ಡೆನಿಸ್‌, ನಾದಿಯಾಗೆ ನೊಬೆಲ್‌ ಶಾಂತಿ ಪ್ರಶಸ್ತಿ


Team Udayavani, Oct 6, 2018, 8:43 AM IST

f-7.jpg

ಒಸ್ಲೊ: ಅತ್ಯಾಚಾರ, ಮಹಿಳೆಯರ ಹಕ್ಕುಗಳು ಹಾಗೂ ಯುದ್ಧ-ದ್ವೇಷಗಳ ನೆರಳಿನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡುತ್ತಿರುವ ಕಾಂಗೋ ಗಣರಾಜ್ಯದ ವೈದ್ಯ ಡಾ| ಡೆನಿಸ್‌ ಮುಕ್ವೆಜ್‌ (63) ಹಾಗೂ ಇರಾಕ್‌ನ ಯಾಜಿದಿ ಸಮುದಾಯದ ಹೋರಾಟಗಾರ್ತಿ ನಾದಿಯಾ ಮುರಾದ್‌ (25) ಅವರಿಗೆ 2018ರ ನೊಬೆಲ್‌ ಶಾಂತಿ ಪುರಸ್ಕಾರ ಸಂದಿದೆ. 

ಕಾಂಗೋ ಗಣರಾಜ್ಯದಲ್ಲಿ “ಡಾಕ್ಟರ್‌ ಮಿರಾಕಲ್‌’ ಎಂದೇ ಖ್ಯಾತರಾಗಿರುವ ಡಾ. ಡೆನ್ನಿಸ್‌ ಮುಕ್ವೆಗೆ ಅವರು, ತಮ್ಮ ತಾಯ್ನಾಡಿನಲ್ಲಿ ಆಂತರಿಕ ಗಲಭೆಗಳ ಹೆಸರಿನಲ್ಲಿ ಅತ್ಯಾಚಾರ ಕ್ಕೊಳಗಾದ ಸಾವಿರಾರು ಮಹಿಳೆಯರಿಗೆ ತಾವು ಸ್ಥಾಪಿಸಿರುವ “ಪಾಂಝಿ’ ಆಸ್ಪತ್ರೆಯಲ್ಲಿ ಪುನರ್ಜನ್ಮ ನೀಡಿದ್ದಾರೆ. ಈವರೆಗೆ ಸುಮಾರು 30,000ಕ್ಕೂ ಹೆಚ್ಚು ಸಂತ್ರಸ್ತೆಯರು ದೈಹಿಕ ಹಾಗೂ ಮಾನಸಿಕ ಆಘಾತಗಳಿಂದ ಹೊರ ಬರಲು ನೆರವಾಗಿದ್ದಾರೆ. ಅತ್ಯಾಚಾರವನ್ನು “ಸಮೂಹನಾಶದ ಒಂದು ಅಸ್ತ್ರ’ ಎಂದೇ ಪರಿಗಣಿಸಿರುವ ಅವರು, 2014ರಲ್ಲಿ ನಡೆದಿದ್ದ ಅವರ ಹತ್ಯೆ ಯತ್ನದಿಂದ ಪಾರಾದರೂ ಜೀವದ ಹಂಗು ತೊರೆದು ಸಂತ್ರಸ್ತೆಯರ ಆರೈಕೆಯಲ್ಲಿ ಜೀವನ ಸವೆಸುತ್ತಿದ್ದಾರೆ.

ಐಸಿಸ್‌ ಪಂಜರದಲ್ಲಿದ್ದ ನಾದಿಯಾ
ಇರಾಕ್‌ನ “ಯಾಜಿದಿ’ ಸಮುದಾಯದಲ್ಲಿ ಜನಿಸಿದ ನಾದಿಯಾ ಮುರಾದ್‌ಗೆ 19 ವರ್ಷವಿದ್ದಾಗಲೇ ಐಸಿಸ್‌ ಉಗ್ರರು ಅವರನ್ನು ಅಪಹರಿಸಿದ್ದರು. 3 ತಿಂಗಳ ಕಾಲ ಬಂಧಿಯಾಗಿದ್ದ ಅವರನ್ನು ಲೈಂಗಿಕ ಗುಲಾಮಳನ್ನಾಗಿ ಬಳಸಿಕೊಳ್ಳಲಾಗಿತ್ತಲ್ಲದೆ, ಉಗ್ರರ ತಂಡಗಳ ನಡುವೆಯೇ ಅವರು ಅನೇಕ ಬಾರಿ ಮಾರಾಟವಾಗಿದ್ದರು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು, ಚಿತ್ರಹಿಂಸೆ ಅನುಭವಿಸಿದ್ದರು. 2014ರಲ್ಲಿ ಐಸಿಸ್‌ ಪಂಜರದಿಂದ ತಪ್ಪಿಸಿಕೊಂಡು ಬಂದ ನಂತರ, ಮಾನವ ಕಳ್ಳಸಾಗಣೆ ಹಾಗೂ ಅತ್ಯಾಚಾರ ವಿರುದ್ಧ  ಹೋರಾಟಗಾರ್ತಿಯಾಗಿ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಒಟ್ಟಿನಲ್ಲಿ ಸಂಘರ್ಷಪೀಡಿತ ಪ್ರದೇಶಗಳಲ್ಲಿ ಲೈಂಗಿಕ ದೌರ್ಜನ್ಯಗಳನ್ನು ಅಸ್ತ್ರವಾಗಿ ಬಳಸುವುದರ ವಿರುದ್ಧ ಹೋರಾಡಿದ ಇಬ್ಬರಿಗೆ ಈ ಬಾರಿಯ ಶಾಂತಿ ನೊಬೆಲ್‌ ಸಂದಿದೆ. 

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.