ಬೆಂಗಳೂರು ಟೆಕ್ ಸಮ್ಮಿಟ್‌: ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ; ಸಿಎಂ ಬೊಮ್ಮಾಯಿ

Team Udayavani, Nov 16, 2022, 4:26 PM IST

ಬೆಂಗಳೂರು ಟೆಕ್ ಸಮ್ಮಿಟ್‌: ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ; ಸಿಎಂ ಬೊಮ್ಮಾಯಿ

ಬೆಂಗಳೂರು: ಉದ್ಯಮಿಗಳು ಆವಿಷ್ಕಾರ ಮಾಡುವುದರ  ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಿ ಸರ್ಕಾರಕ್ಕೂ ಅದಾಯ ತರುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಚುಯಲ್ ಆಗಿ ಉದ್ಘಾಟಿಸಿದ ಬೆಂಗಳೂರು ಟೆಕ್ ಸಮ್ಮಿಟ್ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪರಿಸರ ಸ್ನೇಹಿ ವಾತಾವರಣ ಅಗತ್ಯ: ಸೃಜನಶೀಲತೆ ಹಲವಾರು ಆಯಾಮಗಳನ್ನು ಒಳಗೊಂಡಿದೆ. ನಾವು ಜಾಗತಿಕವಾಗಿ  ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ.  ಜಗತ್ತು ಸಮಸ್ಯೆಗಳಿಂದ ಮುಳುಗುತ್ತಿದೆ. ಹಣಕಾಸು ಮೂಲಗಳು ಪ್ರತಿ ಕ್ಷಣವೂ ಇಳಿಮುಖವಾಗುತ್ತಿದೆ. ನಾವು ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದರಿಸಬೇಕಾಗುತ್ತದೆ. ನಮ್ಮ ಪೂರ್ವಜರು ವ್ಯವಸ್ಥಿತವಾದ ಜೀವನ ಮಾಡುತ್ತಿದ್ದರು. ನಾವು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ವನ್ನು ನೀಡಬೇಕು.  ಭವಿಷ್ಯ ದಿಂದ ನಾವು ಕಳ್ಳತನ ಮಾಡಬಾರದು. ಭವಿಷ್ಯಕ್ಕಾಗಿ ಭೂಮಿಯನ್ನು ಉಳಿಸಬೇಕು.  ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಚಿಂತನೆ ಅಗತ್ಯ.

ಯಾವುದೇ ತಂತ್ರಜ್ಞಾನ ಬಂದರೂ ಈ ಪರಿಸರವನ್ನು ಉಳಿಸುವ ಗಣ ಹೊಂದಿರಬೇಕು. ಡಿಜಿಟಲ್  ಅಂತರ ವನ್ನು ಕಡಿಮೆ ಮಾಡುವತ್ತಲೂ ನಾವು ಗಮನಹರಿಸಬೇಕು.  ಪರಿಸರ ಸ್ನೇಹಿ ವಾತಾವರಣ ಹೊಂದಬೇಕು‌.  ಪರಿಸರ ಸ್ನೇಹಿ ತಂತ್ರಜ್ಞಾನ, ನಾವೀನ್ಯತೆ ಹಾಗೂ ಇಕೋ ಇಕನಾಮಿಕ್ಸ್ ನ್ನು  ಸಾಧ್ಯವಾಗಿಸಬೇಕು.

ಇದನ್ನೂ ಓದಿ: ಶ್ರದ್ದಾಳ ತಲೆಗಾಗಿ ಪೊಲೀಸರ ಶೋಧ: ಆರೋಪಿ ಅಫ್ತಾಬ್ ಮಂಪರು ಪರೀಕ್ಷೆಗೆ ಕೋರ್ಟ್ ಅಸ್ತು

ಐಟಿ ಬಿಟಿ, ಕೃತಕ ಬುದ್ಧಿಮತ್ತೆ  ನಮ್ಮ ಸಂಪನ್ಮೂಲಗಳನ್ನು ಉಳಿಸಿ  ರಕ್ಷಣೆ ಮಾಡುವ ಸಾಧ್ಯತೆ ಇದೆ. ಮಾನವ ಕುಲಕ್ಕೆ ಯಾವುದು ಅನುಕೂಲವಾಗುತ್ತದೆ ಎನ್ನುವುದನ್ನು ನೀವೇ ಪರೀಕ್ಷಿಸಬೇಕು. ತಂತ್ರಜ್ಞಾನ ನಮಗೆ ಮಾಹಿತಿಯ ಕಣಜವನ್ನೇ ನಮ್ಮ ಮುಂದಿರಿಸಿದೆ.  ನವೀಕರಿಸಬಹುದಾದ  ಇಂಧನ ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.

ಸರಳ ನಗರ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಿ: ಮೈಸೂರು ಮಹಾರಾಜರು ವಿಜ್ಞಾನ ತಂತ್ರಜ್ಞಾನಕ್ಕೆ , ಶಿಕ್ಷಣಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ‌ . ನಂತರ ಉದ್ಯಮಕ್ಕೆ ಆದ್ಯತೆ ನೀಡಿದ್ದಾರೆ. ಈಗ ಐಟಿ ಬಿಟಿ ಬಂದಿದೆ.  ಬೆಂಗಳೂರಿಗೆ ಬಂದವರು ಐಟಿ ಬಿಟಿ ಕಂಪನಿಗಳಿಗೆ ಭೇಟಿ ನೀಡುತ್ತಾರೆ. ಮೊದಲು ಸಂಪತ್ತು ಉಳ್ಳವರ ಕಾಲವಿತ್ತು.  ಈಗ ಜ್ಞಾನ ಇರುವವರ ಕಾಲ. ಬೆಂಗಳೂರಿಗೆ ಪ್ರತಿದಿನ 5000 ಕ್ಕೂ ಹೆಚ್ಚು ಇಂಜನೀಯರ್ ಗಳು  ಬಂದು ಹೋಗುತ್ತಾರೆ.  ಬೆಂಗಳೂರಿನಲ್ಲಿ ಸುಮಾರು 400 ಆರ್ ಆಂಡ್ ಡಿ ಸೆಂಟರ್ ಇವೆ. ಬಿಯಾಂಡ್ ಬೆಂಗಳೂರು ಸಾಕಾರಗೊಳಿಸಲು ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಕಡೆಗಳಲ್ಲಿ  ಐಟಿ ಉದ್ಯಮಕ್ಕೆ ಆದ್ಯತೆ ನೀಡುತ್ತೇವೆ.

ಮುಂದಿನ 10 ವರ್ಷದಲ್ಲಿ ನಗರೀಕರಣ ಹೆಚ್ಚಳವಾಗಲಿದೆ. ಭಾರತದಲ್ಲಿ ಶೇ 40% ರಷ್ಟು ನಗರೀಕರಣವಾಗಲಿದೆ. ಹೀಗಾಗಿ ಐಟಿ ಬಿಟಿ ಕಂಪನಿಗಳು ಸರಳ ನಗರೀಕರಣ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ದಿ ಪಡಿಸಲು ಕರೆ ನೀಡಿದರು.

ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ:

ಆರೋಗ್ಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕು.  ದೇಶದಲ್ಲಿ ಒಂದು ವರ್ಷದಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ 7 ಕೋಟಿ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 6 ಹೊಸ ನಗರಗಳ ನಿರ್ಮಾಣ ಮಾಡಲಾಗುತ್ತಿದೆ. ಕಲಬುರ್ಗಿ, ಹುಬ್ಬಳ್ಳಿ ಧಾರವಾಡ, ಮೈಸೂರು, ಮಂಗಳೂರು ಸುತ್ತ ಹೊಸ ನಗರಗಳು ಬರಲಿವೆ.

ಬೆಂಗಳೂರಿನ ಪಕ್ಕ ಹೊಸ ನಗರ‌ ನಿರ್ಮಾಣ ಮಾಡಲಾಗುತ್ತದೆ. ಜ್ಞಾನ, ವಿಜ್ಞಾನ ಹಾಗೂ ಟೆಕ್ ಸಿಟಿ ನಿರ್ಮಾಣ ಮಾಡಲಾಗುತ್ತಿದ್ದು,  ಇದು ವಿಮಾನ ನಿಲ್ದಾಣಕ್ಕೆ ಹತ್ತಿರವಿರಲಿದೆ. ಆರು ತಿಂಗಳೊಳಗೆ ಈ ನಗರ ನಿರ್ಮಾಣ ದ ಬಗ್ಗೆ ಘೋಷಣೆ ಮಾಡಲಿದ್ದು, ಯೋಜನೆಯನ್ನು ರೂಪಿಸಲಾಗುವುದು.ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಅನೇಕ ಕಾರ್ಯಕ್ರಮಗಳಿದ್ದು, ಸರ್ಕಾರದ ವತಿಯಿಂದ ಇನ್ನಷ್ಟು ಕಾರ್ಯಕ್ರಮ ರೂಪಿಸಬೇಕಿದೆ. ಸ್ಟಾರ್ಟ್ ಅಪ್ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಿಸಿದ್ದು ಇದೂ ಕೂಡ ಆರು ತಿಂಗಳಲ್ಲಿ ಸ್ಥಾಪಿಸಲಾಗುವುದು.  ನಮ್ಮ ಪ್ರಧಾನಿಗಳು ಬಿಐಎಎಲ್ ನ 2 ನೇ ಟರ್ಮಿನಲ್ ಉದ್ಘಾಟನೆ ಮಾಡಿದ್ದಾರೆ.  ಜಗತ್ತಿನಲ್ಲಿಯೇ ಅತ್ಯಂತ ಸುಂದರವಾದ ಟರ್ಮಿನಲ್ ಇದಾಗಿದೆ. ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ.  ತಂತ್ರಜ್ಞಾನಗಳೆಲ್ಲವೂ ವಿಶ್ವದ ಭವಿಷ್ಯಕ್ಕೆ ಮಾನವ ಅಭಿವೃದ್ಧಿ ಸಮಾವೇಶದ ಧ್ಯೇಯವಾಗಲಿ ಎಂದರು.

ಕೃತಜ್ಞತೆ:

ಕಳೆದ 25 ವರ್ಷಗಳಿಂದ ಬೆಂಗಳೂರು ಟೆಕ್ ಸಮ್ಮಿಟ್ ಯಶಸ್ವಿ ಯಾಗಿ ನಡೆಯುತ್ತಿದೆ.‌ಇದಕ್ಕೆ ಕಾರಣರಾದ ಎಲ್ಲರಿಗೂ ಮುಖ್ಯ ಮಂತ್ರಿಗಳು ಧನ್ಯವಾದಗಳನ್ನು ಸಲ್ಲಿಸಿದರು.

ಸಮಾರಂಭದಲ್ಲಿ ಫಿನ್ ಲ್ಯಾಂಡ್ ನ ವಿಜ್ಞಾನ ಮತ್ತು ಸಂಸ್ಕೃತಿ ಸಚಿವ ಪೆಟ್ರಿ ಹೊನ್ ಕೊನೆನ್, ಯುನೈಟೆಡ್ ಎಮಿರೈಟ್ಸ್ ನ ಡಿಜಿಟಲ್ ಇಕಾಣಮಿ ಸಚಿವ ಓಮರ್ ಬಿನ್ ಸುಲ್ತಾನ್ ಅಲ್ ಒಲಾಮ,  ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಟಿಮ್ ವ್ಯಾಟ್  ಐ.ಟಿ ಬಿ. ಟಿ ಸಚಿವರಾದ  ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್,    ಬಯೋ ಟೆಕ್ನಾಲಜಿ ವಿಷನ್ ಗ್ರೂಪ್ ಅಧ್ಯಕ್ಷೆ  ಡಾ. ಕಿರಣ್ ಮಜುಂದಾರ್ ಶಾ,  ಸ್ಟಾರ್ಟ್ ಅಪ್  ವಿಷನ್ ಗ್ರೂಪ್  ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ ಅಧ್ಯಕ್ಷ ಕ್ರಿಸ್ ಗೋಪಾಲ ಕೃಷ್ಣನ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐ.ಟಿ. ಬಿಟಿ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ, ಐ.ಟಿ. ಬಿಟಿ  ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.