈತರೂ ಸೇರಿದಂತೆ ದೇಶದ ಅನ್ನದಾತರು ಯಾವ ರೀತಿ ತಮ್ಮ ಕೃಷಿ ಚಟುವಟಿಕೆಗಳನ್ನು ಲಾಭಗೊಳಿಸಬಹುದೆಂಬುದನ್ನು ತುಲಾನಾತ್ಮಕವಾಗಿ ಅಧ್ಯಯನ ಪ್ರವಾಸದಲ್ಲಿ ಸಚಿವರು ಮನದಟ್ಟು ಮಾಡಿಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಧ್ಯಯನ‌ ಪ್ರವಾಸದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ್ ಅವರು , ರಾಜ್ಯದ ಸಾವಯವ ಉನ್ನತ ಮಟ್ಟದ ಅಧಿಕಾರಯುಕ್ತ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಆನಂದ ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಆಡಳಿತ ಮಂಡಳಿಯ ಸದಸ್ಯ ಸುರೇಶ ಮರಗದ, ರೈತ ನಿರಂಜನ ಬಾಬು ಮತ್ತು ಸಚಿವರ ವಿಶೇಷ ಅಧಿಕಾರಿ ಮಂಜು ಎ.ಸಿ ಸಹ ಇದ್ದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.