ಕೋಟೆನಾಡಿನ ದೇಗುಲಗಳಲ್ಲೂ ಜಲಕ್ಷಾಮ

Team Udayavani, May 19, 2019, 3:00 AM IST

Udayavani Kannada Newspaper

ಚಿತ್ರದುರ್ಗ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಎದುರಾಗಿರುವ ಜಲಕ್ಷಾಮದಿಂದ ಮಧ್ಯ ಕರ್ನಾಟಕದ ದೇಗುಲಗಳೂ ಹೊರತಾಗಿಲ್ಲ.

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹಿರಿಯೂರು ತಾಲೂಕಿನ ವದ್ದೀಕೆರೆ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನ, “ದಕ್ಷಿಣ ಕಾಶಿ’ ಖ್ಯಾತಿಯ ತೇರುಮಲ್ಲೇಶ್ವರಸ್ವಾಮಿ, ವಾಣಿವಿಲಾಸ ಸಾಗರದ ಕಣಿವೆ ಮಾರಮ್ಮ ದೇವಿ, ಹೊಸದುರ್ಗ ತಾಲೂಕಿನ ಗವಿ ರಂಗನಾಥಸ್ವಾಮಿ, ಹಾಲುರಾಮೇಶ್ವರ,

ಕೂನಿಕೆರೆ ಆಂಜನೇಯ ಸ್ವಾಮಿ ದೇವಸ್ಥಾನ, ಹೊಳಲ್ಕೆರೆ ತಾಲೂಕಿನ ಎಚ್‌.ಡಿ.ಪುರದ ಹೊರಕೆ ರಂಗನಾಥಸ್ವಾಮಿ, ಕೊಳಾಳ್‌ ಕೆಂಚಾವಧೂತ ದೇವಸ್ಥಾನ ಸೇರಿದಂತೆ ಈ ಭಾಗದ ದೇವಸ್ಥಾನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ನೀರಿನ ಬರ ಎದುರಾಗಿದ್ದರಿಂದ ಕ್ಷೇತ್ರಗಳಿಗೆ ಬರುವ ಭಕ್ತರು ತೊಂದರೆ ಅನುಭವಿಸುತ್ತಿದ್ದಾರೆ.

ವದ್ದೀಕೆರೆ ಸಿದ್ದಪ್ಪನ ದೇವಸ್ಥಾನದಲ್ಲಿ ಮಜ್ಜನ ಬಾವಿ ಬತ್ತಿ ಹೋಗಿ ನಾಲ್ಕೈದು ತಿಂಗಳಾಗಿದ್ದು, ದೇವರ ಪೂಜೆಗೆ ಕೊಳವೆಬಾವಿ ಕೊರೆಸಲಾಗಿದೆ. ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿ ಮಜ್ಜನ ಬಾವಿ ಬತ್ತಿ ಹೋಗಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ರೈತರೊಬ್ಬರ ಖಾಸಗಿ ಕೊಳವೆಬಾವಿಯೇ ಭಕ್ತರಿಗೆ ಆಸರೆಯಾಗಿದೆ.

ಕಣಿವೆ ಮಾರಮ್ಮ ದೇವಾಲಯ ಸಮೀಪದ ಜಲ್ದಿ ಹೊಳೆ ಸಂಪೂರ್ಣವಾಗಿ ಬತ್ತಿದ್ದರಿಂದ ಚಳ್ಳಕೆರೆಗೆ ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗೆ ದೇವಸ್ಥಾನದ ಟ್ಯಾಂಕ್‌ ಸಂಪರ್ಕ ಕಲ್ಪಿಸಲಾಗಿದೆ. ಹೊಸದುರ್ಗ ಸಮೀಪದ ಸುಕ್ಷೇತ್ರ ಹಾಲುರಾಮೇಶ್ವರದಲ್ಲಿ ನೀರಿನ ಕೊರತೆ ಕಾಣಿಸಿಕೊಂಡಿದ್ದರಿಂದ ದೇವಸ್ಥಾನದ ಆವರಣದಲ್ಲೇ ನಾಲ್ಕು ಕೊಳವೆಬಾವಿ ಕೊರೆಸಲಾಗಿದೆ.

ಟಾಪ್ ನ್ಯೂಸ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಹಬ್ಬಕ್ಕಿಲ್ಲ ಹೊಸ ಮೊಬೈಲ್‌? ದೀಪಾವಳಿ ಸೇಲ್‌ಗೆ ಅಡ್ಡಿಯಾದ ಚಿಪ್‌ ಕೊರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಸಗೊಬ್ಬರ ಖಾಲಿ; ರಾಜ್ಯದಲ್ಲಿ ಹಿಂಗಾರು, ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ರಾಜ್ಯದಲ್ಲಿ ಹಿಂಗಾರು,ನೀರಾವರಿ ಬೆಳೆಗಳಿಗೆ ರಸಗೊಬ್ಬರದ ಅಭಾವ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.