ಬ್ರಿಟನ್ನಿಂದ 23 ರಷ್ಯಾ ರಾಜತಾಂತ್ರಿಕರ ವಜಾ
Team Udayavani, Mar 15, 2018, 8:15 AM IST
ಲಂಡನ್: ಬ್ರಿಟನ್ನಲ್ಲಿ ನೆಲೆಸಿರುವ ರಷ್ಯಾದ ಮಾಜಿ ಗೂಢಚಾರಿ ಹಾಗೂ ಅವರ ಪುತ್ರಿ ಮೇಲೆ ಇತ್ತೀಚೆಗೆ ನಡೆದಿರುವ ಹತ್ಯೆ ಪ್ರಯತ್ನದ ಹಿಂದೆ ರಷ್ಯಾ ಸರ್ಕಾರದ ಕೈವಾಡವಿದೆಯೆಂದು ಆರೋಪಿಸಿರುವ ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಈ ಕೃತ್ಯಕ್ಕೆ ಪ್ರತಿಯಾಗಿ ಬ್ರಿಟನ್ನಲ್ಲಿ ಸೇವೆ ಸಲ್ಲಿಸುತ್ತಿರುವ ರಷ್ಯಾದ 23 ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಉಚ್ಛಾಟಿಸಿ, ರಷ್ಯಾದೊಂದಿಗಿನ ಎಲ್ಲಾ ರೀತಿಯ ರಾಜತಾಂತ್ರಿಕ ಮಾತುಕತೆಗೆ ಸದ್ಯದ ಮಟ್ಟಿಗೆ ಪೂರ್ಣವಿರಾಮ ಹಾಕಿರುವುದಾಗಿ ಘೋಷಿಸಿದ್ದಾರೆ.
ಕಳೆದ ವಾರ, ಮಾಜಿ ಗೂಢಚಾರಿ ಸಜೈì ಸ್ಕ್ರಿಪಾಲ್ (66), ಅವರ ಮಗಳಾದ ಯುಲಿನಾ (33) ಅವರ ಹಾಗೂ ಬ್ರಿಟನ್ನ ಭದ್ರತಾ ಸಿಬ್ಬಂದಿ ಸಂಶಯಾಸ್ಪದವಾಗಿ ಅಸುನೀಗಿದ್ದು ಪತ್ತೆಯಾಗಿತ್ತು. ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಿಷ ಪ್ರಯೋಗವಾಗಿರುವುದು ದೃಢಪಟ್ಟಿತ್ತು. ಇದಕ್ಕೆ ರಷ್ಯಾವೇ ಕಾರಣ ಎಂದು ಬ್ರಿಟನ್ ಆರೋಪಿಸಿತ್ತು. ಆದರೆ ಅದರನ್ನು ರಷ್ಯಾ ತಿರಸ್ಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!
Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
India-born ಸುನೀತಾ ವಿಲಿಯಮ್ಸ್ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!
China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?