Udayavni Special

ನಿರಾಶ್ರಿತರಿಗೆ ತಾತ್ಕಾಲಿಕ ಪಡಿತರ ಚೀಟಿ ವಿತರಣೆ

Team Udayavani, Aug 22, 2018, 6:00 AM IST

31.jpg

ಬೆಂಗಳೂರು: ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ, ಗುಡ್ಡ ಕುಸಿತದಿಂದ ಮನೆ ಮಠ ಕಳೆದುಕೊಂಡು ಗುರುತಿನ ಚೀಟಿಯೂ ಇಲ್ಲದವರಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಆಸ್ತಿ-ಪಾಸ್ತಿ ಸೇರಿ ಎಲ್ಲ ರೀತಿಯ ದಾಖಲೆ ಕಳೆದು ಕೊಂಡಿರುವವರಿಗೆ ತಕ್ಷಣಕ್ಕೆ ಫೋಟೋ ಸಹಿತ ಪಡಿತರ ಚೀಟಿ ನೀಡಿ ಮುಂದೆ ಇತರೆ ಅಗತ್ಯ ಗುರುತಿನ ಚೀಟಿ ಮಾಡಿ ಕೊಳ್ಳಲು ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ.

ಮನೆ ಬಿಟ್ಟು ನೆಂಟರ ಮನೆಯಲ್ಲಿ ಆಶ್ರಯ ಪಡೆದಿರುವವರು, ನಿರಾಶ್ರಿತರ ಶಿಬಿರದಲ್ಲಿರುವ ಸಂತ್ರಸ್ತರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸೆ.1 ರಿಂದ ಒಂದು ತಿಂಗಳ ಈ ಅಭಿಯಾನ ಕೈಗೊಳ್ಳಲಿದೆ. ನಿರಾಶ್ರಿತರು ಸೇರಿ ಅಗತ್ಯ ಇರುವವರಿಗೆಲ್ಲಾ ಪಡಿತರ ಚೀಟಿ ವಿತರಿಸಿ ಮೂರ್‍ನಾಲ್ಕು ತಿಂಗಳು ಉಚಿತ ಪಡಿತರ ವಿತರಿ ಸುವುದು. ಇದಕ್ಕಾಗಿ ಪಡಿತರ ಮಳಿಗೆ ಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಇದರ ಉದ್ದೇಶ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಳಿ ಇರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಪಿಎಲ್‌
ಹಾಗೂ ಎಪಿಎಲ್‌ ಕಾರ್ಡ್‌ ವಿತರಣಾ ಡಾಟಾ ಅನ್ವಯ ನಿರಾಶ್ರಿತರ ಶಿಬಿರದ ಬಳಿ ಪಡಿತರ ಚೀಟಿ ವಿತರಣೆ ಕೇಂದ್ರ ತೆರೆಯುವುದು. ಕುಟುಂಬ ಸದಸ್ಯರ ಫೋಟೋ ಸಹಿತ ಪಡಿತರ ಚೀಟಿ ನೀಡುವುದು. ಇದಕ್ಕಾಗಿ ಪಡಿತರ ಮಳಿಗೆಗಳನ್ನೂ ಇಲಾಖೆಯಿಂದಲೇ ಸ್ಥಾಪಿಸುವುದು ಇದರ ಉದ್ದೇಶ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಬಳಿ ಇರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ವಿತರಣಾ ಡಾಟಾ ಅನ್ವಯ ನಿರಾಶ್ರಿತರ ಶಿಬಿರದ ಬಳಿ ಪಡಿತರ ಚೀಟಿ ವಿತರಣೆ ಕೇಂದ್ರ ತೆರೆಯುವುದು. ಕುಟುಂಬ ಸದಸ್ಯರ ಫೋಟೋ ಸಹಿತ ಪಡಿತರ ಚೀಟಿ ನೀಡುವುದು.  ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳ ತಂಡ ತಿಂಗಳ ಕಾಲ ಕೊಡಗು ಜಿಲ್ಲೆಯಲ್ಲಿ ಮೊಕ್ಕಾಂ ಹೂಡಲಿದ್ದು, ಪಡಿತರ ಚೀಟಿ ನೀಡುವ ಕೆಲಸದಲ್ಲಿ ತೊಡಗಲಿದ್ದಾರೆ. 

ಬಹುತೇಕ ಕಡೆ ಪಡಿತರ ವಿತರಣೆ ಮಳಿಗೆಗಳು ಕೊಚ್ಚಿ ಹೋಗಿರುವುದರಿಂದ ಇಲಾಖೆ ವತಿಯಿಂದ ಹೊಸ ಮಳಿಗೆಗಳ ಸ್ಥಾಪನೆಗೂ ನಿರ್ಧರಿಸಲಾಗಿದೆ. ಇದರ ಉಸ್ತುವಾರಿಗಾಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಪೂರೈಕೆ: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವತಿಯಿಂದ ಸಚಿವರ ನೇತೃತ್ವದ ತಂಡ ಶನಿವಾರದಿಂದ ನಾಲ್ಕು ದಿನ ಕೊಡಗು ಪ್ರವಾಸ ಬೆಳೆಸಲಿದೆ. ಬ್ಲಾಂಕೆಟ್‌, ಬಕೆಟ್‌ ಮತ್ತು ಜಗ್‌, ನೈಟಿ, ಸ್ಯಾನಿಟರಿ ನ್ಯಾಪ್ಕಿನ್‌, 500 ಟನ್‌ ಅಕ್ಕಿ, 100 ಕ್ವಿಂಟಾಲ್‌ ಸಕ್ಕರೆ, ಸಾಂಬಾರ್‌ ಪುಡಿ ಪ್ಯಾಕೆಟ್‌ ನಿರಾಶ್ರಿತರ ಶಿಬಿರಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೊಸದಾಗಿ ಪಡಿತರ ಚೀಟಿ ಮಾಡಿಕೊಡಲು ವಿಶೇಷವಾಗಿ ಗುಡ್ಡಗಾಡು ಪ್ರದೇಶ ಹಾಗೂ ಅರಣ್ಯದ ಅಂಚಿನಲ್ಲಿರುವ ಕುಟುಂಬಗಳಿಗೆ ತಕ್ಷಣ ಪಡಿತರ ಚೀಟಿ ವಿತರಿಸಲು ನಿಯಮಾವಳಿ ಸರಳೀಕರಣಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ತಾತ್ಕಾಲಿಕ ಪಡಿತರ ಚೀಟಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಪ್ರತಿ ಕುಟುಂಬಕ್ಕೂ 10 ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, 1 ಕೆಜಿ ತೊಗರಿ ಬೇಳೆ, ಒಂದು ಕೆಜಿ ಎಣ್ಣೆ ವಿತರಿಸಲಾಗುವುದು. 50 ಸಾವಿರ ಬ್ಯಾಗ್‌ಗಳನ್ನು ಸಿದ್ಧಪಡಿಸಿ ಶನಿವಾರದಿಂದ ಅಗತ್ಯ ಇದ್ದವರಿಗೆ ವಿತರಿಸಲಾಗುವುದು.
● ಜಮೀರ್‌ ಅಹಮದ್,ಆಹಾರ ಸಚಿವ

ಎಸ್‌. ಲಕ್ಷ್ಮಿನಾರಾಯಣ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ: ಮಾರ್ಗಸೂಚಿ ಪ್ರಕಟಿಸಿದ ಯುಜಿಸಿ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ

ಕೋವಿಡ್ 19 ಸೋಂಕು: ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ನಟಿ ಆಶಾಲತಾ ವಿಧಿವಶ

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿ.ಸಿ. ಪಾಟೀಲ್

ಕೃಷಿ ಕಾಯ್ದೆಯಿಂದ ರೈತರಿಗೆ ಸ್ವಾತಂತ್ರ್ಯ ಸಿಕ್ಕಿದ ಹಾಗಾಗಿದೆ: ಸಚಿವ ಬಿ.ಸಿ. ಪಾಟೀಲ್

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

ನಶೆ ನಂಟು: ವಿಚಾರಣೆಗೆ ಹಾಜರಾದ ಕಿರುತೆರೆ ನಟ ಅಭಿಷೇಕ್, ನಟಿ ಗೀತಾ ಭಟ್

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

” ಡ್ರಗ್ಸ್‌ ಪ್ರಕರಣದಲ್ಲಿ ದೊಡ್ಡವರನ್ನೇಕೆ ಬಂಧಿಸಿಲ್ಲ?” ನಟಿ ಪಾರುಲ್ ಯಾದವ್ ಪ್ರಶ್ನೆ

ಚಾಮರಾಜನಗರ ಪಟ್ಟಣ ಪಂಚಾಯತ್ ನ ನೂತನ ಸದಸ್ಯ ಕೋವಿಡ್ ಸೋಂಕಿನಿಂದ ಸಾವು

ಚಾಮರಾಜನಗರ ಪಟ್ಟಣ ಪಂಚಾಯತ್ ನ ನೂತನ ಸದಸ್ಯ ಕೋವಿಡ್ ಸೋಂಕಿನಿಂದ ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕಾವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

ಮಂಡ್ಯ ಜಿಲ್ಲೆಯಲ್ಲಿ 102 ಮಂದಿಗೆ ಕೋವಿಡ್ ಪಾಸಿಟಿವ್! 424 ಮಂದಿ ಡಿಸ್ಚಾರ್ಜ್; ಇಬ್ಬರು ಸಾವು

MUST WATCH

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh

udayavani youtube

ಗೇರು ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸಹೊಸ ಸೇರ್ಪಡೆ

ಸದಾಶಿವ ವರದಿ ಜಾರಿಗಾಗಿ ಅಹೋರಾತ್ರಿ ಧರಣಿ

ಸದಾಶಿವ ವರದಿ ಜಾರಿಗಾಗಿ ಅಹೋರಾತ್ರಿ ಧರಣಿ

ಜನತೆ ನಿರ್ಲಕ್ಷ್ಯಕ್ಕೆ ಹೆಚ್ಚುತ್ತಿದೆ ಕೋವಿಡ್ ಸೋಂಕು

ಜನತೆ ನಿರ್ಲಕ್ಷ್ಯಕ್ಕೆ ಹೆಚ್ಚುತ್ತಿದೆ ಕೋವಿಡ್ ಸೋಂಕು

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಸೊರಬದಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶ: ಮೂವರು ಆರೋಪಿಗಳು ಪರಾರಿ

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಶಾಸಕಿಗೆ ಧರಣಿ ಅರ್ಥ ತಿಳಿದಿಲ್ಲ

ಶಾಸಕಿಗೆ ಧರಣಿ ಅರ್ಥ ತಿಳಿದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.