Actor Lee Sun-kyun: ಕಾರಿನಲ್ಲಿ ಶವವಾಗಿ ಪತ್ತೆಯಾದ ʼಆಸ್ಕರ್‌ʼ ವಿಜೇತ ಸಿನಿಮಾದ ಖ್ಯಾತ ನಟ


Team Udayavani, Dec 27, 2023, 3:35 PM IST

tdy-19

ಸಿಯೋಲ್:‌ ದಕ್ಷಿಣ ಕೊರಿಯಾದ ಖ್ಯಾತ ನಟ, ಆಸ್ಕರ್‌ ವಿಜೇತ ಸಿನಿಮಾದಲ್ಲಿ ನಟಿಸಿದ್ದ ಲೀ ಸನ್‌ ಕ್ಯೂನ್‌ ಬುಧವಾರ ಮುಂಜಾನೆ(ಡಿ.27 ರಂದು) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಸಿಯೋಲ್‌ ನಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಗಮನಸಿ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಇದು ಖ್ಯಾತ ನಟ ಲೀ ಸನ್‌ ಕ್ಯೂನ್‌ ಎಂದು ಗೊತ್ತಾಗಿದೆ.

ತನ್ನ ಪತಿ ಆತ್ಮಹತ್ಯೆಯ ಟಿಪ್ಪಣಿಯನ್ನು ಹೋಲುವ ಪತ್ರವೊಂದನ್ನು ಬರೆದು ಮನೆ ಬಿಟ್ಟು ಹೋಗಿರುವ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲೀ ಸನ್‌ ಕ್ಯೂನ್‌ ಅವರನ್ನು ಹುಡುಕಾಡುತ್ತಿದ್ದರು. ಇದೇ ವೇಳೆ ಪೊಲೀಸರಿಗೆ ಕಾರಿನಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಕರೆ ಬಂದಿದೆ.

ಕಳೆದ ಅಕ್ಟೋಬರ್‌ ನಲ್ಲಿ ಮಹಿಳೆಯೊಬ್ಬರು ಲೀ ಸನ್‌ ಕ್ಯೂನ್‌ ಅವರ ಮೇಲೆ ಡ್ರಗ್ಸ್‌ ಸೇವನೆಯ ಆರೋಪವನ್ನು ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದನ್ನು ನಟ ನಿರಾಕರಿಸಿದ್ದರು. ಇತ್ತೀಚೆಗ ನಾರ್ಕೋಟಿಕ್ಸ್‌ ತಜ್ಞರು ಮಂಪರು ಪರೀಕ್ಷೆ ನಡೆಸಿದ್ದರು, ಇದರಲ್ಲಿ ನಟನ ವರದಿ ನೆಗೆಟಿವ್‌ ಬಂದಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಅವರು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

ಆಸ್ಕರ್‌ ಸಿನಿಮಾದಲ್ಲಿ ನಟಿಸಿದ್ದ ಲೀ ಸನ್‌ ಕ್ಯೂನ್:‌  2001 ರಲ್ಲಿ ಲೀ ʼಲವರ್ಸ್‌ʼ ಎನ್ನುವ ಟಿವಿ ಶೋ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ದಶಕಗಳಿಂದ ವೆಬ್‌ ಸಿರೀಸ್‌ ಹಾಗೂ ಸಿನಿಮಾದಲ್ಲಿ ನಟಿಸಿದ್ದ ಅವರು 2019 ರಲ್ಲಿʼಪ್ಯಾರಸೈಟ್‌ʼ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಗ್ರಹಣ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ʼಆಸ್ಕರ್‌ʼ ಗೆದ್ದುಕೊಂಡಿತು. ಅದೇ ಚಿತ್ರದಲ್ಲಿನ ಪಾತ್ರಕ್ಕಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದರು.

ಕಳೆದ ವರ್ಷ ವೈಜ್ಞಾನಿಕ ಥ್ರಿಲ್ಲರ್ ಡಾ. ಬ್ರೈನ್‌ನಲ್ಲಿನ ಅವರ ಅಭಿನಯಕ್ಕಾಗಿ ಅವರು ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ಅತ್ಯುತ್ತಮ ನಟರಾಗಿ ನಾಮನಿರ್ದೇಶನಗೊಂಡಿದ್ದರು.

ʼಕಾಫಿ ಪ್ರಿನ್ಸ್ʼ (2007), ಮತ್ತು ಮೆಡಿಕಲ್‌ ಡ್ರಾಮಾ ʼಬಿಹೈಂಡ್ ದಿ ವೈಟ್ ಟವರ್‌ʼ, ʼಪಾಸ್ಟಾʼ (2010) ಮತ್ತು ʼಮೈ ಮಿಸ್ಟರ್ʼ (2018) ಮುಂತಾದ ಸಿನಿಮಾದಲ್ಲಿ ನಟಿಸಿ ಹೆಸರು ಗಳಿಸಿದ್ದರು.

 

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ISREL

Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.