ಕರ್ನಾಟಕ ನೇವಲ್ ಏರಿಯಾ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿ ಸಿಂಗ್
Team Udayavani, Mar 31, 2019, 6:00 AM IST
ಕಾರವಾರ: ಕರ್ನಾಟಕ ನೇವಲ್ ಏರಿಯಾದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿರಿಯರ್ ಆಡ್ಮಿರಲ್ ಮಹೇಶ್ ಸಿಂಗ್ ಇಲ್ಲಿನ ಐಎನ್ಎಸ್ ಕದಂಬದಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು.
ರಿಯರ್ ಆಡ್ಮಿರಲ್ ಆಗಿ ನೇಮಕಗೊಂಡ ಮಹೇಶ್ ಸಿಂಗ್ ಅವರಿಗೆ ರಿಯಲ್ಆಡ್ಮಿರಲ್ ಕೆ.ಜೆ.ಕುಮಾರ್ ವಿಧ್ಯುಕ್ತವಾಗಿ ಫ್ಲಾಗ್ ನೀಡುವ ಮೂಲಕ ಅಧಿ ಕಾರ ಹಸ್ತಾಂತರಿಸಿದರು. ಇದಕ್ಕೂ ಮುನ್ನ ಅವರು ಐಎನ್ಎಸ್ ಕದಂಬ ನೌಕಾದಳದ ತುಕುಡಿಯಿಂದ ಗೌರವ ಸ್ವೀಕರಿಸಿದರು. ಮಹೇಶ್ ಸಿಂಗ್ ಜನವರಿ 1987ರಲ್ಲಿ ನ್ಯಾಶನಲ್ ಡಿಫೆನ್ಸ್ ಆಕಾಡೆಮಿ ಸೇರುವ ಮೂಲಕ ಭಾರತೀಯ ನೌಕಾದಳದಲ್ಲಿ ಸೇವೆ ಆರಂಭಿಸಿದ್ದರು.
ನೇವಿಗೇಶನ್ ಡೈರೆಕ್ಷನ್ ವಿಷಯ ತಜ್ಞರಾಗಿರುವ ಅವರು ಐಎನ್ಎಸ್ ಅಕ್ಷಯ ಮತ್ತು ಜ್ಯೋತಿ ನೌಕೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಖ್ಯಾತಿ ಹೊಂದಿದ್ದಾರೆ. ಭಾರತೀಯ ನೌಕಾದಳದ ಆಪರೇಶನ್ ವಿಜಯ್ ಸಮಯದಲ್ಲಿ ಮಹೇಶ್ ಸಿಂಗ್ ಅವರು ಮಿಸಾಯಿಲ್ ವೆಜೆಲ್ಸ್ ನಡೆಸಿದ ಪರಿಣತಿ ಹೊಂದಿದ್ದಾರೆ. ಮಾರಿಷಸ್ ದೇಶದಲ್ಲಿ ಐಎನ್ಎಸ್ ಜಲ್ಸವ್ಹಾ ನೌಕೆ ಮುನ್ನಡೆಸಿದ್ದರು. ನೇವಿ ಜಾಯಿಂಟ್ ಆಪರೇಶನ್ನಲ್ಲಿ ಅನುಭವ ಹೊಂದಿರುವ ಅವರು, ಅಲ್ಲಿ ಜಂಟಿ ನಿರ್ದೇಶಕರಾಗಿ, ಪ್ರಿನ್ಸಿಪಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಪಡೆದಿದ್ದಾರೆ.