
2023ರ ಜುಲೈನಲ್ಲಿ ವಿಮಾನ ಹಾರಾಟ: ಸಚಿವ ವಿ. ಸೋಮಣ್ಣ
Team Udayavani, Sep 14, 2022, 9:00 PM IST

ಬೆಂಗಳೂರು: ವಿಜಯಪುರ ವಿಮಾನ ನಿಲ್ದಾಣದಿಂದ 2023ರ ಜುಲೈನಲ್ಲಿ ವಿಮಾನಯಾನ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ಕೆ. ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರ ವಿಮಾನ ನಿಲ್ದಾಣದ ಪ್ಯಾಕೇಜ್-1ರಲ್ಲಿ ರನ್‌ವೇ, ಟ್ಯಾಕ್ಸಿವೇ, ಏಪ್ರಾನ್, ಐಸೋಲೇಷನ್ ಬೇ, ಕೂಡು ರಸ್ತೆ ಹಾಗೂ ಒಳರಸ್ತೆ ಕಾಮಗಾರಿ 2021ರ ಫೆಬ್ರವರಿಯಿಂದ ಪ್ರಗತಿಯಲ್ಲಿದ್ದು, ಶೇ.66ರಷ್ಟು ಪೂರ್ಣಗೊಂಡಿದೆ.
ಅದೇ ರೀತಿ ಪ್ಯಾಕೇಜ್-2ರಲ್ಲಿ ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ಎಟಿಸಿ ಕಟ್ಟಡ, ವಿದ್ಯುತ್ ಉಪಕೇಂದ್ರ, ವಾಚ್ ಟವರ್ ಇತ್ಯಾದಿ ಕಾಮಗಾರಿಗಳು 2022ರ ಏಪ್ರಿಲ್‌ನಿಂದ ಪ್ರಗತಿಯಲ್ಲಿದ್ದು ಶೇ.17ರಷ್ಟು ಪೂರ್ಣಗೊಂಡಿದೆ.
ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ವಿಜಯಪುರ ಜಿಲ್ಲೆ ಮತ್ತು ತಾಲೂಕು, ಅಲಿಯಾಬಾದ್, ಬುರಣಾಪುರ, ಮದಬಾವಿ ಗ್ರಾಮಗಳಲ್ಲಿನ ಒಟ್ಟು 727 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಭೂಸ್ವಾಧೀನಕ್ಕಾಗಿ 63.46 ಕೋಟಿ ರೂ. ವೆಚ್ಚ ಮಾಡಲಾಗಿದೆ. 2023 ಜುಲೈನಲ್ಲಿ ವಿಮಾನಯಾನ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
4 ವರ್ಷದಲ್ಲಿ 3 ಲಕ್ಷ ಮನೆ ನಿರ್ಮಾಣ
ವಿಧಾನಪರಿಷತ್ತು: ವಿವಿಧ ವಸತಿ ಯೋಜನೆಗಳಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 3.92 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಇದಕ್ಕಾಗಿ 7,592 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಂ. ನಾಗರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, 2019-20ರಲ್ಲಿ 77,412, 2020-21ರಲ್ಲಿ 1.20 ಲಕ್ಷ, 2021-22ರಲ್ಲಿ 1.33 ಲಕ್ಷ ಹಾಗೂ 2022-23ರಲ್ಲಿ 61 ಸಾವಿರ ಮನೆಗಳನ್ನು ಸೇರಿ ಒಟ್ಟು 3.92 ಲಕ್ಷ ಮನೆಗಳನ್ನು ಫೂರ್ಣಗೊಳಿಸಲಾಗಿದೆ.
2019-20ರಲ್ಲಿ ಹಾಗೂ 2020-21ರಲ್ಲಿ ಒಟ್ಟು 1.32 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಎಲ್ಲಾ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆಗೊಳಿಸಲಾಗಿದ್ದು, ಮನೆಗಳ ನಿರ್ಮಾಣ ಪ್ರಕ್ರಿಯೆಯು ಜಾರಿಯಲ್ಲಿರುತ್ತದೆ. 2021-22ನೇ ಸಾಲಿನಲ್ಲಿ 5 ಲಕ್ಷ ಹೊಸ ಮನೆಗಳ ಗುರಿ ಮಂಜೂರು ಮಾಡಲಾಗಿದ್ದು, ಈವರೆಗೆ 3.40 ಲಕ್ಷ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಲಾದ ಮನೆಗಳ ಪೈಕಿ 1.67 ಲಕ್ಷ ಫಲಾನುಭವಿಗಳನ್ನು ಈಗಾಗಲೇ ಆಯ್ಕೆಗೊಳಿಸಿ ಕಾಮಗಾರಿ ಆದೇಶ ನೀಡಲಾಗಿದೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 11,565 ಮನೆಗಳಿಗೆ ಅನುಮೋದನೆ ನೀಡಲಾಗಿದೆ.
ಪರಿಶಿಷ್ಟ ಜಾತಿಗೆ 2,630 ಕೋಟಿ, ಪರಿಶಿಷ್ಟ ಪಂಗಡಕ್ಕೆ 956 ಕೋಟಿ ಹಾಗೂ ಸಾಮಾನ್ಯ/ಅಲ್ಪಸಂಖ್ಯಾತರಿಗೆ 4,000 ಕೋಟಿ ರೂ. ಸೇರಿದಂತೆ 2019-20ರಿಂದ 20220-23ನೇ ಸಾಲಿನ ಆಗಸ್ಟ್ 20ರವರೆಗೆ ವಿವಿಧ ವಸತಿ ಯೋಜನೆಗಳಡಿ 7,592 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್

ಮಣಿಪಾಲ: ಶಿವಪಾಡಿಯಲ್ಲಿ”ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್”ಪೂರ್ವ ಸಿದ್ಧತೆ ಸಭೆ

ಬಲಿಜ ಸಮುದಾಯಕ್ಕೆ ಕೂಡಲೇ ಪೂರ್ಣ ಪ್ರಮಾಣದ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಿ : ಮಾಜಿ ಸಚಿವ ಎಂ.ಆರ್. ಸೀತಾರಾಂ

ಬಿಎಸ್ ವೈ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ: ನಳಿನ್ ಕಟೀಲ್

ಸುಮಲತಾ ಅವರು ಬಿಜೆಪಿ ಸೇರಿದರೆ ಸಂತೋಷ: ಸಿ.ಟಿ ರವಿ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
