PWD: ಸಾರ್ವಜನಿಕರಿಂದ ದೂರು ಪಡೆಯಲು ಹೊಸ ವೆಬ್‌ಸೈಟ್‌: ಸತೀಶ್‌ ಜಾರಕಿಹೊಳಿ

  ಬಿಲ್‌ ಪಾವತಿಗೆ ಮುನ್ನ ಕಾಮಗಾರಿ ಪರಿಶೀಲನೆ

Team Udayavani, Aug 15, 2023, 11:51 PM IST

sathish jarakiholi

ಬೆಳಗಾವಿ: ಲೋಕೋಪಯೋಗಿ ಇಲಾಖೆಯ ಯಾವುದೇ ಕಾಮಗಾರಿಗಳ ಪರಿಶೀಲನೆ ನಡೆಸಿ ಸಮರ್ಪಕ ಎನಿಸಿದರೆ ಮಾತ್ರ ಬಿಲ್‌ ಪಾವತಿ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಕಾಮಗಾರಿ ಬಗ್ಗೆ ಸಾರ್ವಜನಿಕರು ಫೋಟೋ ಸಹಿತ ದೂರು ನೀಡಲು ಅವಕಾಶ ಕೊಡಲಾಗುತ್ತದೆ. ಅದಕ್ಕಾಗಿ ಇಲಾಖೆ ವತಿಯಿಂದ ಪ್ರತ್ಯೇಕ ವೆಬ್‌ಸೈಟ್‌ ಆರಂಭ ಮಾಡಲಾಗುತ್ತದೆ ಎಂದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು ಇನ್ನೊಂದು ವಾರದಲ್ಲಿ ಅದು ಶುರುವಾಗಲಿದೆ. ಇಲಾಖೆಯಿಂದ ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ಕಳಪೆ ಗುಣಮಟ್ಟ
ದಿಂದ ಕೂಡಿವೆ ಎಂದು ಫೋಟೋ ಆಥವಾ ವೀಡಿಯೋ ಸಮೇತ ದೂರು ಸಲ್ಲಿಸಿದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಈಗಾಗಲೇ ಇಂತಹ ಮೂರು ದೂರುಗಳು ಬಂದಿದ್ದು ಅದರ ತನಿಖೆ ನಡೆದಿದೆ. ಯಾವುದೇ ಬಿಲ್‌ ಪಾವತಿ ಮಾಡುವ ಮುನ್ನ ಕಾಮಗಾರಿಗಳನ್ನು ಪರಿಶೀಲಿಸಲಾಗುವುದು ಎಂದರು.

ಸಾವಿರಾರು ಕೋ. ರೂ. ಬಾಕಿ
ಹಿಂದಿನ ಬಿಜೆಪಿ ಸರಕಾರದ ನೀತಿ ಗಳಿಂದ ರಾಜ್ಯದಲ್ಲಿ ಗುತ್ತಿಗೆದಾರರ ಸಾವಿರಾರು ಕೋಟಿ ರೂ. ಬಿಲ್‌ ಬಾಕಿ ಉಳಿದಿದೆ. ಲೋಕೋಪಯೋಗಿ ಇಲಾಖೆಯೊಂದರಲ್ಲೇ 6,000 ಕೋಟಿ ಬಾಕಿ ಇದೆ. ಇಲಾಖೆಗೆ ಇರುವ ಮೊತ್ತ 1,500 ಕೋಟಿ ರೂ. ಟೆಂಡರ್‌ ನಿಯಮಗಳ ಪ್ರಕಾರ ಒಂದು ಬಾರಿಗೆ ಮೂರನೇ ಒಂದು ಭಾಗದಷ್ಟು (ಶೇ. 33) ಬಿಲ್‌ ಕೊಡಬೇಕಾಗಿದೆ. ಇದನ್ನು ನೋಡಿದರೆ ಗುತ್ತಿಗೆದಾರರ ಬಾಕಿ ಪಾವತಿಗೆ ಎರಡರಿಂದ ಮೂರು ವರ್ಷ ಬೇಕಾಗುತ್ತದೆ. ಈ ಬಿಲ್‌ಗ‌ಳು ಬಾಕಿ ಉಳಿಯಲು ಕಾಂಗ್ರೆಸ್‌ ಸರಕಾರ ಕಾರಣ ಅಲ್ಲ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಕಾರಣ ಎಂದರು ಸತೀಶ್‌.

ಬೊಮ್ಮಾಯಿ ಸರಕಾರ ಮಂಡಿಸಿದ್ದ ಬಜೆಟ್‌ನ ಹಣವನ್ನು ನಮ್ಮ ಸರಕಾರ ಬೇರೆ ಕಡೆ ತಿರುಗಿಸಿಲ್ಲ. ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ವಿವಿಧ ಸಂಪನ್ಮೂಲಗಳಿಂದ 40 ಸಾವಿರ ಕೋಟಿ ರೂ.ಗಳನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ್ದಾರೆ ಎಂದರು.

ಟಾಪ್ ನ್ಯೂಸ್

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.