ವೆಸ್ಟ್ಇಂಡೀಸ್ 168 ರನ್ನಿಗೆ ಆಲೌಟ್; ಫಾಲೋಆನ್
Team Udayavani, Aug 20, 2017, 6:30 AM IST
ಬರ್ಮಿಂಗಂ: ಆತಿಥೇಯ ಇಂಗ್ಲೆಂಡ್ ಬೌಲರ್ಗಳ ದಾಳಿಗೆ ಕುಸಿದ ವೆಸ್ಟ್ಇಂಡೀಸ್ ತಂಡವು ಹೊನಲು ಬೆಳಕಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಕೇವಲ 168 ರನ್ನಿಗೆ ಆಲೌಟಾಗಿದೆ. ಇದರಿಂದಾಗಿ ಇಂಗ್ಲೆಂಡ್ 346 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದೆ. ಭಾರೀ ಮುನ್ನಡೆ ಪಡೆದ ಕಾರಣ ವೆಸ್ಟ್ಇಂಡೀಸ್ ಫಾಲೋಆನ್ಗೆ ಗುರಿಯಾಯಿತು.
ಕುಕ್ ಅವರ 243 ರನ್ ನೆರವಿನಿಂದ ಇಂಗ್ಲೆಂಡ್ 8 ವಿಕೆಟಿಗೆ 514 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವೆಸ್ಟ್ಇಂಡೀಸ್ ತಂಡವು ಇಂಗ್ಲೆಂಡಿಗೆ ದಾಳಿಗೆ ಉತ್ತರಿಸಲು ವಿಫಲವಾಯಿತು.