1,500 ಪಿಡಿಒಗಳಿಗೆ ಭಡ್ತಿ
Team Udayavani, Nov 11, 2022, 7:00 AM IST
ಬೆಂಗಳೂರು: ರಾಜ್ಯ ಸರಕಾರ 1,500 ಪಿಡಿಒ ಹುದ್ದೆಗಳನ್ನು ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಿ ಸುತ್ತೋಲೆ ಹೊರಡಿಸಿದೆ.
2010ನೇ ಸಾಲಿನಲ್ಲಿ ನೇಮಕವಾದ ಪಿಡಿಒಗಳಿಗೆ ಸೇವಾವಧಿಯಲ್ಲಿ ಒಂದೇ ಒಂದು ಮುಂಭಡ್ತಿ ದೊರೆ ಯದ ಹಿನ್ನೆಲೆಯಲ್ಲಿ ಒಟ್ಟು 6,071 ಹುದ್ದೆಗಳ ಪೈಕಿ 1,500 ಹುದ್ದೆಗಳನ್ನು ವೇತನ ಶ್ರೇಣಿ 40,900-78,200 (ಗ್ರೂಪ್ ಬಿ ಕಿರಿಯ ವೃಂದ)ರೂ. ಹೊಂದಿರುವ ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀ ಕರಿಸಲು ಹಾಗೂ ಉಳಿದ 4,571 ಪಿಡಿಒ ಹುದ್ದೆಗಳನ್ನು ವೇತನ ಶ್ರೇಣಿ 37,900 ರೂ.ಗಳಿಂದ 70,850 ರೂ.ರಲ್ಲಿಯೇ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗ್ರಾಮೀಣ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2010ನೇ ಸಾಲಿನಲ್ಲಿ ಒಟ್ಟು 2,500 ಪಿಡಿಒಗಳನ್ನು ನೇರ ನೇಮಕ ಮಾಡಲಾಗಿತ್ತು. ಕಳೆದ 12 ವರ್ಷಗಳ ಅವಧಿ ಯಲ್ಲಿ 613 ಪಿಡಿಒಗಳಿಗೆ ಸಹಾಯಕ ನಿರ್ದೇಶಕರ ಹುದ್ದೆಗೆ ಮುಂಭಡ್ತಿ ನೀಡಲಾಗಿದೆ. ಶೇಕಡವಾರು ಪರಿಗಣಿಸಿ ದ್ದಲ್ಲಿ 2010ನೇ ಸಾಲಿನಲ್ಲಿ ನೇಮಕಾತಿ ಹೊಂದಿ ದವರಿಗೆ ಸೇವಾವಧಿಯಲ್ಲಿ ಒಂದೇ ಒಂದು ಮುಂಭಡ್ತಿ ದೊರೆತಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ