
ಬೆಂಗಳೂರು: ಒತ್ತುವರಿ ತೆರವು ಕಾರ್ಯಾಚರಣೆ ಆರಂಭ
ಮಹದೇವಪುರ ವಲಯದಲ್ಲಿ ಗರ್ಜಿಸಿದ ಬುಲ್ಡೋಜರ್
Team Udayavani, Sep 13, 2022, 7:00 AM IST

ಬೆಂಗಳೂರು: ಹತ್ತು ದಿನಗಳ ಹಿಂದೆ ಸುರಿದ ಭಾರೀ ಮಳೆ, ಸಿಲಿಕಾನ್ ಸಿಟಿ ಬೆಂಗಳೂರಿನ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಕಿದ್ದ ಬೆನ್ನಲ್ಲೇ, ರಾಜ್ಯ ಸರ್ಕಾರ ಈಗ ಒತ್ತುವರಿದಾರರ ಮೇಲೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.
ಸೋಮವಾರ ಬುಲ್ಡೋಜರ್ ಕಾರ್ಯಾಚರಣೆ ಶುರುಮಾಡಿದ್ದು, ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದವರಿಗೆ ಬಿಸಿ ಮುಟ್ಟಿಸಲು ಶುರು ಮಾಡಿದೆ. ಸೋಮವಾರ ಬೆಳಗ್ಗೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಡವ, ಬಲ್ಲಿದರೆನ್ನದೇ, ಯಾರ ಒತ್ತಡಕ್ಕೂ ಮಣಿಯದೇ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದರು. ಇದರ ಬೆನ್ನಲ್ಲೇ ಬಿಬಿಎಂಪಿ ಒಟ್ಟು 15 ವಲಯಗಳಲ್ಲಿ ಬುಲ್ಡೋಜರ್ ಮೂಲಕ ತೆರವು ಕಾರ್ಯಾಚರಣೆ ತೀವ್ರಗೊಳಿಸಿದೆ.
ಎಲ್ಲೆಲ್ಲಿ ಕಾರ್ಯಾಚರಣೆ?
ಮಹದೇವಪುರ ವ್ಯಾಪ್ತಿಯ ಚೆಲ್ಲಘಟ್ಟ, ಚಿನ್ನಪ್ಪನ ಹಳ್ಳಿ, ಬಸವಣ್ಣನಗರ, ಸ್ಪೈಸ್ ಗಾರ್ಡನ್ ಹಾಗೂ ಬಸವನಪುರ ವಾರ್ಡ್‌ನ ಎಸ್‌ಆರ ಲೇಟ್‌ನ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ ಭೂಮಾಪಕರು ಗುರುತಿಸಿದ ಒತ್ತುವರಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಚಿನ್ನಪ್ಪನಹಳ್ಳಿಯಿಂದ ಮುನ್ನೇನಕೊಳಲು ಕೆರೆ ನಡುವಿನ ಎಇಸಿಎಸ್ ಲೇಔಟ್ ವ್ಯಾಪ್ತಿಯಲ್ಲಿ ಸಾಯಿ ಕಣ್ಣಿನ ಆಸ್ಪತ್ರೆಯ ಕಾಂಪೌಂಡ್ ಗೋಡೆ, ರಾಘವ ಸೂಪರ್ ಮಾರ್ಕೆಟ್ ಸೇರಿ 3 ಕಟ್ಟಡಗಳು, 4 ಕಾಂಪೌಂಡ್ ಗೋಡೆ ಹಾಗೂ ರಸ್ತೆಯನ್ನು ತೆರವು ಮಾಡಿ ವಶಕ್ಕೆ ಪಡೆಯಲಾಯಿತು.
ಚೆಲ್ಲಘಟ್ಟ ವ್ಯಾಪ್ತಿಯಲ್ಲಿ ಪ್ರಸ್ಟೀಜ್ ಸಂಸ್ಥೆ ವಶದಲ್ಲಿದ್ದ ಖಾಲಿ ಜಾಗ, ಕಾಂಪೌಂಡ್ ಗೋಡೆ, ಹೂಡಿ ಬಳಿ ಗೋಪಾಲನ್ ಶಾಲೆ, ಮಹಾವೀರ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆ, ಸ್ಪ್ರೆ„ಸ್ ಗಾರ್ಡನ್ ಬಳಿ 4 ಕಾಂಪೌಂಡ್ ಗೋಡೆಗಳು ಹಾಗೂ ರಸ್ತೆ, ಕೆಆರ್ ಪುರದ ಬಸವನಪುರ ವಾರ್ಡ್‌ನ ಎಸ್‌ಆರ್ ಲೇಔಟ್ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಆವರಣದಲ್ಲಿ 77 ಮೀ. ಉದ್ದ ಹಾಗೂ 2.6 ಮೀ ಅಗಲದ ಮಳೆ ನೀರುಗಾಲುವೆಗೆ ಅಳವಡಿಸಿದ್ದ ಸ್ಲಾéಬ್ ಅನ್ನು ತೆರವುಗೊಳಿಸಲಾಗಿದೆ.
ರಾಜಕಾಲುವೆ ಮೇಲೆ ಮೈದಾನ
ಮಹದೇವಪುರದ ಬಸವನಗರದ ಗೋಪಾಲನ್ ಕಾಲೇಜು ಆವರಣದಲ್ಲಿದ್ದ ರಾಜಕಾಲುವೆಯನ್ನು ಒತ್ತು ಮಾಡಲಾಗಿದೆ. ಈ ಜಾಗದಲ್ಲಿ ಮೈದಾನ ನಿರ್ಮಿಸಿ ರಾಜಕಾಲುವೆಯ ಕುರುಹೇ ಇಲ್ಲದಂತೆ ಮಾಡಲಾಗಿತ್ತು. ಆ ಜಾಗದಲ್ಲಿದ್ದ ರಾಜಕಾಲುವೆಗ ಜಾಗವನ್ನು ಮಾರ್ಕಿಂಗ್ ಮಾಡಿ ವಶಕ್ಕೆ ಪಡೆಯಲಾಯಿತು. ಇದೇ ವೇಳೆ, ಸ್ಥಳೀಯ ನಿವಾಸಿಗಳು ಮುನ್ಸೂಚನೆ ಇಲ್ಲದೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಿ ಇಲ್ಲವೇ ಇಲ್ಲ
ಸಿಲಿಕಾನ್ ಸಿಟಿಯಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಯಾವುದೇ ಮುಲಾಜಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಕಟ್ಟಡ,ಮನೆ ಕಟ್ಟಿರುವವರು, ಯಾರು ಕಾಲುವೆ ನೀರನ್ನು ಹರಿಸಲು ತೊಂದರೆ ಮಾಡಿದ್ದಾರೆ, ಕೆಲವರು ರಾಜಕಾಲುವೆಯನ್ನು ಮುಚ್ಚಿದ್ದಾರೆ. ಮಳೆ ನೀರು ಚರಂಡಿಗೆ ಅಡ್ಡಿಯಾಗಿದ್ದರೆ, ಅವುಗಳನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ಬಾರಿಯ ಮಳೆಯಿಂದಾಗಿ ಪ್ರವಾಹ ಉಂಟಾಗಿ ಐಟಿ-ಬಿಟಿ ಸೇರಿದಂತೆ ಎಲ್ಲರಿಗೂ ತೊಂದರೆಯಾಗಿತ್ತು. ಈ ಮಧ್ಯೆ ಹಲವಾರು ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿ ನಿರ್ದೇಶನ ಪಡೆಯಲಾಗಿದೆ. ಕೋರ್ಟ್‌ನಲ್ಲೂ ಗಂಭೀರವಾಗಿ ಇವುಗಳ ಮಾಹಿತಿಯನ್ನು ನೀಡಲಾಗುವುದು. ಈ ಬಾರಿ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
