ಶಾಲೆ ಬಿಟ್ಟ ಹುಡುಗನೀಗ ಸ್ವರ್ಣೋದ್ಯಮಿ

Team Udayavani, Jan 18, 2017, 3:45 AM IST

gold.jpg

ಹುಬ್ಬಳ್ಳಿ: ತಂದೆಯ ವ್ಯವಹಾರಕ್ಕೆ ನೆರವಾಗಲು 11ನೇ ವಯಸ್ಸಿನಲ್ಲಿ ಶಾಲೆ ಬಿಟ್ಟಿದ್ದ ಬಾಲಕ, ಇಂದು 11 ದೇಶಗಳಲ್ಲಿ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ. ಒಂದು ಬಿಲಿಯನ್‌ ಡಾಲರ್‌ ವಹಿವಾಟು ನಡೆಸುತ್ತಿದ್ದು, ಕೊಡುಗೈ ದಾನಿಯೂ ಆಗಿದ್ದಾರೆ. ಇದೇನೂ ಸಿನಿಮಾ ಕಥೆಯಲ್ಲ. ದುಬೈನಲ್ಲಿ ಉದ್ಯಮ ನಡೆಸುತ್ತಿರುವ ಭಾರತೀಯ ಸಂಜಾತರೊಬ್ಬರ
ಯಶೋಗಾಥೆ.

ಭಾರತೀಯ ಮೂಲದ ಫಿರೋಜ್ ಮರ್ಚಂಟ್‌ ಅಸಾಮಾನ್ಯ ಸಾಧನೆ ಮೂಲಕ ಯುವ ಉದ್ಯಮಿಗಳಿಗೆ ಪ್ರೇರಕರಾಗಿದ್ದಾರೆ. ಟೈಕಾನ್‌ ಸಮ್ಮೇಳನದಲ್ಲಿ ತಮ್ಮ ಯಶಸ್ಸಿನ ಹಾದಿಯನ್ನು ಮೆಲುಕು ಹಾಕಲಿದ್ದಾರೆ. ಎರಡೂವರೆ ದಶಕಗಳಿಂದ “ಪ್ಯೂರ್‌ ಗೋಲ್ಡ್‌’ ಸೇರಿದಂತೆ ಬೃಹತ್‌ ಉದ್ಯಮ ಸಮೂಹ ನಿರ್ಮಿಸಿ ಮುನ್ನಡೆಸುತ್ತಿರುವ ಫಿರೋಜ್
ಗಲ್ಫ್ ಕೋ-ಆಪರೇಶನ್‌ ಕೌನ್ಸಿಲ್‌ (ಜಿಸಿಸಿ), ಏಷ್ಯಾ, ಏಷ್ಯಾ-ಪೆಸಿμಕ್‌ ವಲಯಗಳಲ್ಲೂ ಉದ್ಯಮ ಸಂಪರ್ಕ ಜಾಲ ಹೊಂದಿದ್ದಾರೆ.

ಉದ್ಯಮಕ್ಕೆ ಮುನ್ನುಡಿ ಬರೆದ ಹನಿಮೂನ್‌:
ಫಿರೋಜ್ ಮರ್ಚಂಟ್‌ ತಂದೆ ನಡೆಸುತ್ತಿದ್ದ ರಿಯಲ್‌ ಎಸ್ಟೇಟ್‌ ವಹಿವಾಟು ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಅವರಿಗೆ ನೆರವಾಗಲು 11ನೇ ವಯಸ್ಸಿನಲ್ಲಿ ಶಿಕ್ಷಣಕ್ಕೆ ಗುಡ್‌ಬೈ ಹೇಳಿ, ವಹಿವಾಟು ಸುಧಾರಿಸಿದ್ದರು. ಫಿರೋಜ್
ಹನಿಮೂನ್‌ಗೆಂದು ದುಬೈಗೆ ಹೋಗಿದ್ದಾಗ, ಅಲ್ಲಿನ ಚಿನ್ನಾಭರಣ ವಹಿವಾಟು ಅವರನ್ನು ಸೆಳೆದಿತ್ತು.

ಭಾರತಕ್ಕೆ ಮರಳಿದ ಮೇಲೆ ದುಬೈನಲ್ಲಿ ಚಿನ್ನಾಭರಣ ವಹಿವಾಟು ಆರಂಭಿಸುವ ಬಗ್ಗೆ ತಂದೆ ಮುಂದೆ ಪ್ರಸ್ತಾಪಿಸಿದ್ದರು.
1986ರಲ್ಲಿ ಒಂದಿಷ್ಟು ಹಣದೊಂದಿಗೆ ದುಬೈಗೆ ತೆರಳಿದ್ದ ಫಿರೋಜ್ ಕನಿಷ್ಠ ಕಮೀಷನ್‌ ಆಧಾರದಲ್ಲಿ ಚಿನ್ನದ ಬ್ರೋಕರ್‌ ವೃತ್ತಿ ಆರಂಭಿಸಿದ್ದರು. 3 ವರ್ಷಗಳಲ್ಲಿ (1989ರಲ್ಲಿ) ದುಬೈನಲ್ಲಿ ಸ್ವಂತದ ಪ್ಯೂರ್‌ ಗೋಲ್ಡ್‌ ಚಿನ್ನಾಭರಣ ಮಳಿಗೆ ಆರಂಭಿಸಿದರು. ಎರಡೂವರೆ ದಶಕಗಳ ಅವಧಿಯಲ್ಲಿ ಬಹುರಾಷ್ಟ್ರೀಯ ಚಿನ್ನಾಭರಣ ವಹಿವಾಟು ಹೊಂದಿದ ಕೀರ್ತಿ ಸಂಪಾದಿಸಿದರು.

ಗುಣಮಟ್ಟ , ಹೊಸ ವಿನ್ಯಾಸದ ಚಿನ್ನಾಭರಣಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

11 ದೇಶಗಳಿಗೆ ವಿಸ್ತರಿಸಿದ ಉದ್ಯಮ: 1981ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಗಲ್ಫ್ ಕೋ-ಆಪರೇಶನ್‌ ಕೌನ್ಸಿಲ್‌ ಸದಸ್ಯ ರಾಷ್ಟ್ರಗಳಲ್ಲಿ ಪ್ಯೂರ್‌ಗೊàಲ್ಡ್‌ ಉದ್ಯಮ ಸಮೂಹ ತನ್ನ ವಹಿವಾಟು ಹೊಂದಿದೆ. ಭಾರತ, ಯುಎಇ, ಜೋರ್ಡಾನ್‌, ಒಮನ್‌, ಕತಾರ್‌, ಬಹರೇನ್‌, ಕುವೈತ್‌, ಸೌದಿ ಅರೇಬಿಯಾ, ಫ್ರಾನ್ಸ್‌, ಶ್ರೀಲಂಕಾ ಹಾಗೂ ಸಿಂಗಾಪುರಗಳಲ್ಲಿ ಸುಮಾರು 125 ಮಾರಾಟ ಮಳಿಗೆಗಳನ್ನು ಹೊಂದಿದೆ.

2018ರ ವೇಳೆಗೆ ವಿಶ್ವದಾದ್ಯಂತ 300 ಮಳಿಗೆ ಹೊಂದುವ ಉದ್ದೇಶವಿದೆ. ಭಾರತ, ಚೀನಾದಲ್ಲಿ ಚಿನ್ನಾಭರಣ ತಯಾರಿಕಾ ಕಾರ್ಖಾನೆ ಹೊಂದಿದ್ದು, 3,500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಚಿನ್ನಾಭರಣಗಳೊಂದಿಗೆ ವಜ್ರಾಭರಣ ಹಾಗೂ ಸನ್‌ ಗ್ಲಾಸ್‌ ವಹಿವಾಟನ್ನೂ ಸಂಸ್ಥೆ ನಡೆಸುತ್ತಿದೆ.

ಪ್ಯೂರ್‌ ಗೋಲ್ಡ್‌ ಕಂಪನಿ 2008ರಿಂದ 2015ರ ವರೆಗೆ 6 ಬಾರಿ “ಅತ್ಯುತ್ತಮ ಸೇವಾ ಸಾಧನೆ ಬ್ರಾಂಡ್‌’ ಪ್ರಶಸ್ತಿ ಪಡೆದಿದೆ. 2014ರಲ್ಲಿ ಜಿಸಿಸಿಯ ಮೊದಲ ಮತ್ತು ಏಕೈಕ ಜ್ಯುವೇಲರಿ ರಿಟೇಲರ್‌ ಸ್ಥಾನ ಪಡೆದಿದೆ. ಭಾರತವೂ ಈ ಸಂಸ್ಥೆಗೆ ವಿಶ್ವ ಡೈಮಂಡ್‌ ಮಾರ್ಕ್‌ ಪ್ರಶಸ್ತಿ ನೀಡಿದೆ. ಫೋಬ್ಸ್ì ಮಧ್ಯ ಏಷ್ಯಾ ಪಟ್ಟಿಯಲ್ಲಿ ಭಾರತೀಯ ಮಾಲೀಕರ ವಿಭಾಗದಲ್ಲಿ 25ನೇ ಸ್ಥಾನ ಪಡೆದಿದ್ದು, ಜಿಸಿಸಿ ಭಾರತೀಯ ಮೂಲದ ಶ್ರೀಮಂತರ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದ್ದಾರೆ.

ಸಂಕಷ್ಟದಲ್ಲಿ ನೆರವು: ಪ್ರಾಕೃತಿಕ ವಿಕೋಪ ಮುಂತಾದ ಸಂಕಷ್ಟ ಪರಿಸ್ಥಿತಿಗಳಲ್ಲಿ μರೋಜ್‌ ಮರ್ಚಂಟ್‌ ವಿವಿಧ ದೇಶಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಭಾರತ, ಶ್ರೀಲಂಕಾ, μಲಿಪೈನ್ಸ್‌, ಇಂಡೋನೇಷಿಯಾ, ಮ್ಯಾನ್‌ಮಾರ್‌, ಮಾಲ್ಡೀವ್ಸ್‌, ಜರ್ಮನಿ ಮುಂತಾದ ದೇಶಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 2015ರ ಪ್ರವಾಹ
ಸಂದರ್ಭದಲ್ಲಿ ನಿರಾಶ್ರಿತರಿಗೆ ಹೊದಿಕೆ ಹಂಚುವ ಜತೆಗೆ 1.70 ಲಕ್ಷ ಡಾಲರ್‌ ನೆರವು ನೀಡಿದ್ದಾರೆ.

ತಮಿಳುನಾಡಿನ ಪ್ರವಾಹ ಸಂದರ್ಭದಲ್ಲಿ 45 ಸಾವಿರ ಡಾಲರ್‌ ನೆರವು ಕಲ್ಪಿಸಿದ್ದಾರೆ. ಶಾಲೆಗಳ ನಿರ್ಮಾಣ,
ಅಭಿವೃದ್ಧಿಗೂ ನೆರವಾಗಿದ್ದಾರೆ.

ಟಾಪ್ ನ್ಯೂಸ್

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.