POKಯಲ್ಲಿ 3 ಶಂಕಿತ ರಾ ಏಜಂಟರನ್ನು ಬಂಧಿಸಿದ್ದೇವೆ: ಪಾಕ್‌ ಪೊಲೀಸರು

Team Udayavani, Apr 15, 2017, 11:33 AM IST

Pak arrests 3 Raw agents-700.jpg

ಇಸ್ಲಾಮಾಬಾದ್‌ : ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್‌ ಜಾಧವ್‌ಗೆ ಪಾಕಿಸ್ಥಾನದ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವ ವಿಷಯದಲ್ಲಿನ ಬಿಕ್ಕಟ್ಟು – ಉದ್ವಿಗ್ನತೆ ಮುಂದುವರಿದಿರುವಂತೆಯೇ, ಪಾಕಿಸ್ಥಾನದ ಆಜಾದ್‌ ಜಮ್ಮು ಕಾಶ್ಮೀರ (ಎಜೆಕೆ) ಪೊಲೀಸರು ತಾವು ಮೂವರು ಶಂಕಿತ ರಾ (ಭಾರತೀಯ ಬೇಹು ಸಂಸ್ಥೆ) ಏಜಂಟರನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದಾರೆ. 

ಡಾನ್‌ ಸುದ್ದಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಈ ಶಂಕಿತ ರಾ ಏಜಂಟರು ಪೊಲೀಸ್‌ ಠಾಣೆಯೊಂದರ ಬಾಂಬಿಂಗ್‌ ಸೇರಿದಂತೆ ಹಲವು ಸಮಾಜ ವಿರೋಧಿ ಹಾಗೂ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. 

ಶಂಕಿತ ರಾ ಏಜಂಟರನ್ನು ಪಾಕ್‌ ಪೊಲೀಸರು ಮೊಹಮ್ಮದ್‌ ಖಲೀಲ್‌, ಇಮಿ¤ಯಾಜ್‌ ಮತ್ತು ರಶೀದ್‌ ಎಂದು ಗುರುತಿಸಿದ್ದು ಇವರೆಲ್ಲರೂ ಅಬ್ಟಾಸ್‌ಪುರದಲ್ಲಿ ತಾರೋತಿ ಗ್ರಾಮದ ವಾಸಿಗಳೆಂದು ಹೇಳಿದ್ದಾರೆ. 

ಮುಖ್ಯ ಶಂಕಿತ ಖಲೀಲ್‌ 2014ರ ನವೆಂಬರ್‌ನಲ್ಲಿ ಆಜಾದ್‌ ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದಾನೆ. ಬಂದಿ ಚೇಚಿಯಾನ್‌ ಗ್ರಾಮದಲ್ಲಿನ ತನ್ನ ಸಂಬಂಧಿಕರನ್ನು ಕಾಣಲು ಇಲ್ಲಿಗೆ ಬಂದಿದ್ದ ಆತ ಅಲ್ಲಿ ರಾ ಅಧಿಕಾರಿಗಳ ಸಂಪರ್ಕಕ್ಕೆ ಬಂದಿದ್ದಾನೆ. ಅವರು ಆತನನ್ನು ತಮಗಾಗಿ ದುಡಿಯುವಂತೆ ಆಮಿಷ ಒಡ್ಡಿದ್ದಾರೆ ಎಂದು ಪೂಂಚ್‌ನ ಡೆಪ್ಯುಟಿ ಪೊಲೀಸ್‌ ಸುಪರಿಂಟೆಂಡೆಂಟ್‌ ಸಾಜಿದ್‌ ತಿಳಿಸಿದ್ದಾರೆ. 

ಡಿಎಸ್‌ಪಿ ಇಮ್ರಾನ್‌ ತಿಳಿಸಿರುವ ಪ್ರಕಾರ ಖಲೀಲ್‌ ಸಾಮಾನ್ಯವಾಗಿ ತನ್ನೊಂದಿಗೆ ಸಿಗರೇಟು ಮತ್ತು ಮೊಬೈಲ್‌ ಫೋನ್‌ ಮೆಮರಿ  ಕಾರ್ಡ್‌ಗಳನ್ನು ಒಯ್ಯುತ್ತಾನೆ. ಜತೆಗೆ ಈತನ ಬಳಿಕ ದೇವಬಂದಿ ಇಸ್ಲಾಮಿಕ್‌ ವಿಚಾರಧಾರೆಯ ಮಸೀದಿಗಳು, ಸೇತುವೆಗಳು, ಸೇನೆ ಮತ್ತು ಪೊಲೀಸ್‌ ಘಟಕಗಳ ಚಿತ್ರಗಳನ್ನು ಆತ ಹೊಂದಿರುತ್ತಾನೆ. ಆತನು ತನ್ನ ಬಳಿ ಇರುವ ಮತ್ತು ತನ್ನ ಹೆಸರಲ್ಲಿ ನೋಂದಾವಣೆ ಹೊಂದಿರುವ ಎರಡು ಕ್ರಿಯಾಶೀಲ ಸಿಮ್‌ ಕಾರ್ಡ್‌ಗಳನ್ನು ಭಾರತೀಯ ಅಧಿಕಾರಿಗಳಿಗೆ ಕೊಟ್ಟದ್ದಾನೆ.

ಈ ಶಂಕಿತ ರಾ ಏಜಂಟ್‌ಗಳು 2016ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಅಬ್ಟಾಸ್‌ಪುರ ಬ್ಲಾಸ್ಟ್‌ ನಲ್ಲಿ ಭಾಗಿಯಾಗಿದ್ದಾರೆ. ಭಾರತೀಯ ರಾ ಅಧಿಕಾರಿಗಳು ಈ ಶಂಕಿತರಿಗೆ ಸಂಯುಕ್ತ ಮಿಲಿಟರಿ ಆಸ್ಪತ್ರೆ ಮತ್ತು ಸಿಪಿಇಸಿ ಪ್ರಾಜೆಕ್ಟ್ಗಳನ್ನು, ಚೀನದ ಇಂಜಿನಿಯರ್‌ಗಳನ್ನು ಹಾಗೂ ಇತರ ಕೆಲವು ಸೂಕ್ಷ್ಮ ಮೂಲ ಸೌಕರ್ಯ ಘಟಕಗಳನ್ನು  ಗುರಿ ಇರಿಸಿ ಉಗ್ರ ದಾಳಿ ನಡೆಸುವ ಹೊಣೆಗಾರಿಕೆಯನ್ನು ಕೊಟ್ಟಿದ್ದಾರೆ ಎಂದು ಪೂಂಚ್‌ ವಿಭಾಗದ ಪೊಲೀಸ್‌ ಡಿಐಜಿ ಚೌಧರಿ ಸಜ್ಜದ್‌ ಅವರನ್ನು ಉಲ್ಲೇಖೀಸಿ ದುನ್ಯಾನೂಸ್‌ ವರದಿ ಮಾಡಿದೆ. 

ಈ ಶಂಕಿತರು  ಭಾರತೀಯ ಸೇನಾಧಿಕಾರಿಗಳನ್ನು ಹಾಗಿಊ ರಾ ಅಧಿಕಾರಿಗಳನ್ನು ಕಾಣಲು ಹಲವು ಬಾರಿ ನೈಜ ಗಡಿ ನಿಯಂತ್ರಣ ರೇಖೆ ದಾಟಿದ್ದಾರೆ. ಈ ಶಂಕಿತರು ಮೇಜರ್‌ ರಣ್‌ಜಿತ್‌, ಮೇಜರ್‌ ಸುಲ್ತಾನ್‌ ಮತ್ತು ಸುಬೇದಾರ್‌ ಸಂದೀಪ್‌ ಅವರ ಸಂಪರ್ಕದಲ್ಲಿ ಇದ್ದರು ಎಂದು ದುನ್ಯಾನ್ಯೂಸ್‌ ವರದಿ ಮಾಡಿದೆ. 

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

Israel-Iran ಅಣುಯುದ್ಧ? ಇರಾನ್‌ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ISREL

Iran ವಿರುದ್ಧ ಪ್ರತೀಕಾರ ಬೇಡ: ಇಸ್ರೇಲ್‌ ಮೇಲೆ ಹಲವು ರಾಷ್ಟ್ರಗಳ ಒತ್ತಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.