ಏಂಜಲಾ ಮರ್ಕೆಲ್ ನಾಲ್ಕನೇ ಅವಧಿಗೆ ಜರ್ಮನ್ ಚ್ಯಾನ್ಸಲರ್
Team Udayavani, Mar 14, 2018, 4:06 PM IST
ಬರ್ಲಿನ್ : ಜರ್ಮನಿಯ ಸಂಸತ್ತು ಏಂಜಲಾ ಮರ್ಕೆಲ್ ಅವರನ್ನು ನಾಲ್ಕನೇ ಅವಧಿಗೆ ದೇಶದ ಚ್ಯಾನ್ಸಲರ್ ಆಗಿ ಚುನಾಯಿಸಿದೆ. ಈ ಮೂಲಕ ಅದು ಯುರೋಪಿನ ಅತ್ಯಂತ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯ ಆರು ತಿಂಗಳ ರಾಜಕೀಯ ಪಲ್ಲಟವನ್ನು ಕೊನಗೊಳಿಸಿದೆ.
ಜರ್ಮನಿಯ ಸಂಸದರು 364-315 ಮತಗಳ ಅಂತರದಲ್ಲಿ ಮರ್ಕೆಲ್ ಅವರನ್ನು ಚುನಾಯಿಸಿದರು. ಮರ್ಕೆಲ್ ಅವರು ಕಳೆದ 2005ರಿಂದ ದೇಶದ ನಾಯಕಿಯಾಗಿದ್ದು ಅವಿರೋಧವಾಗಿ ಮರು ಆಯ್ಕೆಯಾಗುತ್ತಾ ಬಂದಿದ್ದಾರೆ.
ಮರ್ಕೆಲ್ ಅವರ ಕ್ರಿಶ್ಚಿಯನ್ ಡೆಮೋಕ್ರಾಟಿಕ್ ಯೂನಿಯನ್, ಅದರ ಬವೇರಿಯ ಓನ್ಲಿ ಸಹೋದರ ಪಕ್ಷ, ದಿ ಕ್ರಿಶ್ಚಿಯನ್ ಸೋಶಿಯಲ್ ಯೂನಿಯನ್ ಮತ್ತು ಸೆಂಟರ್ ಲೆಫ್ಟ್ ಸೋಶಿಯಲ್ ಡೆಮೋಕ್ರಾಟ್ಸ್ ಒಳಗೊಂಡ ಮೈತ್ರಿ ಕೂಟವು 709 ಸದಸ್ಯ ಬಲದ ಸಂಸತ್ತಿನಲ್ಲಿ 399 ಸ್ಥಾನಗಳನ್ನು ಹೊಂದಿದೆ.
ಮರ್ಕೆಲ್ ಅವರು ಈಗಿನ್ನು ಬಹುವಾಗಿ ಬದಲಾಗಿರುವ ಹೊಸ ಸಚಿವ ಸಂಪುಟದ ಮುಖ್ಯಸ್ಥೆಯಾಗಿರುತ್ತಾರೆ.