ಯುವತಿ ಮಾರಾಟ ಆರೋಪ: ಕಂಬಕ್ಕೆ ಕಟ್ಟಿ ಮಹಿಳೆಗೆ ಥಳಿಸಿದರು

Team Udayavani, Dec 29, 2019, 3:00 AM IST

ಬನಹಟ್ಟಿ: ಮದುವೆ ಮಾಡಿಸುವ ಆಮಿಷ ತೋರಿಸಿ ಅಪ್ರಾಪ್ತ ಯುವತಿಯನ್ನು ಮಾರಾಟ ಮಾಡಲು ಮೂರು ತಿಂಗಳಿಂದ ಮನೆಗೆ ತಂದಿಟ್ಟುಕೊಂಡಿದ್ದಾರೆಂದು ಆರೋಪಿಸಿ ಸಾರ್ವಜನಿಕರು ಮಹಿಳೆಯೊಬ್ಬಳನ್ನು ಕಂಬಕ್ಕೆ ಕಟ್ಟಿ, ಥಳಿಸಿದ ಘಟನೆ ರಬಕವಿಯಲ್ಲಿ ಶನಿವಾರ ನಡೆದಿದೆ.

ಮೂಲತಃ ಹನಗಂಡಿ ನಿವಾಸಿ ಬಸಯ್ಯ ಮಲ್ಲಯ್ಯ ಮಠಪತಿ ಎಂಬುವರು ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದು, ದಾವಣಗೆರೆಯ ಹಾಸ್ಟೆಲ್‌ನಲ್ಲಿ ಇದ್ದುಕೊಂಡು, ಪಿಯುಸಿ ಕಲಿಯುತ್ತಿದ್ದ ಅಲ್ಲಿಯ ಬಡಬಾಲಕಿಗೆ ಮದುವೆ ಮಾಡಿಸುವುದಾಗಿ ಮನವೊಲಿಸಿ ಕರೆದುಕೊಂಡು ಬಂದಿದ್ದ. ಮಾರಾಟ ಮಾಡಲು ತಂತ್ರ ರೂಪಿಸಿದ್ದನೆಂದು ಆಕೆ ಆರೋಪಿಸಿದ್ದಾಳೆ.

ಬಾಲಕಿಯನ್ನು ಮೂರು ತಿಂಗಳ ಹಿಂದೆ ರಬಕವಿಗೆ ಕರೆದುಕೊಂಡು ಬಂದಾಗ ನೆರೆ ಹೊರೆಯವರಿಗೆ ಅಕ್ಕನ ಮಗಳೆಂದು ನಂಬಿಸಿದ್ದು, ಒಂದು ಸಲ ಗುಜರಾತ್‌, ಇನ್ನೊಂದು ಸಲ ರಾಜಸ್ಥಾನಕ್ಕೆ ಮಾರಾಟ ಮಾಡಲು ಕರೆದುಕೊಂಡು ಹೋಗಿ ವಾಪಸ್ಸಾಗಿದ್ದ. ಒಂದು ಕಡೆ ಮಾರಾಟ ಮಾಡುವ ಒಪ್ಪಂದವಾಗಿದ್ದು, ಐದು ಲಕ್ಷ ರೂ.ಮುಂಗಡ ಹಣವನ್ನು ಬಸಯ್ಯ ಪಡೆದಿದ್ದಾಗಿ ಬಾಲಕಿ ಆರೋಪಿಸಿದ್ದಾಳೆ.

ಜನವರಿ 1ರ ನಂತರ ಅಲ್ಲಿ ಕಳುಹಿಸುವ ಉದ್ದೇಶವಿದ್ದು, ಡಿ.27ರ ರಾತ್ರಿ ಬಸಯ್ಯ ಮತ್ತು ಆತನ ಪತ್ನಿ ಬಾಲಕಿಗೆ ದೈಹಿಕ ಕಿರುಕುಳ ನೀಡಲಾರಂಭಿಸಿದರು. ಇದನ್ನು ಸಹಿಸದೇ ಮನೆಯ ಹೊರಗಡೆ ಬಂದಿದ್ದರಿಂದ ವಿಷಯ ಬಹಿರಂಗಗೊಂಡಿದೆ. ಸುತ್ತಲಿನವರು ರಾತ್ರಿಯಿಡೀ ಅವಳಿಗೆ ರಕ್ಷಣೆ ನೀಡಿ ಬೆಳಗ್ಗೆ ಪೊಲೀಸ್‌ ವಶಕ್ಕೆ ಒಪ್ಪಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ