ಬನ್ನಿ, ನಿಖಿಲ್‌ ಪರ ಬೆಟ್‌ ಕಟ್ಟಿ ಎಂದ ಶಾಸಕ

Team Udayavani, May 12, 2019, 3:00 AM IST

ಮಂಡ್ಯ: ಯಾರು ಬೇಕಾದರೂ ಬೆಟ್‌ ಕಟ್ಟಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಗೆಲುವು ನಿಶ್ಚಿತ ಎಂದು ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರು ವಿಶ್ವಾಸದಿಂದ ಹೇಳಿದ್ದಾರೆ.

ನಗರದಲ್ಲಿ ಪುರಸಭಾ ಚುನಾವಣೆ ಸಂಬಂಧ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ನಾವು ಈಗಾಗಲೇ ಚುನಾವಣೆ ಗೆದ್ದಾಗಿದೆ. ಇದಕ್ಕಾಗಿ ನಿಖಿಲ್‌ಗೆ ಸನ್ಮಾನ ಸಮಾರಂಭವನ್ನು ಕೂಡ ಇಟ್ಟುಕೊಂಡಿದ್ದೇವೆ. ನಿಖಿಲ್‌ ಪರ ಬೆಟ್ಟಿಂಗ್‌ ಕಟ್ಟಲು ನಾನು ರೆಡಿ ಇದ್ದೇನೆ. ಯಾರು ಬೇಕಾದರೂ ಬರಬಹುದು’ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.

ಬೆಟ್‌ ಅಂದಾಕ್ಷಣ ಕೋಟಿ, ಲಕ್ಷಾಂತರ ರೂ.ಕಟ್ಟಬೇಕಿಲ್ಲ. ನೂರೊಂದು ರೂ.ಕಟ್ಟಿದರೂ ಸಾಕು. ನಿಖಿಲ್‌ ಗೆಲುವು ಖಚಿತ. ಮೇ 23ರಂದು ಜೆಡಿಎಸ್‌ನವರು ದೊಡ್ಡಮಟ್ಟದ ಸಂಭ್ರಮಾಚರಣೆ ನಡೆಸಲಿದ್ದಾರೆ. ಈ ಬಗ್ಗೆ ಯಾವ ಅನುಮಾನವೂ ಇಲ್ಲ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ