ಭಟ್ಕಳ: ಐಶಾರಾಮಿ ಕಾರಿನಲ್ಲಿ 400 ಕೆ.ಜಿ ಗೋಮಾಂಸ ಸಾಗಾಟ; ಓರ್ವ ಬಂಧನ,ಮೂವರು ಎಸ್ಕೇಪ್
Team Udayavani, May 19, 2022, 8:41 PM IST
ಭಟ್ಕಳ: ಐಶಾರಾಮಿ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಓರ್ವನನ್ನು ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದು,ಇನ್ನೂ ಮೂವರು ಪರಾರಿಯಾಗಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಭಟ್ಕಳದ ಬೆಂಡಿಕಾನ್ ನಿವಾಸಿ ಸೈಯದ್ ಮೊಹಿದ್ದೀನ್ ಅಲಿ ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಐಶಾರಾಮಿ ಕಾರಿನಲ್ಲಿ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿಯನ್ನು ಪಡೆದ ಗ್ರಾಮೀಣ ಠಾಣೆಯ ಸಬ್ ಇನ್ಸಪೆಕ್ಟರ್ ರತ್ನಾ ಕೆ.ಎಸ್. ಹಾಗೂ ಸಿಬ್ಬಂದಿಗಳು ಶಿರಾಲಿಯ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಕಾರನ್ನು ವಶಪಡಿಸಿಕೊಂಡಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದು, ಕಾರಿನಲ್ಲಿದ್ದ ಇನ್ನೂ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಉಳಿದ ಮೂವರು ಆರೋಪಿಗಳನ್ನು ಆಜಾದ್ ನಗರದ ಸಮೀರ್ ಮಹಮ್ಮದ್ ಹುಸೇನ್ ಸಾಬ್ ಯಾನೆ ಗಜಬರ್, ಹನೀಫಾಬಾದ್ ನಿವಾಸಿ ಇಬ್ರಾಹಿಂ ಮಹಮ್ಮದ್ ಹುಸೇನ್ ಹವಾ ಹಾಗೂ ತಗ್ಗರಗೋಡ ನಿವಾಸಿ ನಾಸಿರ್ ಎನ್ನಲಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಾರಿನಲ್ಲಿ ಒಟ್ಟು 400 ಕೆ.ಜಿ.ಯಷ್ಟು ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಇವರ ಕಾರು ವೇಗವಾಗಿ ಬರುತ್ತಿರುವುದನ್ನು ಕಂಡು ಶಿರಾಲಿಯ ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಿ ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ ದನದ ಮಾಂಸ ಇರುವುದು ಕಂಡು ಬಂದಿತ್ತು. ದನದ ಮಾಂಸದ ಮೌಲ್ಯ ಸುಮಾರು 80 ಸಾವಿರ ಎನ್ನಲಾಗಿದೆ.
ಗೋಮಾಂಸ ಹಾಗೂ ಕಾರು ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎಸ್.ಪಿ.ಸುಮನ್ ಪೆನ್ನೇಕರ್, ಹೆಚ್ಚುವರಿ ಎಸ್.ಪಿ. ಬದರೀನಾಥ, ಡಿ.ವೈ.ಎಸ್.ಪಿ. ಕೆ.ಯು.ಬೆಳ್ಳಿಯಪ್ಪ, ಹಾಗೂ ಸಿ.ಪಿ.ಐ. ಮಹಾಬಲೇಶ್ವರ ನಾಯ್ಕ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಗ್ರಾಮೀಣ ಸಬ್ ಇನ್ಸಪೆಕ್ಟ್ರ್ ರತ್ನಾ ಎಸ್. ಕೆ. ಅವರು ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತದಲ್ಲಿ ಮೇ ತಿಂಗಳಲ್ಲಿ19 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ: ಹೈಕೋರ್ಟ್ ನೋಟಿಸ್
ಜಗನ್ನಾಥ ರಥಯಾತ್ರೆ ಈಗ ಅಬಾಧಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಒಪ್ಪಿಗೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಮೊಬೈಲ್, ಇಂಟರ್ನೆಟ್ ಸೇವೆ ಸ್ಥಗಿತ?