Moscow; ರಷ್ಯಾದಲ್ಲಿ ಉಗ್ರರ ಅಟ್ಟಹಾಸ: ಕನಿಷ್ಠ 40 ಮಂದಿ ಬಲಿ
ಭೀಕರ ಭಯೋತ್ಪಾದಕ ದಾಳಿಗೆ ಹೊತ್ತಿ ಉರಿದ ಕಟ್ಟಡ, ಹಲವಾರು ಮಂದಿಗೆ ಗಾಯ
Team Udayavani, Mar 23, 2024, 6:45 AM IST
ಮಾಸ್ಕೋ: ಮಾಸ್ಕೋದ ಹೊರವಲಯದಲ್ಲಿರುವ ದೊಡ್ಡ ಕನ್ಸರ್ಟ್ ಹಾಲ್ನಲ್ಲಿ ಶುಕ್ರವಾರ ಬಂದೂಕುಧಾರಿಗಳು ಗುಂಡು ಹಾರಿಸಿ ಸ್ಫೋಟಕಗಳನ್ನು ಸ್ಫೋಟಿಸಿದ ಕಾರಣ ಕನಿಷ್ಠ 40 ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ಇದು ಎಂದು ವರದಿಯಾಗಿದೆ. ಕನ್ಸರ್ಟ್ ಹಾಲ್ ದಾಳಿಯಿ ವೀಡಿಯೋಗಳು ಹೊರಹೊಮ್ಮುತ್ತಿದ್ದಂತೆ ಕ್ರೋಕಸ್ ಸಿಟಿ ಹಾಲ್ನಲ್ಲಿ ಭಾರೀ ಬೆಂಕಿ ಮತ್ತು ದಟ್ಟ ಹೊಗೆಯನ್ನು ಫೋಟೋಗಳು ತೋರಿಸಿವೆ.
ಗಾಬರಿಗೊಂಡ ಜನರು ಪ್ರಾಣಾಪಾಯದಿಂದ ಓಡಿಹೋಗುತ್ತಿದ್ದ ವೇಳೆ ಕನಿಷ್ಠ ನಾಲ್ವರು ಬಂದೂಕುಧಾರಿಗಳು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.
ವೀಡಿಯೋವೊಂದರಲ್ಲಿ, ರೈಫಲ್ಗಳನ್ನು ಹಿಡಿದಿದ್ದ ಮೂವರು ಉಗ್ರರು ಕನ್ಸರ್ಟ್ ಹಾಲ್ನ ಲಾಬಿಯಲ್ಲಿ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇತರ ವೀಡಿಯೋಗಳಲ್ಲಿ ಸ್ಫೋಟದ ಶಬ್ದಗಳು ಕೇಳಿಬರುವುದರಿಂದ ಸ್ಫೋಟಗಳು ಸಂಭವಿಸಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು