ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Team Udayavani, May 22, 2024, 12:37 AM IST

ocon

ಬೆಂಗಳೂರು: “ಜುಬ್ಬಾ-ಪೈಜಾಮಾ ಹಾಕಿ ಕೊಂಡು, ಒಂದು ಕಾರು ಇಟ್ಟುಕೊಂಡು ನನ್ನನ್ನು ಎಂಎಲ್‌ಸಿ ಮಾಡಿ, ಅಧ್ಯಕ್ಷಗಿರಿ ಕೊಡಿ ಅಂದರೆ ಆಗದ ಮಾತು. ಬಿಬಿಎಂಪಿ ಸಹಿತ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರು ತ್ತಿವೆ. ಬೂತ್‌ನಲ್ಲಿ ನಿಂತು, ಪಕ್ಷಕ್ಕೆ ನಾಲ್ಕು ವೋಟ್‌ ಹಾಕಿಸಿ. ಅಲ್ಲಿ ಲೀಡ್‌ ತಂದು ಅಧಿಕಾರ ಕೇಳಿ. ಇಲ್ಲವಾದರೆ ದಯವಿಟ್ಟು ಪಕ್ಕಕ್ಕೆ ಸರಿದು ಹೊಸಬರಿಗೆ ಅವಕಾಶ ಮಾಡಿಕೊಡಿ…’

-ಮೇಲ್ಮನೆ ಚುನಾವಣೆ ಬೆನ್ನಲ್ಲೇ ಅಧಿಕಾರ, ಹುದ್ದೆಗಾಗಿ ತಮಗೆ ದುಂಬಾಲು ಬೀಳುತ್ತಿರುವ ಪಕ್ಷದ ಕೆಲವು ಸ್ಥಳೀಯ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಸ್ಪಷ್ಟ ಎಚ್ಚರಿಕೆ ಇದು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಪುಣ್ಯಸ್ಮರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕು.

ನಾಯಕರಾಗಬೇಕು ಎಂದು ಬಯಸುವವರು ಮುಂಬರುವ ಚುನಾವಣೆಗಳಲ್ಲಿ ನಿಮ್ಮ ಬೂತ್‌ಗಳಲ್ಲಾದರೂ ಲೀಡ್‌ ತರಬೇಕು. ಅದು ಸಾಧ್ಯವಾಗದವರು ಅಧಿಕಾರ ಅಥವಾ ನಾಯಕತ್ವ ಕೇಳಬಾರದು ಎಂದು ಸ್ಪಷ್ಟಪಡಿಸಿದರು.

ಹೊಸ ತಂಡ ಕಟ್ಟುವ ಕಾಲ: ಪಕ್ಷದ ಬ್ಲಾಕ್‌ ಮಟ್ಟದಿಂದ ಹಿಡಿದು ರಾಜ್ಯ ಘಟಕದ ವರೆಗೆ ಎಲ್ಲವನ್ನೂ ರದ್ದುಗೊಳಿಸಿ ಹೊಸ ತಂಡ ಕಟ್ಟುವ ಕಾಲ ಸನ್ನಿಹಿತವಾಗಿದೆ. ಯಾರು ಕ್ರಿಯಾಶೀಲವಾಗಿರುತ್ತಾರೋ ಅವರು ಉಳಿದುಕೊಳ್ಳುತ್ತಾರೆ. ಉಳಿದವರನ್ನು ಮುಲಾ ಜಿಲ್ಲದೆ ತೆಗೆದು ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ ಡಿ.ಕೆ. ಶಿವಕುಮಾರ್‌, ಪಕ್ಷಕ್ಕೆ ನಾಲ್ಕು ವೋಟ್‌ ಹಾಕಿಸಿ, ಅಲ್ಲಿ ಲೀಡ್‌ ತಂದು ಅಧಿಕಾರ ಕೇಳಬೇಕು ಎಂದು ತೀಕ್ಷ್ಣವಾಗಿ ಹೇಳಿದರು.

ಸ್ಥಳೀಯ ಮಟ್ಟದಿಂದ ಬೆಳೆದರು: ಕೆಲವರು ಏಕಾಏಕಿ ಎಂಎಲ್‌ಸಿಗಾಗಿ ಲಾಬಿ ಮಾಡು ತ್ತಾರೆ ಎಂದು ಹೇಳಿದ ಡಿಸಿಎಂ, ನೆಹರೂ, ರಾಜಗೋಪಾಲಾಚಾರಿ, ಕೆಂಗಲ್‌ ಹನುಮಂತಯ್ಯ, ಬಿ.ಡಿ. ಜತ್ತಿ, ಮಲ್ಲಿಕಾರ್ಜುನ ಖರ್ಗೆ ಸಹಿತ ಅನೇಕ ಮಹಾನ್‌ ನಾಯಕರು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ರಾಷ್ಟ್ರಮಟ್ಟಕ್ಕೆ ಬೆಳೆದವರು ಎಂದು ಡಿ.ಕೆ. ಶಿವಕುಮಾರ್‌ ಕಾರ್ಯಕರ್ತರನ್ನು ಎಚ್ಚರಿಸಿದರು.

ನಾನು ಎಷ್ಟು ದಿನ ಕೆಪಿಸಿಸಿ ಅಧ್ಯಕ್ಷನಾಗಿ ಇರುತ್ತೇನೆ ಎಂಬುದು ಮುಖ್ಯವಲ್ಲ. ನಾನು ಅಧಿಕಾರ ಬಿಟ್ಟು ಹೋಗುವ ಮುನ್ನ ಪಕ್ಷ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ. ಮುಂದಿನ ಮೂರು-ನಾಲ್ಕು ತಿಂಗಳಿನಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ.
– ಡಿ.ಕೆ. ಶಿವಕುಮಾರ್‌, ಡಿಸಿಎಂ

ಟಾಪ್ ನ್ಯೂಸ್

ಸುಳ್ಳು ಸುದ್ದಿ ಹರಡಬೇಡಿ…ಜೈರಾಂ ರಮೇಶ್‌ ಗೆ ಮುಖ್ಯ ಚುನಾವಣ ಆಯುಕ್ತ ಕುಮಾರ್‌ ತರಾಟೆ

ಸುಳ್ಳು ಸುದ್ದಿ ಹರಡಬೇಡಿ…ಜೈರಾಂ ರಮೇಶ್‌ ಗೆ ಮುಖ್ಯ ಚುನಾವಣ ಆಯುಕ್ತ ಕುಮಾರ್‌ ತರಾಟೆ

Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!

Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!

1-qwewqwq

Bengaluru rave party ಪ್ರಕರಣ; ನಟಿ ಹೇಮಾ ಬಂಧನ

1-wewewqe

Tibetan ಆಧ್ಯಾತ್ಮಿಕ ನಾಯಕ ದಲೈ ಲಾಮಾ ಚಿಕಿತ್ಸೆಗಾಗಿ ಅಮೆರಿಕಕ್ಕೆ

suicide

IAS ಅಧಿಕಾರಿ ದಂಪತಿಯ ಪುತ್ರಿ 10 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Next Lok Sabha polls to be over by end of April : Chief Election Commissioner

Election: ಮುಂದಿನ ಲೋಕಸಭೆ ಚುನಾವಣೆ ಎಪ್ರಿಲ್ ಅಂತ್ಯದೊಳಗೆ ಮುಗಿಸುತ್ತೇವೆ: ಚುನಾವಣಾ ಆಯೋಗ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

Deralakatte: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwewqwq

Bengaluru rave party ಪ್ರಕರಣ; ನಟಿ ಹೇಮಾ ಬಂಧನ

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Yadgiri ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಸ್ಲೀಪರ್ ಬಸ್ ಪಲ್ಟಿ: ಇಬ್ಬರು ದುರ್ಮರಣ

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Special Class: ಮಕ್ಕಳ ಕಲಿಕಾ ಸಾಮರ್ಥ್ಯ ಸುಧಾರಣೆಗೆ ಸ್ಪೆಷಲ್‌ ಕ್ಲಾಸ್‌

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Mansoon: ರಾಜ್ಯಕ್ಕೆ ಮುಂಗಾರು ಪ್ರವೇಶ… ದಕ್ಷಿಣ ಕರ್ನಾಟಕದ ಬಹುತೇಕ ಕಡೆ ಮುಂಗಾರು ಮಳೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

Election Result: ಟ್ರೆಂಡ್‌ ಗೊತ್ತಾದರೂ ಫ‌ಲಿತಾಂಶ ಘೋಷಣೆ ವಿಳಂಬ ಸಾಧ್ಯತೆ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

ಸುಳ್ಳು ಸುದ್ದಿ ಹರಡಬೇಡಿ…ಜೈರಾಂ ರಮೇಶ್‌ ಗೆ ಮುಖ್ಯ ಚುನಾವಣ ಆಯುಕ್ತ ಕುಮಾರ್‌ ತರಾಟೆ

ಸುಳ್ಳು ಸುದ್ದಿ ಹರಡಬೇಡಿ…ಜೈರಾಂ ರಮೇಶ್‌ ಗೆ ಮುಖ್ಯ ಚುನಾವಣ ಆಯುಕ್ತ ಕುಮಾರ್‌ ತರಾಟೆ

Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!

Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!

1-qwewqwq

Bengaluru rave party ಪ್ರಕರಣ; ನಟಿ ಹೇಮಾ ಬಂಧನ

ಚಿತ್ರದುರ್ಗ: ಮಾನಸಿಕ ಕಾಯಿಲೆ ನಿವಾರಣೆ ಸಾಧ್ಯ- ಡಾ| ಮಂಜುನಾಥ

ಚಿತ್ರದುರ್ಗ: ಮಾನಸಿಕ ಕಾಯಿಲೆ ನಿವಾರಣೆ ಸಾಧ್ಯ- ಡಾ| ಮಂಜುನಾಥ

1-wewewqe

Tibetan ಆಧ್ಯಾತ್ಮಿಕ ನಾಯಕ ದಲೈ ಲಾಮಾ ಚಿಕಿತ್ಸೆಗಾಗಿ ಅಮೆರಿಕಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.