ಆಪ್ತರ ಪಟ್ಟಿಯಲ್ಲಿ ಡಿಕೆಶಿ ಇದ್ದಾರೆ ಎಂದು ಕೊನೆಗೂ ಹೇಳದ ಸಿದ್ದರಾಮಯ್ಯ!
Team Udayavani, Jul 5, 2022, 12:43 PM IST
ಬೆಂಗಳೂರು: ತಮ್ಮ ಆಪ್ತರ ಪಟ್ಟಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದ್ದಾರಾ ? ಎಂಬ ಮಾಧ್ಯಮದ ಪ್ರಶ್ನೆಗೆ ಕೊನೆಗೂ ಉತ್ತರ ನೀಡದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದರು.
ರಾಜ್ಯ ಸರಕಾರದ ವಿರುದ್ಧ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯನವರಿಗೆ ಈ ” ಆಪ್ತ” ಪ್ರಶ್ನೆ ಎದುರಾಯಿತು. ನಿಮ್ಮ ಆಪ್ತ ಶಾಸಕ ಜಮೀರ್ ಅಹ್ಮದ್ ವಿರುದ್ಧ ಎಸಿಬಿ ದಾಳಿ ನಡೆಸಿ ಪಿಎಸ್ ಐ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆಯಾ? ಎಂಬ ಪ್ರಶ್ನೆಗೆ ಎಲ್ಲರೂ ನನ್ನ ಆಪ್ತರು. ಎಂದು ವೇದಿಕೆಯಲ್ಲಿ ಇದ್ದ ಎಲ್ಲರ ಹೆಸರನ್ನು ಹೇಳಿದರು. ಆದರೆ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಹೇಳಲಿಲ್ಲ.
ಇದನ್ನೂ ಓದಿ:ನಮ್ಮದು ಜಿರೋ ಟಾಲಾರೆನ್ಸ್. ಯಾವುದನ್ನು ಸಹಿಸಿಕೊಳ್ಳುವುದಿಲ್ಲ: ಸಿಎಂ ಬೊಮ್ಮಾಯಿ
ಇದಕ್ಕೆ ಸುದ್ದಿಗಾರರು ಶಿವಕುಮಾರ್ ನಿಮ್ಮ ಆಪ್ತರಲ್ಲವೇ? ಎಂದು ಎಷ್ಟು ಬಾರಿ ಹೇಳಿದರೂ ಉತ್ತರಿಸಲಿಲ್ಲ. ನೀವು ನನ್ನ ಆಪ್ತರು ಎಂದು ಪತ್ರಕರ್ತರಿಗೆ ಹೇಳಿದರೇ ವಿನಾ ಶಿವಕುಮಾರ್ ತಮ್ಮ ಆಪ್ತ ಎನ್ನಲಿಲ್ಲ. ಈ ಘಟನೆ ನಡೆಯುವಾಗ ಡಿ.ಕೆ.ಶಿವಕುಮಾರ್ ನಗುತ್ತಾ ಕುಳಿತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ: ತನ್ನದೇ ಪಡಿತರ ಚೀಟಿ ರದ್ದಿಗೆ ಮೊರೆ ಹೋದ ಪತಿ!
2022-23 ನೇ ಸಾಲಿನ ಆರಾಧನಾ ಕಾರ್ಯಕ್ರಮಕ್ಕಾಗಿ 49.74 ಕೋಟಿ ರೂಪಾಯಿಗಳ ಅನುದಾನ
ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಸಾಮರಸ್ಯ ಬೆಳೆಯಬೇಕು: ಸಿಎಂ ಬೊಮ್ಮಾಯಿ
ಸ್ವಾತಂತ್ರ ಹೋರಾಟಗಾರರ ಸಾಲಿನಲ್ಲಿ ಸಾವರ್ಕರ್ ಚಿತ್ರ ಹಾಕಿದ್ದಕ್ಕೆ ಎಸ್ ಡಿಪಿಐ ಆಕ್ರೋಶ
ಪ್ರೇಮ ಪ್ರಕರಣ; ತಿರುಗಲು ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಗೆ ಚೂರಿ ಇರಿತ: ಆರೋಪಿ ವಶಕ್ಕೆ