ಕಾಂಗ್ರೆಸ್‌ ಚೌಕಟ್ಟಲ್ಲೇ ಅಹಿಂದ ಸಂಘಟನೆ

ತುಳಿತಕ್ಕೊಳಗಾದವರ ಪರವಾಗಿರುವುದೇ ಕಾಂಗ್ರೆಸ್‌: ಸಿದ್ದರಾಮಯ್ಯ ಅಭಿಮತ

Team Udayavani, Jul 6, 2019, 5:00 AM IST

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಚೌಕಟ್ಟಿನಲ್ಲಿಯೇ ಅಹಿಂದ ಸಮಾವೇಶವನ್ನು ಮಾಡು ತ್ತೇನೆಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಮತ್ತೆ ಅಹಿಂದ ನಾಯಕತ್ವ ವಹಿಸಿ ಕೊಳ್ಳಲು ತಾವು ಸಿದ್ಧ ಎನ್ನುವ ಸಂದೇಶ ರವಾನಿಸಿದ್ದಾರೆ.

ಶುಕ್ರವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಕಾಂಗ್ರೆಸ್‌ ಅಂದರೆ ಅಹಿಂದ, ತುಳಿತಕ್ಕೊಳ ಗಾದವರ ಪರವಾಗಿ ರುವುದೇ ಕಾಂಗ್ರೆಸ್‌ ಎಂದು ಹೇಳಿದರು. ತಾವು ಮುಖ್ಯ ಮಂತ್ರಿಯಾಗಿದ್ದಾಗ ಅಹಿಂದ ವರ್ಗಗಳಿಗೆ ಸಾಕಷ್ಟು ಯೋಜನೆಗಳನ್ನು ನೀಡಿದರೂ, ಆ ವರ್ಗ ಚುನಾವಣೆಯಲ್ಲಿ ತಮ್ಮ ಬೆನ್ನಿಗೆ ನಿಲ್ಲ ಲಿಲ್ಲ ಎಂಬ ಬೇಸರವನ್ನು ತಮ್ಮ ಆಪ್ತರ ಎದುರು ಹೇಳಿಕೊಂಡಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮತ್ತೆ ಅಹಿಂದ ಸಂಘಟನೆ ಮಾಡುವಂತೆ ಮನವಿ ಮಾಡಿ ದ್ದರು. ಆ ಮೂಲಕ ಛಿದ್ರವಾಗಿರುವ ಅಹಿಂದ ಮತಗಳನ್ನು ಒಗ್ಗೂಡಿಸಿ, ಪಕ್ಷದ ಜತೆಗೆ ವೈಯಕ್ತಿಕ ನಾಯಕತ್ವವನ್ನೂ ಬಲಗೊಳಿಸಿ ಕೊಳ್ಳಬಹುದೆಂದು ಸಲಹೆ ನೀಡಿದ್ದರು.

ಆದರೆ, ಈ ಬಗ್ಗೆ ಸಿದ್ದರಾಮ್ಯಯ ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡದೇ ಮೌನ ವಹಿಸಿದ್ದರು. ಅಲ್ಲದೇ ಈಗಾಗಲೇ ಅಹಿಂದ ಹೆಸರು ಹೇಳಿರುವುದರಿಂದಲೇ ಮೇಲ್ವರ್ಗದ ಮತಗಳು ಕಾಂಗ್ರೆಸ್‌ನಿಂದ ದೂರವಾಗಿವೆ ಎಂಬ ಆರೋಪ ಕೇಳಿ ಬರುತ್ತಿರುವುದರಿಂದ ತಾವು ಅಹಿಂದ ಸಂಘಟನೆಗೆ ಮುಂದಾದರೆ, ಪಕ್ಷದ ಕೆಂಗಣ್ಣಿಗೆ ಗುರಿಯಾಗುತ್ತೇನೆ ಎನ್ನುವ ಕಾರಣಕ್ಕೆ ತಾವು ತೆರೆ ಮರೆಯಲ್ಲಿ ಪರೋಕ್ಷವಾಗಿ ಅಹಿಂದ ಸಂಘಟನೆಯ ಬೆನ್ನಿಗೆ ನಿಲ್ಲುತ್ತೇನೆಂದು ತಮ್ಮ ಆಪ್ತರ ಎದುರು ಹೇಳಿಕೊಂಡಿದ್ದರು ಎನ್ನಲಾಗಿತ್ತು.

ಆದರೆ, ಶುಕ್ರವಾರ ಕಾಂಗ್ರೆಸ್‌ ಚೌಕಟ್ಟಿನಲ್ಲಿಯೇ ಅಹಿಂದ ಸಂಘಟಿಸುವುದಾಗಿ ಹೇಳುವ ಮೂಲಕ ಮತ್ತೆ ಅಹಿಂದ ವರ್ಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕೈ ಹಾಕುವ ಮೂನ್ಸೂಚನೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ವಾಗ್ಧಾಳಿ: ಬಿಜೆಪಿ ಆಪರೇಷನ್‌ ಕಮಲ ಮಾಡುತ್ತಿರುವುದರ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಿಜೆಪಿಯವರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ. ಆದರೆ, ಅವರು ಅದರಲ್ಲಿ ಯಶಸ್ಸು ಕಾಣಲಿಲ್ಲ. ನಮ್ಮ ಶಾಸಕರನ್ನು ಬಿಜೆಪಿಯವರು ಮುಂಬೈಗೆ ಕರೆದುಕೊಂಡು ಹೋಗಿದ್ದು ಸುಳ್ಳಾ? ಅದ್ಯಾವುದೋ ಅಶ್ವಥ್‌ ನಾರಾಯಣ ಎನ್ನುವವನು ಕರೆದುಕೊಂಡು ಹೋಗಿದ್ದು ಸುಳ್ಳಾ? ಉಮೇಶ್‌ ಜಾಧವ್‌ ಬಿಜೆಪಿಗೆ ಹೋಗಿದ್ದು ಸುಳ್ಳಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ ಅತೃಪ್ತರಿದ್ದಾರೆಂದು ಬಿಜೆಪಿಯವರಿಗೆ ಹೇಗೆ ಗೊತ್ತು. ಅವರು ಯಾರನ್ನು ಸಂಪರ್ಕ ಮಾಡಿದ್ದಾರೆ ಎನ್ನವುದು ಎಲ್ಲವೂ ಗೊತ್ತಿದೆ. ಯಾರಿಗೆ ಆಮಿಷ ಒಡ್ಡಿದ್ದಾರೆಯೋ ಅವರೇ ಬಂದು ನಮ್ಮ ಬಳಿ ಹೇಳಿದ್ದಾರೆ ಎಂದರು. ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾವು ಅವರ ಜತೆ ಇನ್ನೂ ಮಾತನಾಡಿಲ್ಲ. ಜಿಂದಾಲ್ಗೆ ಜಮೀನು ಕೊಡಬೇಡಿ ಎಂದು ರಾಜೀ ನಾಮೆ ನೀಡಿದ್ದಾರೆ. ಬಿಜೆಪಿಯಲ್ಲಿದ್ದಾಗಲೇ ಜಮೀನು ನೀಡಿದ್ದಾರೆ. ಆಗ ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಮೇಶ್‌ ಜಾರಕಿಹೊಳಿ ಯಾವಾಗ ಬೇಕಾದರೂ ರಾಜೀನಾಮೆ ನೀಡಬಹುದು. ಆದರೆ, ಸಂಬಂಧಿಸಿದವರಿಗೆ ರಾಜೀನಾಮೆ ತಲುಪಿಸಬೇಕು. ರಮೇಶ್‌ ಜತೆ ಮಾತನಾಡಿ ಸಾಕಾಗಿದೆ. ನಮಗೇ ಬೇಜಾರಾಗಿ ಸುಮ್ಮನಾಗಿದ್ದೇವೆ ಎಂದರು. ಆಪರೇಷನ್‌ ಕಮಲದ ಆಡಿಯೋ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆ ವಿಳಂಬ ಮಾಡಿರುವ ಬಗ್ಗೆ ಮುಂಬರುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆಂದು ಹೇಳಿದರು.

ಇದೇ ವೇಳೆ, ಡಿಸಿಎಂ ಕೆ.ಎಸ್‌.ಈಶ್ವರಪ್ಪ ಹಾಗೂ ಜೆಡಿಎಸ್‌ ನಾಯಕ ಎಚ್.ವಿಶ್ವನಾಥ್‌ ಅವರಿಗೆ ನನ್ನ ಮೇಲೆ ಅಸೂಯೆ. ಅದಕ್ಕೆ ಪದೇಪದೆ ನನ್ನ ವಿರುದ್ಧ ಹೇಳಿಕೆ ನೀಡುತ್ತಾರೆಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ