ಕಾಮನ್ವೆಲ್ತ್ ಸಂಸದೀಯ ಸಮ್ಮೇಳನಕ್ಕೆ ಸ್ಪೀಕರ್ ಕಾಗೇರಿ
Team Udayavani, Jan 15, 2020, 3:02 AM IST
ಬೆಂಗಳೂರು: ಉತ್ತರ ಪ್ರದೇಶದ ಲಕ್ನೋದಲ್ಲಿ ಜ.15 ರಿಂದ 19 ರವರೆಗೆ ಕಾಮನ್ವೆಲ್ತ್ ಸಂಸದೀಯ ಸಂಘದ ವತಿಯಿಂದ ಭಾರತೀಯ ಪ್ರಾಂತ್ಯದ ಸಮ್ಮೇಳನ ಆಯೋಜಿಸಲಾಗಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗಿಯಾಗಲಿದ್ದಾರೆ.
ಸಮ್ಮೇಳನದಲ್ಲಿ ಆಯವ್ಯಯ ಪ್ರಸ್ತಾಪಗಳ ಪರಿಶೀಲನೆಯಲ್ಲಿ ಶಾಸಕರ ಸಾಮರ್ಥ್ಯ ವೃದ್ಧಿ, ಶಾಸನ ರಚನಾ ಕಾರ್ಯದಲ್ಲಿ ಶಾಸಕರು ಹೆಚ್ಚು ಗಮನ ವಹಿಸುವುದು ವಿಚಾರಗಳ ಚರ್ಚೆಯಲ್ಲಿ ಕಾಗೇರಿ ಅವರು ಪಾಲ್ಗೊಳ್ಳಲಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಪ್ರಧಾನ ಕಾರ್ಯದರ್ಶಿಯವರ ಆಹ್ವಾನದ ಮೇರೆಗೆ ಕಾಮನ್ವೆಲ್ತ್ ಸಂಸದೀಯ ಸಂಘದ ಪ್ರತಿನಿಧಿಯಾಗಿ ಕರ್ನಾಟಕ ಕಾಮನ್ವೆಲ್ತ್ ಸಂಸದೀಯ ಸಂಘದ ಜಂಟಿ ಅಧ್ಯಕ್ಷರೂ ಆಗಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭಾಗವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.