- Saturday 07 Dec 2019
ರಕ್ಷಣಾ ಸಚಿವರಿಗೆ ಮಳೆ ದುರಂತ ವಿವರಿಸಿದ್ದ ಬಾಲಕ ದಾರುಣ ಸಾವು
Team Udayavani, May 19, 2019, 3:00 AM IST
ಮಡಿಕೇರಿ: ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ವೇಲ್ ಸುತ್ತಿಕೊಂಡ ಪರಿಣಾಮ 8 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಮಡಿಕೇರಿ ಹೊರವಲಯದ ಗ್ರಾಮದಲ್ಲಿ ನಡೆದಿದೆ. ಪ್ರಕೃತಿ ವಿಕೋಪ ಸಂದರ್ಭ ಮನೆಯನ್ನು ಕಳೆದುಕೊಂಡಿದ್ದ ಬಾಲಕ, ಸಂತ್ರಸ್ತನಾಗಿ ಕುಟುಂಬದೊಂದಿಗೆ ಮಡಿಕೇರಿಯ ಪೊಲೀಸ್ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದ.
ಈ ಸಂದರ್ಭ ಮೈತ್ರಿ ಸಮುದಾಯ ಭವನಕ್ಕೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ತನ್ನ ಗ್ರಾಮದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದ ನೈಜ್ಯ ಘಟನೆಗಳನ್ನು ಚಿತ್ರ ರೂಪದಲ್ಲಿ ಬಿಡಿಸಿ, ಅದನ್ನು ಸಚಿವರಿಗೆ ವಿವರಿಸುವ ಮೂಲಕ ಪ್ರಕೃತಿ ವಿಕೋಪದ ಕರಾಳತೆಯನ್ನು ಮನವರಿಕೆ ಮಾಡುವಲ್ಲಿ ಸಫಲನಾಗಿದ್ದ.
ಮಡಿಕೇರಿ ಹೊರವಲಯದ ಗ್ರಾಮದಲ್ಲಿದ್ದ 8 ವರ್ಷದ ಬಾಲಕ ಮನೆಯಲ್ಲಿ ಒಬ್ಬೊಂಟಿಯಾಗಿ ಮನೆಯ ಮೇಲ್ಚಾವಣಿಗೆ ವೇಲ್ ಕಟ್ಟಿಕೊಂಡು ಆಟವಾಡುತ್ತಿದ್ದ. ಈ ಸಂದರ್ಭ ವೇಲ್ ಬಾಲಕನ ಕುತ್ತಿಗೆಗೆ ಬಿಗಿದುಕೊಂಡಿದ್ದು, ಅದನ್ನು ಬಿಡಿಸಿಕೊಳ್ಳಲಾಗದೆ ಬಾಲಕ ಸ್ಥಳದಲ್ಲೇ ಒದ್ದಾಡಿದ್ದಾನೆ.
ಮಧ್ಯಾಹ್ನ ವೇಳೆಗೆ ಬಾಲಕನ ತಂದೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಮಗನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ಹೊತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು. ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಂಡಿದ್ದ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿ ಶೇ.30 ರಷ್ಟು ಕಬ್ಬು ಇಳುವರಿ ಕುಸಿತ ಕಂಡಿದೆ ಎಂದು ಸಕ್ಕರೆ ಸಚಿವ...
-
ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್ಗಳನ್ನು ಪೂರೈಸಿದೆ....
-
ವಿಜಯಪುರ: ಚಿನ್ನದ ವ್ಯಾಪಾರಿಯನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ 15 ಲಕ್ಷ ರೂ. ವಸೂಲಿ ಮಾಡಿದ್ದ ನಾಲ್ವರ ತಂಡವನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲೆಯ ಪೊಲೀಸರು...
-
ಬೆಂಗಳೂರು/ಹೊಸಕೋಟೆ: ಭಾರೀ ಕುತೂಹಲ ಹಾಗೂ ಜಿದ್ದಾಜಿದ್ದಿನ ಕಣವಾಗಿದ್ದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಶನಿವಾರ ಮುಂಜಾನೆಯೇ ಮುಖ್ಯಮಂತ್ರಿ...
-
ಬೆಂಗಳೂರು: ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದ ಬೆನ್ನಲ್ಲೇ ಫಲಿತಾಂಶಕ್ಕಾಗಿ ದಿನಗಣನೆ ಆರಂಭವಾಗಿದೆ. ಮತ್ತೊಂದೆಡೆ ಪ್ರತಿಷ್ಠಿತ ಕ್ಷೇತ್ರಗಳಲ್ಲಿ...
ಹೊಸ ಸೇರ್ಪಡೆ
-
ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಕಾಣಿಸಿಕೊಂಡಿದ್ದ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿ ಶೇ.30 ರಷ್ಟು ಕಬ್ಬು ಇಳುವರಿ ಕುಸಿತ ಕಂಡಿದೆ ಎಂದು ಸಕ್ಕರೆ ಸಚಿವ...
-
ಕೋಲ್ಕತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಂಪರ್ಕಿಸಿ ಮಾತನಾಡುವ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್...
-
ಬೆಂಗಳೂರು: ಕನ್ನಡದ ಜನಪ್ರಿಯ ಲಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ಕಾರ್ಯಕ್ರಮ ನಿರೀಕ್ಷೆಗಿಂತ ಚೆನ್ನಾಗಿ ಮೂಡಿಬರುತ್ತಿದೆ. ಈಗಾಗಲೇ 50 ಎಪಿಸೋಡ್ಗಳನ್ನು ಪೂರೈಸಿದೆ....
-
ವಿಟ್ಲ: ಕಟ್ಟಡ ಕೆಲಸ ಮಾಡುತಿದ್ದ ಕಾರ್ಮಿಕರ ಮೇಲೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಗಂಭೀರ ಗಾಯಗೊಂಡ...
-
ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ...