ಸಿಂಡಿಕೇಟ್‌ ಬ್ಯಾಂಕ್‌ಗೆ 4ನೇ ತ್ತೈಮಾಸಿಕದಲ್ಲಿ 128 ಕೋಟಿ ನಿವ್ವಳ ಲಾಭ

Team Udayavani, May 11, 2019, 3:02 AM IST

4ne-truma

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌, 2018-19ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 128 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಶುಕ್ರವಾರ ನಗರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ತ್ತೈಮಾಸಿಕದಲ್ಲಿ ಗಳಿಸಿದ್ದ 108 ಕೋಟಿ ರೂ.ಲಾಭಕ್ಕಿಂತ 20 ಕೋಟಿ ರೂ.ಅಧಿಕ ಲಾಭ ಗಳಿಸಿ ಬ್ಯಾಂಕ್‌ ಪ್ರಗತಿ ಹಾದಿಯನ್ನು ಕಂಡುಕೊಂಡಿದೆ. ಪ್ರತಿ ತ್ತೈಮಾಸಿಕದಲ್ಲೂ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿರುವ ಬ್ಯಾಂಕು ತನ್ನ ಕಾಸಾ (ಡೊಮೆಸ್ಟಿಕ್‌) ಠೇವಣಿಯನ್ನು ಶೇ.44.44 ರಿಂದ ಶೇ.36.77ಕ್ಕೆ ಹೆಚ್ಚಳ ಮಾಡಿಕೊಂಡಿದೆ.

ಬ್ಯಾಂಕಿನ ಜಾಗತಿಕ ವಹಿವಾಟು, ಮಾರ್ಚ್‌ 31 ರಂದು 4,77,046 ಕೋಟಿ ರೂ.ಗೆ ತಲುಪಿದ್ದು, ಡಿಸೆಂಬರ್‌ 2018ರಲ್ಲಿದ್ದ ರಿಟೇಲ್‌ ಅವಧಿ ಠೇವಣಿಯ ಪ್ರಮಾಣ ಶೇ.63.54 ರಿಂದ 2019ರ ಮಾರ್ಚ್‌ 31ಕ್ಕೆ ಶೇ.66.45 ರಷ್ಟು ಹೆಚ್ಚಳ ಮಾಡಿಕೊಂಡಿದೆ. ಕಾರ್ಯ ನಿರ್ವಹಣಾ ಲಾಭದಲ್ಲೂ ಗಣನೀಯವಾಗಿ ಏರಿಕೆಯಾಗಿದ್ದು, ನಾಲ್ಕನೇ ತ್ತೈಮಾಸಿಕಾಂತ್ಯಕ್ಕೆ ಶೇ.67ರಷ್ಟು ಏರಿಕೆಯಾಗಿ 1057 ಕೋಟಿ ರೂ.ಗೆ ತಲುಪಿದೆ ಎಂದರು.

ನಿವ್ವಳ ಬಡ್ಡಿ ಆದಾಯ (ಎನ್‌ಐಐ) ಶೇ.16 ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 1,679 ಕೋಟಿ ರೂ.ಗಳಿಂದ 1,952 ಕೋಟಿಗೆ ತಲುಪಿದೆ. ನಿವ್ವಳ ಬಡ್ಡಿ ಮಾರ್ಜಿನ್‌ (ಎನ್‌ಐಎಂ -ಡೊಮೆಸ್ಟಿಕ್‌) 39 ಬಿಪಿಎಸ್‌ (ಶೇ.2.80 ರಿಂದ ಶೇ.3.19)ಗೆ ಬಂದು ನಿಂತಿದೆ. ಆದ್ಯತಾ ವಲಯಕ್ಕೆ ನೀಡಿರುವ ಸಾಲದ ಪ್ರಮಾಣ 73,733 ಕೋಟಿ ರೂ.ಅಂದರೆ ಶೇ.40.54 ರಷ್ಟು ಏರಿಕೆಯಾದರೆ,

ಕೃಷಿ ಕ್ಷೇತ್ರಕ್ಕೆ ನೀಡಿರುವ ಸಾಲದ ಪ್ರಮಾಣ 34,439 ಕೋಟಿ ರೂ., ಶೇ. 18.94ರಷ್ಟು ಹೆಚ್ಚಳವಾಗಿದೆ. ಇತರ ಕ್ಷೇತಕ್ಕೆ 39,294 ಕೋಟಿ ರೂ.ನೀಡಲಾಗಿದ್ದು, ಅದರ ಪ್ರಮಾಣದಲ್ಲಿ 21.60ರಷ್ಟು ಏರಿಕೆ ಮಾಡಲಾಗಿದೆ. 4ನೇ ತ್ತೈಮಾಸಿಕಾಂತ್ಯದ ಅನುತ್ಪಾದಕ ಆಸ್ತಿ (ಎನ್‌ಪಿಎ) ಪ್ರಮಾಣ ತೃಪ್ತಿದಾಯಕವಾಗಿದ್ದು, ಡಿ.31ರ ಲೆಕ್ಕಾಚಾರದಲ್ಲಿ ನಿವ್ವಳ ಎನ್‌ಪಿಎ ಶೇ.6.75 ರಿಂದ ಶೇ.6.16ಕ್ಕೆ ಇಳಿಕೆಯಾಗಿದೆ ಎಂದರು.

ಬ್ಯಾಂಕ್‌ ಸದಾ ಎಂಎಸ್‌ಎಂಇ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದನ್ನು ಮುಂದಿನ ದಿನಗಳಲ್ಲೂ ಮುಂದುವರಿಸಲಿದೆ. ಇದರೊಟ್ಟಿಗೆ ರಿಟೈಲ್‌ ಹಾಗೂ ಕಾರ್ಪೋರೇಟ್‌ ಕ್ಷೇತ್ರದತ್ತವೂ ಗಮನ ಹರಿಸಲಿದೆ ಎಂದು ಅವರು ತಿಳಿಸಿದರು.

ಟಾಪ್ ನ್ಯೂಸ್

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ಪವಿತ್ರಾ ಗೌಡಗೆ ಪುತ್ರಿಯಿಂದ ಇನ್‌ಸ್ಟಾದಲ್ಲಿ ಅಪ್ಪಂದಿರ ದಿನದ ಶುಭಾಶಯ!

ಪವಿತ್ರಾ ಗೌಡಗೆ ಪುತ್ರಿಯಿಂದ ಇನ್‌ಸ್ಟಾದಲ್ಲಿ ಅಪ್ಪಂದಿರ ದಿನದ ಶುಭಾಶಯ!

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

naksal (2)

Chhattisgarh:ಎನ್‌ಕೌಂಟರ್‌ನಲ್ಲಿ ಐದು ಮಾವೋವಾದಿಗಳ ಹತ್ಯೆ

Pannu Singh

ಉಗ್ರ ಪನ್ನೂ ಹತ್ಯೆಗೆ ಯತ್ನ: ಆರೋಪಿ ಅಮೆರಿಕಕ್ಕೆ ಹಸ್ತಾಂತರ

rain

ಸದ್ಯ ಮುಂಗಾರು ದುರ್ಬಲ: ಮಾಸಾಂತ್ಯಕ್ಕೆ ಚೇತರಿಕೆ ಸಾಧ್ಯತೆ

BJP 2

Election: ಮಹಾರಾಷ್ಟ್ರ ಸೇರಿ 4 ರಾಜ್ಯ ಉಸ್ತುವಾರಿ ನೇಮಿಸಿದ ಬಿಜೆಪಿ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.