ಮೆಗಾ ಪ್ಯಾಕೇಜ್‌ ಘೋಷಣೆ


Team Udayavani, Jul 9, 2021, 7:00 AM IST

Untitled-1

ಹೊಸದಿಲ್ಲಿ: ಕೇಂದ್ರ ಸಂಪುಟದ ಮೆಗಾ ಸರ್ಜರಿ ಬೆನ್ನಲ್ಲೇ ಕಾರ್ಯತತ್ಪರವಾ ಗಿರುವ ಹೊಸ ಸಂಪುಟ ತನ್ನ ಮೊದಲ ಸಭೆಯಲ್ಲೇ ಹಲವು ನಿರ್ಣಯ ಗಳನ್ನು ಕೈಗೊಂ ಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ನೂತನ ಸಚಿವ ಸಂಪುಟದ ಸಭೆಯಲ್ಲಿ ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ.

ಕೊರೊನಾ ಎರಡನೇ ಅಲೆಯಲ್ಲಿ ದೇಶ ಎದುರಿಸಿರುವ ಬಿಕ್ಕಟ್ಟು ನಿವಾರಣೆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಸರಕಾರ, 23 ಸಾವಿರ ಕೋಟಿ ರೂ.ಗಳ ತುರ್ತು ಪ್ಯಾಕೇಜ್‌ ಘೋಷಿಸಿದೆ. ಈ ಮೊತ್ತವನ್ನು ಮುಂದಿನ 9 ತಿಂಗಳ ಒಳಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಬಳಸಿಕೊಳ್ಳಲಿವೆ ಎಂದು ಕೇಂದ್ರದ ಹೊಸ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ತಿಳಿಸಿದ್ದಾರೆ.

ಬಳಿಕ ಪತ್ರಿಕಾ ಗೋಷ್ಠಿ ನಡೆಸಿದ ಅವರು, “ಕೊರೊನಾ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ರಾಜ್ಯ ಸರಕಾರ ಗಳಿಗೆ ಅಗತ್ಯ ನೆರವು ನೀಡುವುದು ನಮ್ಮ ಕರ್ತವ್ಯ. ಈ ಕಾರಣಕ್ಕಾಗಿ 23,123 ಕೋಟಿ ರೂ.ಗಳ ಎಮರ್ಜೆನ್ಸಿ ಪ್ಯಾಕೇಜ್‌ ಘೋಷಿಸು ತ್ತಿದ್ದೇವೆ’ ಎಂದು ಹೇಳಿದ್ದಾರೆ.

ಸಂಭಾವ್ಯ 3ನೇ ಅಲೆಯ ಬಗ್ಗೆಯೂ ಪ್ರಸ್ತಾವಿಸಿದ ಸಚಿವರು, “ಈ ನಿಧಿಯನ್ನು ಬಳಸಿ ಕೊಂಡು ಸದ್ಯದಲ್ಲೇ ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸ ಲಾಗುವುದು.  20,000 ಐಸಿಯು  ಹಾಸಿಗೆಗಳನ್ನು ಅಳವಡಿಸಲಾಗುವುದು. ಅಗತ್ಯ ವಿರುವ ಔಷಧಗಳು ಹಾಗೂ ಇತರ ವೈದ್ಯ ಕೀಯ ಪರಿಕರಗಳನ್ನು ಸಾಕಷ್ಟು ಖರೀದಿಸಿಡಲಾಗುವುದು’ ಎಂದರು.

ನೂತನ ಸಚಿವರ ಅಧಿಕಾರ ಸ್ವೀಕಾರ:

ಬುಧವಾರದ ಮೆಗಾ ಸಂಪುಟ ಪುನಾರಚನೆಯಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದ ರಾಜ್ಯದ ಸಂಸದ ರಾದ ಶೋಭಾ ಕರಂದ್ಲಾಜೆ, ರಾಜೀವ್‌ ಚಂದ್ರಶೇಖರ್‌, ಭಗವಂತ ಖೂಬಾ ಸೇರಿದಂತೆ ಬಹುತೇಕ ಮಂದಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ತೆಂಗು ಕೃಷಿಕರಿಗೆ ನೆರವು :

ತೆಂಗು ಬೆಳೆ ಉತ್ತೇಜಿಸಲು ಹಾಗೂ ಅದರಲ್ಲಿ ವೃತ್ತಿಪರತೆ ತರುವ ಉದ್ದೇಶದಿಂದ ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ 1979ಕ್ಕೆ ತಿದ್ದುಪಡಿ ತರಲು ಸಂಪುಟ ಒಪ್ಪಿಗೆ ನೀಡಿದೆ. ತೆಂಗು ಕೃಷಿಕರಿಗೂ ನೆರವಾಗಬೇಕು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ ಅಧಿಕಾರಿಗಳಲ್ಲದವರು ಅಂದರೆ ಈ ಬೆಳೆಯ ಬಗ್ಗೆ ಸಂಪೂರ್ಣ ಅರಿವಿರುವಂಥ ಕೃಷಿಕ ಸಮುದಾಯದ ವ್ಯಕ್ತಿಯನ್ನೇ ಮಂಡಳಿಯ ಅಧ್ಯಕ್ಷರನ್ನಾಗಿಸಲಾಗುತ್ತದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಹೇಳಿದ್ದಾರೆ.

1 ಲಕ್ಷ ಕೋ.ರೂ. ಬಳಕೆ ಅವಕಾಶ  :

ಕೇಂದ್ರ ಬಜೆಟ್‌ನಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ರೈತರ ಮೂಲಸೌಕರ್ಯ ನಿಧಿಗಾಗಿ 1 ಲಕ್ಷ ಕೋಟಿ ರೂ. ಘೋಷಿಸಲಾಗಿದ್ದು, ಅದನ್ನು ಬಳಸಲು ಎಪಿಎಂಸಿ ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಘೋಷಣೆ ಯನ್ನು ಜಾರಿಗೆ ತರಲು ಸಂಪುಟದಲ್ಲಿ ತೀರ್ಮಾ

ನಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ. ಎಲ್ಲ ರಾಜ್ಯ-ಕೇಂದ್ರ ಸಹಕಾರಿ ಸಂಘಗಳು, ಒಕ್ಕೂಟ ಗಳು, ಸ್ವಾಯತ್ತ ಒಕ್ಕೂಟಗಳು ಈ ಮೊತ್ತವನ್ನು ಬಳಸಬಹುದಾಗಿದೆ. ಇದರಿಂದ ಎಪಿಎಂಸಿಗಳು ಬಲಿಷ್ಠಗೊಳ್ಳಲಿವೆ ಎಂದರು.

ಕೃಷಿ ಕಾಯ್ದೆ ರದ್ದು ಇಲ್ಲ :

ಕೇಂದ್ರವು ರೈತರಿಗೆ ಏನೇನು ಆಶ್ವಾಸನೆ ನೀಡಿದೆಯೋ ಅವೆಲ್ಲವನ್ನೂ ಈಡೇರಿಸಲು ನಾವು ಬದ್ಧರಾಗಿದ್ದೇವೆ. ಎಪಿಎಂಸಿ ವ್ಯವಸ್ಥೆ ಯನ್ನು ರದ್ದು ಮಾಡುವುದಿಲ್ಲ. ಶೇ.3ರ ರಿಬೇಟ್‌ನೊಂದಿಗೆ 2 ಕೋಟಿ ರೂ. ವರೆಗೆ ಸಾಲವನ್ನೂ ನೀಡಲಾಗುತ್ತದೆ. ಹೊಸ ಕೃಷಿ ಕಾಯ್ದೆಗಳು ಜಾರಿಯಾದರೆ ಎಪಿಎಂಸಿ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬ ಹೇಳಿಕೆ ಗಳು ಸರಿಯಲ್ಲಿ. ಮಂಡಿ ವ್ಯವಸ್ಥೆ ಕೊನೆ ಯಾಗು ವುದಿಲ್ಲ ಎಂಬುದನ್ನು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸಚಿವ ತೋಮರ್‌ ಅವರು ಹೇಳಿದರು.

ರೈತ ಸಮುದಾಯದ ಒಳಿತಿಗಾಗಿ ಕೇಂದ್ರ ಸರಕಾರ 3 ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದೆ. ಆದರೆ ರಾಜಕೀಯ ಕಾರಣಗಳಿಗಾಗಿ ಇದನ್ನು ವಿರೋಧಿಸಲಾಗುತ್ತಿದೆ. ನಾನು ಎಲ್ಲ ರಾಜ್ಯಗಳಿಗೂ ಪ್ರವಾಸ ಕೈಗೊಂಡು ಅನ್ನದಾತರ ಮನವೊಲಿಸುವ ಕೆಲಸ ಮಾಡುತ್ತೇನೆ.– ಶೋಭಾ ಕರಂದ್ಲಾಜೆ,  ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಹಾಯಕ ಸಚಿವೆ

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.