- Wednesday 11 Dec 2019
ನಮ್ಮ ಬೆಂಬಲ ಕಾಂಗ್ರೆಸ್, ರಾಹುಲ್ಗೆ: ಎಚ್.ಡಿ.ದೇವೇಗೌಡ
Team Udayavani, May 19, 2019, 3:00 AM IST
ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶ ಏನೇ ಆದರೂ ನಾವು ಕಾಂಗ್ರೆಸ್ ಜತೆ ನಿಲ್ಲಲಿದ್ದೇವೆ. ರಾಹುಲ್ಗಾಂಧಿ ಪ್ರಧಾನಿಯಾಗಲು ನಮ್ಮ ಬೆಂಬಲ ಇರುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಬರುವುದಿಲ್ಲ. ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಜತೆ ನಾವು ಲೋಕಸಭಾ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದೇವೆ.
ಹೀಗಾಗಿ, ನಾವು ಕಾಂಗ್ರೆಸ್ ಜತೆ ಇರುತ್ತೇವೆ. ರಾಹುಲ್ಗಾಂಧಿಯವರು ಪ್ರಧಾನಿಯಾಗಲು ನಮ್ಮ ಬೆಂಬಲ ಇರುತ್ತದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಫಲಿತಾಂಶದ ನಂತರ ಬಿಜೆಪಿಯೇತರ ಸಮಾನ ಪಕ್ಷಗಳೆಲ್ಲಾ ಕುಳಿತು, ಚರ್ಚಿಸಿ ಒಮ್ಮತದ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ 18 ರಿಂದ 19 ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಫಲ...
-
ಬೆಂಗಳೂರು: ಪುಣೆ-ಬೆಂಗಳೂರು ಷಟ್ಪಥ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಕೈಗೊಳ್ಳಲಿದ್ದೇವೆ ಮತ್ತು ಇದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು...
-
ಹುಬ್ಬಳ್ಳಿ: ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ ಎಂಬುದು ಜನತೆಯ ಆಶಯವಾಗಿದೆ. ಸಮೀಕ್ಷೆ ಮೀರಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ. ಗೆದ್ದವರಿಗೆ ನಾವು...
-
ಬೆಂಗಳೂರು: ರಾಜ್ಯದ ಹದಿನೈದು ಕ್ಚೇತ್ರಗಳ ಉಪಚುನಾವಣೆಯ ಫಲಿತಾಂಶ ಬಂದಿದೆ. 12 ಸ್ಥಾನಗಳೊಂದಿಗೆ ಆಡಳಿತಾರೂಢ ಬಿಜೆಪಿಗೆ ಮತದಾರರು ಜೈ ಎಂದಿದ್ದರೆ, ಕಾಂಗ್ರೆಸ್...
-
ಬೆಂಗಳೂರು: ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಭಾರಿ ಚರ್ಚೆಯ ನಂತರ ಮಧ್ಯರಾತ್ರಿ...
ಹೊಸ ಸೇರ್ಪಡೆ
-
ಸ್ಯಾಂಟಿಯಾಗೋ: 38 ಜನರನ್ನು ಹೊತ್ತೂಯ್ಯುತ್ತಿದ್ದ ಚಿಲಿಯ ಯುದ್ಧ ವಿಮಾನ ಸೋಮವಾರ ಸಂಜೆ ಕಾಣೆಯಾಗಿದೆ. ಸಿ-130 ಹರ್ಕ್ಯುಲಸ್ ವಿಮಾನದಲ್ಲಿ 17 ಸಿಬ್ಬಂದಿ ಮತ್ತು 12 ಪ್ರಯಾಣಿಕರು...
-
ರಾಯ್ಪುರ: ತಲೆಗೆ 40 ಲಕ್ಷ ರೂ. ಬಹುಮಾನ ಹೊತ್ತಿದ್ದ ಛತ್ತೀಸ್ಗಢದ ಪ್ರಮುಖ ನಕ್ಸಲ್ ನಾಯಕ ರಾಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ...
-
ರಾಂಚಿ: ಜಾರ್ಖಂಡ್ನಲ್ಲಿ ಸೋಮವಾರ ರಾತ್ರಿ ಸಿಆರ್ಪಿಎಫ್ ಯೋಧರೊಬ್ಬರು ಪಾನಮತ್ತರಾಗಿ ತಮ್ಮ ಸಹೋದ್ಯೋಗಿ ಯೋಧ ಮತ್ತು ಅಧಿಕಾರಿ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ....
-
ಹೊಸದಿಲ್ಲಿ: ಹೋಂಡಾ ಕಾರ್ಸ್ ಇಂಡಿಯಾವು ಮಂಗಳವಾರ ಬಿಎಸ್6 ಮಾದರಿಯ ಪೆಟ್ರೋಲ್ ಆವೃತ್ತಿಯ ಹೋಂಡಾ ಸಿಟಿ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸದಿಲ್ಲಿಯಲ್ಲಿ...
-
ಹೊಸದಿಲ್ಲಿ: ದಕ್ಷಿಣ ಕೊರಿಯಾದ ಆಟೋಮೊಬೈಲ್ ದಿಗ್ಗಜ ಹ್ಯುಂಡೈ ಮೋಟಾರ್ ಇಂಡಿಯಾ ಮುಂದಿನ ಜನವರಿಯಿಂದ ತನ್ನ ಎಲ್ಲ ಕಾರುಗಳ ದರವನ್ನೂ ಏರಿಕೆ ಮಾಡುವುದಾಗಿ ಘೋಷಿಸಿದೆ....