ಖರ್ಗೆ ಅದ್ದೂರಿ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್‌ ಸಜ್ಜು

ಇಂದು ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ

Team Udayavani, Nov 6, 2022, 7:00 AM IST

ಖರ್ಗೆ ಅದ್ದೂರಿ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್‌ ಸಜ್ಜು

ಬೆಂಗಳೂರು: ಎಐಸಿಸಿ ಅಧ್ಯಕ್ಷರಾದ ಅನಂತರ ಮೊದಲ ಬಾರಿಗೆ ತವರು ರಾಜ್ಯಕ್ಕೆ ಬರುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅದ್ದೂರಿ ಸ್ವಾಗತ ಕೋರಲು ಕಾಂಗ್ರೆಸ್‌ ಸಜ್ಜಾಗಿದೆ.

ರವಿವಾರ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಹಮ್ಮಿ ಕೊಳ್ಳುವ ಮೂಲಕ ಖರ್ಗೆ ಅವರಿಗೆ ಬೃಹತ್‌ ಅಭಿನಂದನ ಸಮಾರಂಭ ಆಯೋಜಿಸಲಾಗಿದೆ. ಸುತ್ತಮುತ್ತಲ ಜಿಲ್ಲೆಗಳ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

ದಿಲ್ಲಿಯಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಲ್ಲಿಂದಲೇ ಅದ್ದೂರಿ ಸ್ವಾಗತ ಕೋರಿ ಮೆರವಣಿಗೆ ನಡೆಸಿ ನೇರವಾಗಿ ಕೆಪಿಸಿಸಿ ಕಚೇರಿಗೆ ಕರೆತರಲಾಗುವುದು. ಅನಂತರ ಮಧ್ಯಾಹ್ನ 2 ಗಂಟೆಗೆ ಅರ ಮನೆ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗುವರು.

ಖರ್ಗೆ ಸ್ವಾಗತಕ್ಕಾಗಿ ಸಮಿತಿ ರಚಿಸಿದ್ದು, ಸಮಾವೇಶಕ್ಕೆ ಬರಲಿರುವ ಲಕ್ಷಾಂತರ ಕಾರ್ಯಕರ್ತರಿಗೆ ವಾಹನ ನಿಲುಗಡೆ ಸೇರಿ ಇತರ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಜೆಯೇ ದಿಲ್ಲಿಯನ್ನು ತಲುಪಿ,ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ಪ್ರವಾಸಕ್ಕೆ ತೆರಳುವರು ಎಂದು ಹೇಳ ಲಾಗಿದೆ. ಎಐಸಿಸಿ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್‌,
ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌,ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌,ರಾಮಲಿಂಗಾ ರೆಡ್ಡಿ, ಸತೀಶ್‌ ಜಾರಕಿ ಹೊಳಿ, ಧ್ರುವ ನಾರಾಯಣ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌. ಮುನಿಯಪ್ಪ, ವೀರಪ್ಪ
ಮೊಲಿ, ರೆಹಮಾನ್‌ ಖಾನ್‌, ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಸಹಿತ ರಾಜ್ಯದ ಹಿರಿಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುವರು.

ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರು ವುದು ಹೆಮ್ಮೆಯ ಸಂಗತಿ. ರಾಜ್ಯದ ಕಾಂಗ್ರೆಸ್‌ನ ಪ್ರತೀ ಕಾರ್ಯಕರ್ತ ನಿಗೂ ಸಂತಸ ತಂದಿದೆ. ಅವರು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಅಭಿನಂದಿ ಸಲಾಗುವುದು. ಸಮಾವೇಶ
ನಮಗೆ ಸಹ ಶಕ್ತಿ ತುಂಬಲಿದೆ.
-ಡಿ.ಕೆ.ಶಿವಕುಮಾರ್‌,
ಕೆಪಿಸಿಸಿ ಅಧ್ಯಕ್ಷ

ನರೇಂದ್ರ ಮೋದಿ ಸರಕಾರವು ಯುವ ಜನರಿಗಾಗಿ ಹೊಸ ಉದ್ಯೋಗ ಸೃಷ್ಟಿಸುವಲ್ಲಿ ವಿಫ‌ಲವಾಗಿದೆ. ಭಾರೀ ಸದ್ದು ಮಾಡಿದ್ದ ಮೇಕ್‌ ಇನ್‌ ಇಂಡಿಯಾ ಮತ್ತು ಸ್ಕಿಲ್‌ ಇಂಡಿಯಾ ಘೋಷಣೆಗಳು ಏನಾದವು? ನೀವು ಭರವಸೆ ಕೊಟ್ಟ 16 ಕೋಟಿ ಉದ್ಯೋಗಗಳ ಕಥೆ ಏನಾಯಿತು?
-ಮಲ್ಲಿಕಾರ್ಜುನ ಖರ್ಗೆ,
ಎಐಸಿಸಿ ಅಧ್ಯಕ್ಷ

ಟಾಪ್ ನ್ಯೂಸ್

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

ಬೆಳಗಾವಿ ಬಿಜೆಪಿಯಲ್ಲಿ ಬಗೆಹರಿಯದ ಬೇಗುದಿ

bangla ire

ಐರ್ಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಸೋಲು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ವಿದೇಶ ವ್ಯಾಪಾರ ನೀತಿ ಆತ್ಮನಿರ್ಭರ ಭಾರತಕ್ಕೆ ಒತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ದ.ಕ. ಜಿಲ್ಲೆಯ 3 ಸಹಿತ ವಿವಿಧ ದೇಗುಲಗಳ ಅಭಿವೃದ್ಧಿಗೆ ನಿಧಿ

ಟೆಂಡರ್‌ಗಳ ತಡೆಗೆ ಕಾಂಗ್ರೆಸ್‌ ಆಗ್ರಹ

ಟೆಂಡರ್‌ಗಳ ತಡೆಗೆ ಕಾಂಗ್ರೆಸ್‌ ಆಗ್ರಹ

police crime

ಶಿವಮೊಗ್ಗದಲ್ಲಿ 1.40 ಕೋಟಿ ರೂ.ವಶ; ತರೀಕೆರೆಯಲ್ಲಿ 6 ಕೋಟಿ ರೂ. ಮೌಲ್ಯದ ಚಿನ್ನ ವಶ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ