ತನ್ವೀರ್ ಸೇಠ್ ಹತ್ಯೆ ಯತ್ನ: ಮತ್ತೊಬ್ಬ ಸೆರೆ
Team Udayavani, Dec 31, 2019, 3:00 AM IST
ಮೈಸೂರು: ಶಾಸಕ ತನ್ವೀರ್ ಸೇಠ್ ಕೊಲೆ ಯತ್ನ ಪ್ರಕರಣ ಸಂಬಂಧ ಪೊಲೀಸರು ಮತ್ತೊಬ್ಬ ಆರೋಪಿ ಯನ್ನು ಬಂಧಿಸಿ ದ್ದಾರೆ. ಗೌಸಿಯಾ ನಗರದ ನಿವಾಸಿ ಮತೀನ್ ಬೇಗ್ (45) ಬಂಧಿತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರು, ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು.
ಘಟನೆ ವೇಳೆ ಒಬ್ಬ ಸಿಕ್ಕಿದ್ದು, ಪೊಲೀಸರು ಕಾರ್ಯಾ ಚರಣೆ ನಡೆಸಿ ಉಳಿದ ಏಳು ಆರೋಪಿಗಳನ್ನು ಬಂಧಿಸಿದ್ದರು. ಶನಿವಾರ ಮತೀನ್ ಬೇಗ್ ನನ್ನು ಸೆರೆ ಹಿಡಿಯುವ ಮೂಲಕ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. ಹತ್ಯೆಗೆ ಯತ್ನಿಸಿದ ದಿನವೇ ಫರ್ಹಾನ್ ಪಾಷ (25) ನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸರು ಅಕ್ರಮ್, ಅಬೀದ್ ಪಾಷ, ನೂರ್‌ಖಾನ್, ಮುಜೀಬ್, ಮುಜಾಮಿಲ್ ಮತ್ತು ಇರ್ಫಾನ್‌ನನ್ನು ಬಂಧಿಸಿದ್ದರು.