ಎಂ ಜೆ ಅಕ್‌ಬರ್‌ ನನ್ನನ್ನು ರೇಪ್‌ ಮಾಡಿದ್ದರು: ಅಮೆರಿಕ ಪತ್ರಕರ್ತೆ

Team Udayavani, Nov 2, 2018, 11:52 AM IST

mj-akbar-700.jpg

ವಾಷಿಂಗ್ಟನ್‌ : ”ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸಂಪಾದಕ ಎಂ ಜೆ ಅಕ್‌ಬರ್‌ ಅವರು ವರ್ಷಗಳ ಹಿಂದೆ ಏಶ್ಯನ್‌ ಏಜ್‌ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು” ಎಂದು ಆರೋಪಿಸಿ ಭಾರತೀಯ ಮೂಲದ ಅಮೆರಿಕನ್‌ ಪತ್ರಕರ್ತೆ, ವಾಷಿಂಗ್ಟನ್‌ ಪೋಸ್ಟ್‌ ನಲ್ಲಿ ಬರೆದಿರುವ ಬ್ಲಾಗ್‌ನಲ್ಲಿ ಆರೋಪಿಸಿದ್ದಾರೆ. ಅಕ್‌ಬರ್‌ ಅವರ ವಕೀಲ ಈ ಆರೋಪಗಳು ಸುಳ್ಳೆಂದು ತಿರಸ್ಕರಿಸಿರುವುದಾಗಿ ವರದಿಯಾಗಿದೆ.

”ಅಕ್‌ಬರ್‌ ವಿರುದ್ಧ ಈಚೆಗೆ ಬೇರೊಬ್ಬ ಮಹಿಳೆ ಮೀ ಟೂ ಅಭಿಯಾನದಡಿ  ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು; ಅದನ್ನು ಕೇಳಿ ನನ್ನ ಮನಸ್ಸು ಹಿಂದಕ್ಕೋಡಿತು. ನಾನು ಏಶ್ಯನ್‌ ಏಜ್‌ ಪತ್ರಿಕೆಯಲ್ಲಿ ದುಡಿಯುತ್ತಿದ್ದಾಗ ನಾನು 22 ವರ್ಷ ವಯಸ್ಸಿನವಳಾಗಿದ್ದೆ. ಆಗ ಅಲ್ಲಿ ಹೆಚ್ಚಿನ ನೌಕರರೆಲ್ಲ ಮಹಿಳೆಯರೇ ಆಗಿದ್ದರು” ಎಂದು ಆಕೆ ತನ್ನ ಬ್ಲಾಗ್‌ ನಲ್ಲಿ ಬರೆದಿದ್ದಾರೆ. 

ಮುಂದುವರಿದು ಆಕೆ, “ಅಕ್‌ಬರ್‌ ಕೈಕೆಳಗೆ ಹೊಸದಿಲ್ಲಿಯಲ್ಲಿ ದುಡಿಯುವುದು ನಮಗೆಲ್ಲ ಭಾರೀ ಪ್ರತಿಷ್ಠೆಯ ಅವಕಾಶವಾಗಿತ್ತು. ಎರಡು ಅತ್ಯುತ್ತಮ ಪುಸ್ತಕಗಳ ಲೇಖಕನಾಗಿ, ಪ್ರಮುಖ ಸಂಪಾದಕನಾಗಿ ಅಕ್‌ಬರ್‌ ತುಂಬ ಖ್ಯಾತರಾಗಿದ್ದರು. ಆಗ ಅವರು 40ರ ಹರೆಯದವರಾಗಿದ್ದರು. ನಮ್ಮ ತಪ್ಪುಗಳನ್ನು ತಿದ್ದುತ್ತಾ ನಮ್ಮನ್ನು ಏರಿದ ಧ್ವನಿಯಲ್ಲಿ ಗದರಿಸುತ್ತಿದ್ದರು, ಬೈಯುತ್ತಿದ್ದರು; ನಾವು ಅವರ ನಿರೀಕ್ಷೆಯ ಮಟ್ಟದಲ್ಲಿ ಇಲ್ಲವೆಂದು ಹೀಯಾಳಿಸುತ್ತಿದ್ದರು….” 

”…1994ರಲ್ಲಿ ನಾನು ಒಪ್‌-ಎಡ್‌ ಪುಟದ ಸಂಪಾದಕಿಯಾಗಿದ್ದಾಗ ಒಮ್ಮೆ ನಾನು ಸಿದ್ಧಪಡಿಸಿದ್ದ ಪುಟವನ್ನು ಅವರಿಗೆ ತೋರಿಸಲು ಅವರ ಕೋಣೆಗೆ ಹೋಗಿದ್ದೆ. ನನ್ನ ಕೆಲಸವನ್ನು ಮೆಚ್ಚಿಕೊಂಡ ಅವರು ಇದ್ದಕ್ಕಿದ್ದಂತೆಯೇ ನನ್ನ ಅಪ್ಪಿಕೊಂಡು ನನಗೆ ಬಲವಂತದ ಕಿಸ್‌ ನೀಡಿದರು. ಈ ಕ್ಷಣಾರ್ಧದ ಲೈಂಗಿಕ ದಾಳಿಯಿಂದ ತತ್ತರಿಸಿದ ನಾನು ಗೊಂದಲದ ಗೂಡಾಗಿ ಕೋಣೆಯಿಂದ ಹೊರಬಂದೆ; ಆಗ ನನಗೆ 23 ವರ್ಷ ವಯಸ್ಸಾಗಿತ್ತು….”

”…. ಅದಾಗಿ ಕೆಲವು ತಿಂಗಳ ಬಳಿಕ ತಾಜ್‌ ಹೊಟೇಲ್‌ನಲ್ಲಿ ಮತ್ತೆ ಇದೇ ರೀತಿಯ ದಾಳಿಯನ್ನು ಅಕ್‌ಬರ್‌ ನನ್ನ ಮೇಲೆ ನಡೆಸಲು ಮುಂದಾದರು; ನಾನು ವಸ್ತುತಃ ಹೋರಾಡಿ ಹೊರ ಬಂದೆ; ಆತ ನನ್ನ ಮುಖದ ಪರಚು ಗಾಯ ಮಾಡಿದರು. ಇದೇ ರೀತಿ ಪುನಃ ಪ್ರತಿರೋಧಿಸಿದರೆ ನನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಅಕ್‌ಬರ್‌ ನನಗೆ ಬೆದರಿಕೆ ಒಡ್ಡಿದರು” ಎಂದು ಮಹಿಳೆ ತನ್ನ ಬ್ಲಾಗ್‌ನಲ್ಲಿ ಬರೆದಿದ್ದಾರೆ. 

ಆದರೆ ಈಕೆಯ ಆರೋಪಗಳನ್ನು ಅಕ್‌ಬರ್‌ ಅವರ ವಕೀಲರು ಸಾರಾಸಗಟು ಸುಳ್ಳೆಂದು ಹೇಳಿರುವುದಾಗಿ ವಾಷಿಂಗ್‌ಟನ್‌ ಪೋಸ್ಟ್‌ ವರದಿ ಮಾಡಿದೆ. 

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasdsad

G7 Summit; ಮೆಲೋನಿ-ಬ್ರಿಟನ್‌ ಪಿಎಂ ಸುನಕ್‌ ಆಲಿಂಗನಕ್ಕೆ ನೆಟ್ಟಿಗರಿಂದ ಭಾರೀ ವ್ಯಂಗ್ಯ

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-asasas

G7 Summit: ಇಟಲಿಯಲ್ಲಿ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ಪ್ರಧಾನಿ ಮೋದಿ

Alien

Alien: ನಮ್ಮ ನಡುವೆಯೇ ಅನ್ಯಗ್ರಹ ಜೀವಿಗಳ ವಾಸ: ಹೀಗೊಂದು ವರದಿ!

1-PK

Enemy ಎನ್ನುತ್ತಲೇ ಭಾರತವನ್ನು ಹೊಗಳಿದ ಪಾಕಿಸ್ಥಾನದ ರಾಜಕೀಯ ನಾಯಕ!

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.