ವಿವಾದವಾದ “ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರು

Team Udayavani, Nov 11, 2021, 6:53 AM IST

ವಿವಾದವಾದ “ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣದ ಜಾಗದ ವಿವಾದ ಬಗೆಹರಿದು ಕಾರ್ಯಾರಂಭ ಮಾಡಿರುವ ಬೆನ್ನಲ್ಲೇ ಈಗ “ಜಿಲ್ಲಾ ಕೇಂದ್ರದ ಹೆಸರು ಬದಲಾವಣೆ’ ಕೂಗು ಎದ್ದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೇವನಹಳ್ಳಿ, ದೊಡ್ಡಬಳ್ಳಾ ಪುರ, ನೆಲಮಂಗಲ, ಹೊಸಕೋಟೆ ತಾಲೂಕುಗಳು ಸೇರಿವೆ. ದೇವನ ಹಳ್ಳಿ ತಾಲೂಕಿನ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ ಅವರು “ದೇವನಹಳ್ಳಿ ಜಿಲ್ಲೆ’ ಎಂದು ಹೆಸರು ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಶಾಸಕರ ಈ ಹೇಳಿಕೆಗೆ ನೆಲ ಮಂಗಲ, ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ವಿರೋಧ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರದ ಶಾಸಕ ರಾದ ವೆಂಕಟರಮಣಯ್ಯ ಅವರು ಬಹಿರಂಗ ವಾಗಿಯೇ ಜಿಲ್ಲಾ ಕೇಂದ್ರದ ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈಗಿರುವ “ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರೇ ಸೂಕ್ತ ವಾದದ್ದು ಎಂದು ತಿಳಿಸಿದ್ದಾರೆ. ಈ ಕುರಿತು ಹಲವು ಸಂಘಟನೆಗಳು, ಸ್ವಾಮೀಜಿಗಳು ದೊಡ್ಡಬಳ್ಳಾಪುರ ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು ಒಂದು ವೇಳೆ ಜಿಲ್ಲಾ ಕೇಂದ್ರದ ಹೆಸರನ್ನು ಬದಲಾವಣೆ ಮಾಡಲು ಮುಂದಾಗಿದ್ದೇ ಆದರೆ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡುವುದಾಗಿ ಶಿವಾನಂದಾ ಶ್ರಮದ ರಮಣಾನಂದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ದಿನ ಕಳೆದಂತೆ ಜಿಲ್ಲಾ ಕೇಂದ್ರದ ಹೆಸರು ವಿವಾದ ತಾರಕಕ್ಕೇರಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ನಡುವೆ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಕೇಂದ್ರದ ಕಚೇರಿ ದೇವನಹಳ್ಳಿಯಿಂದ 12 ಕಿ.ಮೀ. ದೂರ ದಲ್ಲಿದ್ದರೆ, ದೊಡ್ಡಬಳ್ಳಾಪುರಕ್ಕೆ 8 ಕಿ.ಮೀ. ದೂರದಲ್ಲಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಬೈರೇಗೌಡರ ಒತ್ತಾಸೆ ಮೇರೆಗೆ ಅನುದಾನ ಬಿಡುಗಡೆಗೊಂಡು ಜಿಲ್ಲಾಧಿಕಾರಿ ಕಟ್ಟಡ ವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ತರಾತುರಿ ಯಲ್ಲಿ ಕಟ್ಟಡವನ್ನು ಉದ್ಘಾಟಿಸಿದ್ದರು. ಜಿಲ್ಲಾ ಕೇಂದ್ರದ ಕಟ್ಟಡ ದೇವನಹಳ್ಳಿಗೆ ಸೇರಿದ್ದರೂ ಜಿಲ್ಲಾಸ್ಪತ್ರೆ, ಜಿಲ್ಲಾ ಕ್ರೀಡಾಂಗಣ ದೊಡ್ಡಬಳ್ಳಾಪುರದ ಪಾಲಾಗಿದೆ. ಆದರೆ, ಸಮರ್ಪಕ ವಾಗಿ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ.

ಯಥಾಸ್ಥಿತಿ ಇರಲಿ: ಜಿಲ್ಲಾಧಿಕಾರಿ ಕಚೇರಿ ದೇವನಹಳ್ಳಿಗೆ ಸೇರಿದ್ದರೂ ಈಗಿನಂತೆಯೇ ಜಿಲ್ಲಾ-ಸರಕಾರಿ ಕಾರ್ಯಕ್ರಮಗಳನ್ನು ಒಂದೊಂದು ವರ್ಷ ಒಂದೊಂದು ತಾಲೂಕಿನಲ್ಲಿ ಆಯೋಜನೆ ಮಾಡಲಿ. ಈ ಕುರಿತು ಜನಪ್ರತಿನಿಧಿಗಳು ಚರ್ಚಿಸಲಿ. “ದೇವನಹಳ್ಳಿ ಜಿಲ್ಲೆ’ ಹೆಸರೇ ಅಸಂಬದ್ಧ. ಕೇವಲ ಹೆಸರು ಇಟ್ಟರೆ ಸಾಲದು, ಅಭಿವೃದ್ಧಿಯೂ ಬೇಕಿದೆ. ಬೆಂಗಳೂರಿಗೆ ಅನತಿ ದೂರದ “ಬೆಂಗಳೂರು ಗ್ರಾಮಾಂತರ ಜಿಲ್ಲೆ’ ಹೆಸರನ್ನೇ ಮುಂದುವರಿಸಬೇಕು ಎಂಬುದು ಜಿಲ್ಲೆಯ ಜನತೆಯ ಅಭಿಪ್ರಾಯವಾಗಿದೆ.

ಪಾದಯಾತ್ರೆ ನಡೆಸಲು ಬಿಜೆಪಿ ಸಜ್ಜು: “ದೇವನಹಳ್ಳಿ ಜಿಲ್ಲೆ’ ಹೆಸರನ್ನಿಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ ವರೆಗೆ ದೇವನಹಳ್ಳಿ ತಾಲೂಕಿನ ಬಿಜೆಪಿ ಮುಖಂಡರು ಪಾದಯಾತ್ರೆ ನಡೆಸಲು ಮುಂದಾಗಿದ್ದರು. ಆದರೆ ಉಪಚುನಾವಣೆಗಳು ನಡೆಯುತ್ತಿರುವುದರಿಂದ ಪಾದ ಯಾತ್ರೆಯನ್ನು ಮುಂದೂಡಲಾಗಿದೆ. ಇನ್ನು ಬಿಜೆಪಿ ಪಾದಯಾತ್ರೆಗೆ ಶಾಸಕರಾದ ನಿಸರ್ಗನಾರಾ ಯಣ ಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಬಿಜೆಪಿ ಸರಕಾರವೇ ಆಡಳಿತ ನಡೆಸುತ್ತಿದೆ. ಸರಕಾರಕ್ಕೆ ಮನವಿ ಸಲ್ಲಿಸಿ ದೇವನಹಳ್ಳಿ ಜಿಲ್ಲೆ ಹೆಸರನ್ನಿಡಬಹುದು. ಪಾದಯಾತ್ರೆ ಆವಶ್ಯಕತೆಯೇ ಇಲ್ಲ ಎಂದಿದ್ದಾರೆ.

ರಚನೆ: ಬೆಂಗಳೂರನ್ನು ಬೇರ್ಪಡಿಸಿ 1986ರಲ್ಲಿ ಬೆಂಗಳೂರು ನಗರ-ಬೆಂಗಳೂರು ಗ್ರಾಮಾಂತರ ಜಿಲ್ಲೆ ಯೆಂದು ರಚಿಸಲಾಯಿತು. ಬೆಂಗಳೂರು ಗ್ರಾಮಾಂತರ ದಲ್ಲಿ 4 ತಾಲೂಕುಗಳು, 35 ಹೋಬಳಿಗಳು ಬರುತ್ತವೆ.

ಹರೀಶ್‌ ಎಚ್‌. ಆರ್‌. ಹಾಡೋನ ಹಳ್ಳಿ

ಟಾಪ್ ನ್ಯೂಸ್

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.